ಬೆಂಗಳೂರು: ಅಕ್ಟೋಬರ್ 2021ರಲ್ಲಿ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿಗಾಗಿ ರಾಜ್ಯಾದ್ಯಂತ ನಡೆದ ಲಿಖಿತ ಪರೀಕ್ಷೆಯಲ್ಲಿ ಭಾರೀ ಅಕ್ರಮವಾಗಿದೆ. ಪಿಎಸ್ಐ ಪರೀಕ್ಷೆ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ. ಸದ್ಯ ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧಿತರಾದವರ ಮೇಲೆ ಸಿಐಡಿ ಪೊಲೀಸರಿಂದ ಮತ್ತೊಂದು ಅಸ್ತ್ರ ಪ್ರಯೋಗ ಮಾಡಲಾಗಿದೆ. ಪಿಎಸ್ಐ ನೇಮಕಾತಿ ಕೇಸ್ನಲ್ಲಿ ಪಿ.ಸಿ. ಆಕ್ಟ್ ಅಳವಡಿಸಲಾಗಿದೆ.
ಪಿಎಸ್ಐ ನೇಮಕಾತಿ ಹಗರಣದ ಕೇಸ್ನಲ್ಲಿ ಪಿ.ಸಿ. ಆಕ್ಟ್(ಪ್ರಿವೆನ್ಷನ್ ಆಫ್ ಕರಪ್ಷನ್ ಆಕ್ಟ್. ಭ್ರಷ್ಟಾಚಾರ ತಡೆ ಕಾಯ್ದೆ) ಅಳವಡಿಸಲಾಗಿದೆ. ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ದೃಡಪಟ್ಟಿದೆ. ಪಿಎಸ್ಐ ನೇಮಕಾತಿಗಾಗಿಯೇ ಪಡೆದಿದ್ದ ಸುಮಾರು 1.5 ಕೋಟಿಗೂ ಹೆಚ್ಚಿನ ಹಣ ಪತ್ತೆಯಾಗಿದೆ. ಹಣದ ಮೂಲ ಪರಿಶೀಲನೆ ಮಾಡಿದಾಗ ಅದು ಲಂಚ ಪಡೆದಿದ್ದು ಎಂದು ದೃಡಪಟ್ಟಿದೆ. ಹೀಗಾಗಿ ಲಂಚ ನೀಡಿದವರು ಹಾಗೂ ಲಂಚ ಪಡೆದವರ ವಿರುದ್ಧ ಹೊಸ ಸೆಕ್ಷನ್ ಅಡಿಯಲ್ಲಿ ಸಹ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಬಂಧಿತರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ: ಬಸವ ಎಕ್ಸ್ಪ್ರೆಸ್ನಲ್ಲಿ ನೀರಿಲ್ಲ: ವಿಡಿಯೊ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು
ಪಿ.ಸಿ. ಆಕ್ಟ್ ಹಾಕಿರುವ ಹಿನ್ನಲೆ ಕೋರ್ಟ್ ಬದಲಾವಣೆಯಾಗಲಿದೆ. ಇದುವರೆಗೆ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಕೇಸ್ ಇತ್ತು. ಆದ್ರೆ ಇನ್ನು ಮುಂದೆ ಸಿಸಿಎಚ್ 23 ನೇ ನ್ಯಾಯಾಲಯದಲ್ಲಿ ಕೇಸ್ ನಡೆಯಲಿದೆ. ಹಣ ವರ್ಗಾವಣೆ ಹಾಗು ಬೇನಾಮಿ ಆಸ್ತಿ ಪತ್ತೆಯಾದ ಹಿನ್ನೆಲೆ ಇಡಿ ಸಹ ಪಿಎಸ್ಐ ನೇಮಕಾತಿ ಹಗರಣದ ಕೇಸ್ನಲ್ಲಿ ಎಂಟ್ರಿಯಾಗಲಿದೆ. ಅಲ್ಲದೆ ಈಗಾಗಲೇ ಕೆಲ ಆರೋಪಿಗಳನ್ನು ಇಡಿ ವಿಚಾರಣೆ ನಡೆಸಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ