ಕರ್ನಾಟಕದಲ್ಲಿ ಶಾಲೆ ಆರಂಭಕ್ಕೆ 5 ದಿನ ಬಾಕಿ; ಶಾಲೆಗಳಿಗೆ ಇನ್ನೂ ತಲುಪಿಲ್ಲ ಪಠ್ಯಪುಸ್ತಕ

ಶಾಲೆ ಆರಂಭಕ್ಕೆ 5 ದಿನ ಬಾಕಿಯಿದ್ರೂ ಪುಸ್ತಕಕಗಳು ಶಾಲೆಗಳಿಗೆ ತಲುಪಿಲ್ಲ. ಶೇ.45ರಷ್ಟು ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲ. 21 ಸಾವಿರ ಖಾಸಗಿ ಶಾಲೆಗೆ ಒಂದು ಪುಸ್ತಕವೂ ಸಿಕ್ಕಿಲ್ಲ.

ಕರ್ನಾಟಕದಲ್ಲಿ ಶಾಲೆ ಆರಂಭಕ್ಕೆ 5 ದಿನ ಬಾಕಿ; ಶಾಲೆಗಳಿಗೆ ಇನ್ನೂ ತಲುಪಿಲ್ಲ ಪಠ್ಯಪುಸ್ತಕ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: sandhya thejappa

Updated on:May 10, 2022 | 10:39 AM

ಬೆಂಗಳೂರು: ಇದೇ ತಿಂಗಳು 16ರಿಂದಲೇ ರಾಜ್ಯದಲ್ಲಿ ಶಾಲೆ ಪುನಾರಂಭಿಸುವುದಾಗಿ ಶಿಕ್ಷಣ ಇಲಾಖೆ (Education Department) ತಿಳಿಸಿದೆ. ಶಾಲೆ ಆರಂಭಕ್ಕೆ ಇನ್ನು ಕೇವಲ 5 ದಿನಗಳು ಬಾಕಿಯಿದೆ. ಬೇಸಿಗೆ ರಜೆಯಲ್ಲಿರುವ (Summer Holidays) ಮಕ್ಕಳು ಶಾಲೆಗೆ ಹೋಗಲು ಸಿದ್ಧರಾಗುತ್ತಿದ್ದಾರೆ. ಸರ್ಕಾರ ಕೂಡಾ 2021-22ರ ಶೈಕ್ಷಣಿಕ ವರ್ಷದ ಕ್ಯಾಲೆಂಡರ್​ನ ಈಗಾಗಲೇ ಬಿಡುಗಡೆ ಮಾಡಿದೆ. ಆದರೆ ಮಕ್ಕಳಿಗೆ ಮುಖ್ಯವಾಗಿ ಅತ್ಯವಿರುವ ಪಠ್ಯಪುಸ್ತಕ ನೀಡದೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಸಮಯಕ್ಕೆ ಸರಿಯಾಗಿ ಪುಸ್ತಕ ನೀಡದೇ ಶಾಲೆ ಆರಂಭಕ್ಕೆ ಮುಂದಾಗಿದೆ.

ಶಾಲೆ ಆರಂಭಕ್ಕೆ 5 ದಿನ ಬಾಕಿಯಿದ್ರೂ ಪುಸ್ತಕಕಗಳು ಶಾಲೆಗಳಿಗೆ ತಲುಪಿಲ್ಲ. ಶೇ.45ರಷ್ಟು ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲ. 21 ಸಾವಿರ ಖಾಸಗಿ ಶಾಲೆಗೆ ಒಂದು ಪುಸ್ತಕವೂ ಸಿಕ್ಕಿಲ್ಲ. 6 ತಿಂಗಳ ಹಿಂದೆಯೇ ದುಡ್ಡು ಪಡೆದಿದ್ದರೂ ಪಠ್ಯ ಪೂರೈಸಿಲ್ಲ ಅಂತ ಖಾಸಗಿ ಶಾಲೆಗಳ ಒಕ್ಕೂಟ ಶಿಕ್ಷಣ ಇಲಾಖೆ ನಡೆಗೆ ಕಿಡಿಕಾರಿದೆ.

ಕೊವಿಡ್ ಕಾರಣಕ್ಕೆ ಮಕ್ಕಳಿಗೆ ಕಲಿಕೆಯಾಗಿಲ್ಲ ಅಂತಾ ಶಿಕ್ಷಣ ಇಲಾಖೆ ಎರಡು ವಾರಗಳ ಕಾಲ ಬೇಸಿಗೆ ರಜೆಗೆ ಕತ್ತರಿ ಹಾಕಿ 16 ರಿಂದಲೆ ಶಾಲೆ ಆರಂಭ ಮಾಡುತ್ತಿದೆ. ಆದರೆ ಪಠ್ಯ ಪುಸ್ತಕಗಳು ಇಲ್ಲದೆ ಶಾಲೆ ನಡೆಸುವುದು ಹೇಗೆ ಎನ್ನುವ ಗೊಂದಲದಲ್ಲಿ ಶಾಲೆಗಳು ಇವೆ.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಸಂಕಲ್ಪ ಮಾಡಲಾಗಿದ್ದು, ಮಕ್ಕಳ ಕಲಿಕೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ‌ 16ರಿಂದ ಜೂನ್ 15ರವರೆಗೆ, ಒಂದು ತಿಂಗಳ ಅವಧಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ 16ರಿಂದಲೇ ಮಕ್ಕಳ ದಾಖಲಾತಿ ಆರಂಭಿಸಿ, ಜುಲೈ 31ರೊಳಗೆ ಮುಗಿಸಬೇಕು. ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮೇ 16ರಿಂದ 20ರವರೆಗೆ ದಾಖಲಾತಿ ಆಂದೋಲನ ನಡೆಸಬೇಕು. ಜೂನ್ 1ರಿಂದ ಕಲಿಕಾ ಚೇತನ ಕಾರ್ಯಕ್ರಮದಡಿ ಪಠ್ಯ ಬೋಧನೆ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

ಇದನ್ನೂ ಓದಿ

‘ವಿಕ್ರಾಂತ್ ರೋಣ ಬಗ್ಗೆ ಅಭಿಮಾನಿಗಳಿಗೆ ದಿನಕ್ಕೊಂದು ಅಪ್​​ಡೇಟ್​ ಕೊಡ್ತೀವಿ’; ಜಾಕ್ ಮಂಜು

GST ಆಡಿಟ್ ಮಾಡಿಕೊಡುವುದಾಗಿ ಹೇಳಿ 10 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್!

Published On - 10:32 am, Tue, 10 May 22