ಶುಲ್ಕದ ವಿಚಾರಕ್ಕೆ ಖಾಸಗಿ ಶಾಲೆ, ಪೋಷಕರ ನಡುವೆ ಫೈಟ್! ಬೆಂಗಳೂರಿನಲ್ಲಿ ಮಕ್ಕಳ ಜೊತೆ ಪೋಷಕರ ಪ್ರತಿಭಟನೆ

| Updated By: sandhya thejappa

Updated on: May 11, 2022 | 3:22 PM

ಪ್ರತಿಭಟನೆಯಲ್ಲಿ ಪೋಷಕರು ಮತ್ತು ಮಕ್ಕಳು ಕಣ್ಣೀರು ಹಾಕಿದ್ದಾರೆ. ಶಾಲೆ ವಿರುದ್ಧ ಕಿಡಿಕಾರಿರುವ ಪೋಷಕರು, ಮಕ್ಕಳನ್ನು ಹೀಯಾಳಿಸುವುದು, ಹೋಂ ವರ್ಕ್ ವಿಚಾರದಲ್ಲಿ ತಗಾದೆ ತೆಗೆಯುವುದು ಮಾಡುತ್ತಾರೆ.

ಶುಲ್ಕದ ವಿಚಾರಕ್ಕೆ ಖಾಸಗಿ ಶಾಲೆ, ಪೋಷಕರ ನಡುವೆ ಫೈಟ್! ಬೆಂಗಳೂರಿನಲ್ಲಿ ಮಕ್ಕಳ ಜೊತೆ ಪೋಷಕರ ಪ್ರತಿಭಟನೆ
ಶಾಲೆ ಮುಂದೆ ಪ್ರತಿಭಟನೆ ನಡೆಸಿದ ಮಕ್ಕಳು, ಪೋಷಕರು
Follow us on

ಬೆಂಗಳೂರು: ಖಾಸಗಿ ಶಾಲೆ (Private School) ಮಕ್ಕಳಿಗೆ ಮಾನಸಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು (Parents) ಇಂದು (ಮೇ 11) ಪ್ರತಿಭಟನೆ ನಡೆಸಿದ್ದಾರೆ. ಲಗ್ಗೆರೆಯ ನಾರಾಯಣ ಇ-ಟೆಕ್ನೊ ಶಾಲೆ ವಿರುದ್ಧ ಪೋಷಕರು ಧರಣಿ ನಡೆಸಿದ್ದಾರೆ. ಪ್ರತಿಭಟಿಸಿದ್ದ ಪೋಷಕರ ಮಕ್ಕಳನ್ನ ಶಾಲೆ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿರುವ ಪೋಷಕರು, ಬೇರೆ ಮಕ್ಕಳಿಗೆ ಇವರ ಜೊತೆ ಸೇರದಂತೆ ಸೂಚನೆ ನೀಡುತ್ತಾರೆ. ಮಕ್ಕಳಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇಡೀ ದಿನ ಶಾಲೆಯಲ್ಲಿ ನಿಲ್ಲಿಸಿ ಮಕ್ಕಳಿಗೆ ಶಿಕ್ಷೆ ನೀಡುತ್ತಾರೆ, ಬೈಯ್ಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ಪೋಷಕರು ಮತ್ತು ಮಕ್ಕಳು ಕಣ್ಣೀರು ಹಾಕಿದ್ದಾರೆ. ಶಾಲೆ ವಿರುದ್ಧ ಕಿಡಿಕಾರಿರುವ ಪೋಷಕರು, ಮಕ್ಕಳನ್ನು ಹೀಯಾಳಿಸುವುದು, ಹೋಂ ವರ್ಕ್ ವಿಚಾರದಲ್ಲಿ ತಗಾದೆ ತೆಗೆಯುವುದು ಮಾಡುತ್ತಾರೆ. ಈ ಬಗ್ಗೆ ಚೈಲ್ಡ್ ರೈಟ್ಸ್ ಕಮಿಷನ್​ಗೂ ದೂರು ನೀಡಲಾಗಿದೆ. ಆದರೆ ಶಾಲೆಯ ವಿರುದ್ಧ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಶಾಲಾ ಆವರಣ ಮುಂಭಾಗ ಧರಣಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮೇ 16ರಿಂದಲೇ ಶಾಲೆ ಆರಂಭ:
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ಮೇ 16ರಿಂದಲೇ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಸಂಕಲ್ಪ ಮಾಡಲಾಗಿದ್ದು, ಮಕ್ಕಳ ಕಲಿಕೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ‌ 16ರಿಂದ ಜೂನ್ 15ರವರೆಗೆ, ಒಂದು ತಿಂಗಳ ಅವಧಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ 16ರಿಂದಲೇ ಮಕ್ಕಳ ದಾಖಲಾತಿ ಆರಂಭಿಸಿ, ಜುಲೈ 31ರೊಳಗೆ ಮುಗಿಸಬೇಕು. ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮೇ 16ರಿಂದ 20ರವರೆಗೆ ದಾಖಲಾತಿ ಆಂದೋಲನ ನಡೆಸಬೇಕು. ಜೂನ್ 1ರಿಂದ ಕಲಿಕಾ ಚೇತನ ಕಾರ್ಯಕ್ರಮದಡಿ ಪಠ್ಯ ಬೋಧನೆ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

ಇದನ್ನೂ ಓದಿ

ಕರುಳ ಬಾಧೆ! ತಾಯಿಯ ಕೊಂದ ವಾಹನದ‌ ಮೇಲೆ ಶತಾಯಗತಾಯ ಸೇಡು ತೀರಿಸಿಕೊಳ್ಳಲು ಹವಣಿಸುವ ಈ ನಾಯಿಯನ್ನ ನೋಡಿ

IPL 2022 playoffs scenarios: ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

Published On - 3:19 pm, Wed, 11 May 22