ಸಾರಿಗೆ ಇಲಾಖೆ ಸೂಚಿಸಿರುವ ಕಿ.ಮೀ. ಗೆ 30 ರೂ ಬದ್ಧ ಎಂದ ಊಬರ್​, ಓಲಾ ಸಂಸ್ಥೆಗಳು

| Updated By: ವಿವೇಕ ಬಿರಾದಾರ

Updated on: Oct 11, 2022 | 8:35 PM

ಉಬರ್​, ಓಲಾ ಆಟೋಗಳು ಇನ್ನು ಮುಂದೆ ಜಿಎಸ್​ಟಿ ಮತ್ತು ಆಟೋ ಬಾಡಿಕೆ ಸೇರಿ ಕಿ.ಮೀ. 30 ರೂ ಪಡೆಯಬೇಕೆಂದು ಸಾರಿಗೆ ಇಲಾಖೆ ನಿರ್ದೇಶನ ನೀಡಿದೆ.

ಸಾರಿಗೆ ಇಲಾಖೆ ಸೂಚಿಸಿರುವ ಕಿ.ಮೀ. ಗೆ 30 ರೂ ಬದ್ಧ ಎಂದ ಊಬರ್​, ಓಲಾ ಸಂಸ್ಥೆಗಳು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಉಬರ್ (Uber)​, ಓಲಾ (Ola) ಆಟೋಗಳು (Auto) ಇನ್ನು ಮುಂದೆ ಜಿಎಸ್​ಟಿ ಮತ್ತು ಆಟೋ ಬಾಡಿಕೆ ಸೇರಿ ಕಿ.ಮೀ. 30 ರೂ ಪಡೆಯಬೇಕೆಂದು ಸಾರಿಗೆ ಇಲಾಖೆ ನಿರ್ದೇಶನ ನೀಡಿದೆ. ಸಾರಿಗೆ ಇಲಾಖೆಯ ಈ ನಿರ್ಧಾರಕ್ಕೆ ಉಬರ್​, ಓಲಾ ಕಂಪನಿಗಳು ಒಪ್ಪಿಗೆ ನೀಡಿವೆ ಎಂದು ಸಾರಿಗೆ ಇಲಾಖೆ ಆಯುಕ್ತ ಟಿ. ಹೆಚ್​. ಎಮ್​​ ಕುಮಾರ್​ ಹೇಳಿದ್ದಾರೆ. ಆಟೋ ಚಾಲಕರು ಸಲ್ಲಿಸುವ ಮನವಿಯನ್ನ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಸಾರಿಗೆ ಇಲಾಖೆ ಸಚಿವರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಊಬರ್​, ಓಲಾ ಆಟೋಗಳು ಗ್ರಾಹಕರಿಂದ ದುಪ್ಪಟ್ಟು ಹಣ ಪಡೆಯುತ್ತಿವೆ ಎಂದು ಆರ್​ಟಿಓ ನೋಟಿಸ್​ ಜಾರಿ ಮಾಡಿತ್ತು. ಈ ಸಂಬಂಧ ಇಂದು ಓಲಾ, ಉಬರ್, ಱಪಿಡೋ ಕಂಪನಿಗಳು ಸಾರಿಗೆ ಇಲಾಖೆ ಆಯುಕ್ತರೊಂದಿಗೆ ಸಭೆ ನಡೆಸಿದವು. ಸಭೆ ಬಳಿಕ ಮಾತನಾಡಿದ ಸಾರಿಗೆ ಇಲಾಖೆಯ ಆಯುಕ್ತ ಟಿ. ಹೆಚ್​. ಎಮ್​​ ಕುಮಾರ್ ಓಲಾ ಹಾಗು ಊಬರ್ ಸಭೆ ನಡೆಯಿತು. ಸಭೆಯಲ್ಲಿ ವಕೀಲರು ಆಟೋ ಚಾಲಕರ ಮುಖಂಡರು ಇದ್ದರು. 3‌ ವೀಲರ್ ಅಗ್ರೀಗೇಟ್ ರೂಲ್ಸ್​ಗೆ ಅವಕಾಶ‌ ಇಲ್ಲ. ಅವರಿಗೆ ಮನವರಿಕೆ ಮಾಡಿದ್ದೇವೆ. ಅಗ್ರಿಗೇಶನ್ ಮಾಡೋದಕ್ಕೆ ನಾಳೆ ಬೆಳಿಗ್ಗೆ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಅವರು ಮಾಡಿರೋ ಅಗ್ರಿಗೇಶನ್ ಉಲ್ಲಂಘನೆ ಹಾಗು ದರ ಏರಿಕೆ ವಿಚಾರವಾಗಿ ಮಾತನಾಡಿದ್ದೇವೆ. ಆರ್‌ಟಿಒ ಚೇರ್ಮನ್ ನಗರ ಜಿಲ್ಲಾಧಿಕಾರಿ ಆಗಿದ್ದಾರೆ. ಅವರು ಫಿಕ್ಸ್ ಮಾಡಿರೋ ಮೊತ್ತವನ್ನೇ ಸಂಗ್ರಹಿಸಬೇಕು. ಅಗ್ರಿಗೇಟರ್‌ಗಳು ಫೀಸ್ ಚಾರ್ಜ್ ಮಾಡೋದಾಗಿ ಕೇಳಿದ್ದಾರೆ. ಅಗ್ರಿಗೇಟರ್ ಅಂತ ಅವರಿಗೆ ಅನುಮತಿ ನೀಡಲು ಬರೋದಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಬೈಕ್ ಟ್ಯಾಕ್ಸಿ ಅನುಮತಿ ಇಲ್ಲ. ನಡೆಸುತ್ತಿದ್ದರೇ ಅದು‌ ಅಕ್ರಮ. ಟ್ಯಾಕ್ಸಿ‌ ಅನುಮತಿ ಇಲ್ಲ. ನಾಳೆಯಿಂದ ಓಲಾ, ಊಬರ್ ಆಟೋಗಳು ಜಿಎಸ್​ಟಿ ಸೇರಿ 30ರೂ ಪಡೆಯಬೇಕು. ನಿಗದಿಕ್ಕಿಂದ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. 7 ಪ್ರತಿಶತದಷ್ಟು ಜಿಎಸ್ ಟಿ ಇರುತ್ತೆ ಎಂದು ಮಾತನಾಡಿದ್ದಾರೆ.

ನಾಳೆಯಿಂದ ಓಲಾ, ಉಬರ್ ಆಟೋ ಸೇವೆ ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಅನುಮತಿ ಕೇಳಲು ಸಾರಿಗೆ ಇಲಾಖೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಲಿದೆ. ನಿಗದಿ ಮಾಡಿದ ದರಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ಕೂಡ ಆಪ್ ಆಧಾರಿತ ಆಟೋ ಸೇವೆ ಪಡೆಯದಂತೆ ಸಾರಿಗೆ ಇಲಾಖೆ ಮನವಿ ಮಾಡಿಕೊಂಡಿದೆ. ಓಲಾ ಊಬರ್ ಹೆಚ್ಚಿನ ದರ ಪಡೆದರೆ ಆರ್​ಟಿಓ ಸಹಾಯವಾಣಿ ನಂಬರ್ 9449863429, 9449863426 ಸಾರ್ವಜನಿಕರು ಕರೆ ಮಾಡಿ. ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನ ಕೋರ್ಟ್​ಗೂ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Tue, 11 October 22