ಜ್ಞಾನಭಾರತಿ ವಿವಿಯಲ್ಲಿ ಮುಂದುವರೆದ ವಿದ್ಯಾರ್ಥಿಗಳ ಪ್ರತಿಭಟನೆ : ಸಚಿವ ಎಸ್ ಟಿ ಸೋಮಶೇಖರ ಭೇಟಿ
ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಲ್ಪ ಮೇಲೆ ಬಿಎಂಟಿಸಿ ಬಸ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಇಂದು ಕೂಡ ಪ್ರತಿಭಟನೆ ಮುಂದುವರೆಸಿದ್ದಾರೆ.
ಬೆಂಗಳೂರು: ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಲ್ಪ ಮೇಲೆ ಬಿಎಂಟಿಸಿ (BMTC) ಬಸ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಇಂದು ಕೂಡ ಪ್ರತಿಭಟನೆ ಮುಂದುವರೆಸಿದ್ದಾರೆ. ವಿಶ್ವವಿದ್ಯಾಲಯದ ಆವರಣದಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೆ ಬಿಯುಟಿಸಿ ಶಿಕ್ಷಕರ ಪರಿಷತ್ ಬೆಂಬಲ ಸೂಚಿಸಿದೆ. ಶಿಕ್ಷಕರ ಪರಿಷತ್ತಿನ ಅಧ್ಯಕ್ಷ ಪ್ರೊ. ಮುರುಳಿದರ್ ಮಾತನಾಡಿ ವಿದ್ಯಾರ್ಥಿಗಳ ನಡೆಸುತ್ತಿರುವ ಧರಣಿಗೆ ನಮ್ಮ ಬೆಂಬಲ ಇದೆ. ನಿನ್ನೆ ನಡೆದಂತಹ ಘಟನೆ ಮತ್ತೆ ಮರುಕಳಿಸಬಾರದು. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಖಾಸಗಿ ವಾಹನಗಳು ಓಡಾಟದಿಂದಾಗಿ ನಮಗೆ ಸರಿಯಾಗಿ ಕ್ಲಾಸ್ಗಳನ್ನು ಮಾಡುವುದಕ್ಕೆ ಆಗುತ್ತಿಲ್ಲ. ರಜಾದಿನಗಳಲ್ಲಿ ರಸ್ತೆಗಳಲ್ಲಿ ಓಡಾಡುವುದಕ್ಕೆ ಆಗುವುದಿಲ್ಲ. ಅಷ್ಟೊಂದು ವಾಹನಗಳು ಓಡಾಡುತ್ತಿರುತ್ತವೆ. ಹೀಗಿರುವಾಗ ವಿಧ್ಯಾರ್ಥಿನಿಯರು ಹೇಗೆ ಹಾಸ್ಟೇಲ್ಗಳಿಗೆ ಹೋಗುತ್ತಾರೆ. ಕಾಲೇಜು ಬಿಟ್ಟಂತಹ ಸಂದರ್ಭದಲ್ಲಿ ರಸ್ತೆ ದಾಟುವುದಕ್ಕೆ ಹರಸಾಹಸ ಪಡುತ್ತಾರೆ. ಖಾಸಗಿ ವಾಹನಗಳ ಓಡಾಡಟಕ್ಕೆ ನಮ್ಮ ವಿರೋಧವು ಇದೆ ಎಂದು ಪ್ರೊ. ಮುರುಳಿದರ್ ಹೇಳಿದರು.
ವಿದ್ಯಾರ್ಥಿನಿ ಶಿಲ್ಪಾ ಸ್ಥಿತಿ ಗಂಭೀರವಾಗಿದೆ. ಶಿಲ್ಪಾಗೆ ರಕ್ತ ನೀಡಲು ಹಲವು ವಿದ್ಯಾರ್ಥಿಗಳು ಹೋಗಿದ್ದಾರೆ. ನಿನ್ನೆಯಿಂದ ಧರಣಿ ನಡೆಸುತ್ತಿದ್ದರು ಯಾವುದೇ ಸಚಿವರು ಬಂದಿಲ್ಲ. ಸ್ಥಳಕ್ಕೆ ಶಿಕ್ಷಣ ಸಚಿವರು, ಸಾರಿಗೆ ಸಚಿವರು ಬರಬೇಕು. ಸಚಿವರು ಬರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ. ವಿವಿ ರಸ್ತೆಯಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಬೇಕು. ನಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಜ್ಞಾನಭಾರತಿ ವಿವಿಯಲ್ಲಿ ಟಿವಿ9ಗೆ ವಿದ್ಯಾರ್ಥಿನಿ ಶರಣ್ಯಾ ಹೇಳಿದ್ದಾರೆ.
ಬೆಂಗಳೂರು ವಿವಿ ವಿಧ್ಯಾರ್ಥಿಗಳ ಪ್ರತಿಭಟನ ಸ್ಥಳಕ್ಕೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು ಸಿಎಂ ಬೊಮ್ಮಾಯಿ ಕಾಲ್ ಮಾಡಿದ್ದರು. ಸೋಮಣ್ಣ ಮತ್ತೆ ನೀವು ವಿವಿಗೆ ಭೇಟಿ ಮಾಹಿತಿ ಕೊಡಿ ಎಂದಿದ್ದರು. ನಾನು ಬರುವುದು ಸ್ವಲ್ಪ ತಡವಾಗಿದೆ. ಈಗಾಗಲೇ ಸೋಣಣ್ಣವರು ನಿಮ್ಮ ಬಳಿ ಮಾತನಾಡಿದ್ದಾರೆ. ಮುಖ್ಯಂಮಂತ್ರಿಗಳು ಎರಡು ದಿನದಲ್ಲಿ ಬರುತ್ತಾರೆ. ನಿಮ್ಮ ಬಳಿ ಅವರು ಮಾತಾನಾಡುತ್ತಾರೆ. ಮುಖ್ಯಮಂತ್ರಿಗಳು ಬಂದ ತಕ್ಷಣ ಸಂಪೂರ್ಣ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ನಿಮ್ಮಂದಿಗೆ ಸಹಕಾರ ಮಾಡುತ್ತೇವೆ. ನಾವು ಡಿಸಿಷನ್ ತಗೋಬೇಕು ಆದರೂ ಕೂಡ ಮುಖ್ಯಮಂತ್ರಿಗಳಿಗೆ ತಿಳಿಸಬೇಕಾಗುತ್ತೆ. ನಿಮ್ಮ ವಿರುದ್ದವಾಗಿ ನಾವು ಇಲ್ಲ. ಸಿಎಂ ಬಂದ ಕೂಡಲೇ ಮಾತಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ