AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಇಲಾಖೆ ಆಯುಕ್ತ ಆದೇಶಕ್ಕೂ ಡೋಂಟ್​ಕೇರ್​: ಎಂದಿನಂತೆ ಓಲಾ, ಉಬರ್​, ರ್‍ಯಾಪಿಡೋ ಆಟೋಗಳ ಸಂಚಾರ

ನಿನ್ನೆ ಓಲಾ, ಊವರ್ ಕಂಪನಿಗಳ ಜೊತೆ ಸಭೆ ನಡೆಸಿದ ಬಳಿಕ ಆಯುಕ್ತ ಟಿಹೆಚ್‌ಎಂ ಕುಮಾರ್ ನಾಳೆಯಿಂದ ಓಲಾ, ಊಬರ್ ಆ್ಯಪ್ ನಲ್ಲಿ ಆಟೋ ಸೇವೆ ಬಂದ್ ಆಗುತ್ತೆ ಎಂದಿದ್ದರು. ಆದ್ರೆ ಇಂದು ಕೂಡ ಆಟೋಗಳ ಸೇವೆ ಯತಾಸ್ಥಿತಿ ಮುಂದುವರೆದಿದೆ.

ಸಾರಿಗೆ ಇಲಾಖೆ ಆಯುಕ್ತ ಆದೇಶಕ್ಕೂ ಡೋಂಟ್​ಕೇರ್​: ಎಂದಿನಂತೆ ಓಲಾ, ಉಬರ್​, ರ್‍ಯಾಪಿಡೋ ಆಟೋಗಳ ಸಂಚಾರ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Oct 12, 2022 | 10:30 AM

Share

ಬೆಂಗಳೂರು: ಓಲಾ, ಊಬರ್ ಕಂಪನಿಗಳು ಸರ್ಕಾರದ ನಿಯಮ ಉಲ್ಲಂಘನೆ ಮಾಡುತ್ತಾ, ಗ್ರಾಹಕರ ಬಳಿ ಡಬಲ್ ಚಾರ್ಚ್ ಮಾಡುತ್ತಾ ಹಣ ಲೂಟಿ ಮಾಡುತ್ತಿದೆ. ಈ ಬಗ್ಗೆ ನಿನ್ನೆ ಸಭೆ ನಡೆದಿದ್ದು ನಿನ್ನೆ ರಾತ್ರಿ 12 ರಿಂದ ಓಲಾ, ಊಬರ್ ಆ್ಯಪ್ ನಲ್ಲಿ ಆಟೋ ಸೇವೆ ಬಂದ್ ಎಂದು ಸಾರಿಗೆ ಇಲಾಖೆ ಆಯುಕ್ತ ಟಿಹೆಚ್‌ಎಂ ಕುಮಾರ್ ಮಾಹಿತಿ ನೀಡಿದ್ದರು. ಆದ್ರೆ ಇಂದು ಕೂಡ ಎಂದಿನಂತೆ ಓಲಾ, ಉಬರ್​, ಱಪಿಡೋ ಆಟೋಗಳ ಸಂಚಾರವಿದ್ದು ಸಾರಿಗೆ ಇಲಾಖೆ ಆಯುಕ್ತ ಆದೇಶಕ್ಕೂ ಈ ಕಂಪನಿಗಳು ಡೋಂಟ್​ಕೇರ್​ ಅನ್ನುತ್ತಿವೆ.

ನಿನ್ನೆ ಓಲಾ, ಊವರ್ ಕಂಪನಿಗಳ ಜೊತೆ ಸಭೆ ನಡೆಸಿದ ಬಳಿಕ ಆಯುಕ್ತ ಟಿಹೆಚ್‌ಎಂ ಕುಮಾರ್ ನಾಳೆಯಿಂದ ಓಲಾ, ಊಬರ್ ಆ್ಯಪ್ ನಲ್ಲಿ ಆಟೋ ಸೇವೆ ಬಂದ್ ಆಗುತ್ತೆ ಎಂದಿದ್ದರು. ಆದ್ರೆ ಇಂದು ಕೂಡ ಆಟೋಗಳ ಸೇವೆ ಯತಾಸ್ಥಿತಿ ಮುಂದುವರೆದಿದೆ. ಇವತ್ತು ಬೆಳಿಗ್ಗೆಯಿಂದ ಸರ್ಕಾರಿ ಬೆಲೆ 30ರೂಪಾಯಿಗೆ ಆಟೋ ಓಡಿಸ್ತಾರೆ. ಜಿಎಸ್‌ಟಿ ಹಾಕ್ತಾರೆ ಅಷ್ಟೇ. ಅದಕ್ಕಿಂತ ಹೆಚ್ಚಿನ ದರ ಪಡೆದ್ರೆ ನಮ್ಮ ಕಾಲ್ ಸೆಂಟರ್ ಗೆ ಕರೆ ಮಾಡಿ ದೂರು ನೀಡಿದ್ರೆ ಒಂದು ದೂರಿಗೆ ಐದು ಸಾವಿರ ದಂಡ ಹಾಕ್ತಿವಿ ಎಂದು ಮಾಧ್ಯಮಗಳ ಮುಂದೆ ಆರ್ಟಿಓ ಕಮೀಷನರ್ ಹೇಳಿದ್ದರು. ಆದ್ರೆ ಸಭೆಯಲ್ಲಿ ತಲೆ ಅಲ್ಲಾಡಿಸಿದ್ದ ಕಂಪನಿ ಇಂದು ಸಾರಿಗೆ ಇಲಾಖೆ ಆಯುಕ್ತರ ಆದೇಶಕ್ಕೂ ಬೆಲೆ ಕೊಡದೆ ಯತ್ತಾವತ್ತಾಗಿ ಸೇವೆ ಮುಂದುವರೆಸಿದೆ. ಆಟೋ ಸೇವೆಗೂ ಅವಕಾಶ ನೀಡುವಂತೆ ಕಂಪನಿಗಳು ಅರ್ಜಿ ಸಲ್ಲಿಸಿದ್ದರು. ದರ ನಿಗದಿ ಆಗುವವರೆಗೂ ಆಟೋ ಸೇವೆ ಇಲ್ಲ ಎಂದು ಆಯುಕ್ತರ ಆದೇಶಿಸಿದ್ದರು. ಇದನ್ನೂ ಓದಿ: ಮೊದಲ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳದ ಮುಸ್ಲಿಂ ವ್ಯಕ್ತಿ ಮತ್ತೊಂದು ಮದುವೆಯಾಗುವಂತಿಲ್ಲ!

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಾರಿಗೆ ಇಲಾಖೆ ಸೂಚಿಸಿರುವ ಕಿ.ಮೀ. ಗೆ 30 ರೂ ಬದ್ಧ ಎಂದ ಊಬರ್​, ಓಲಾ ಸಂಸ್ಥೆಗಳು

ಬೆಂಗಳೂರು(ಅ.11): ಉಬರ್ (Uber)​, ಓಲಾ (Ola) ಆಟೋಗಳು (Auto) ಇನ್ನು ಮುಂದೆ ಜಿಎಸ್​ಟಿ ಮತ್ತು ಆಟೋ ಬಾಡಿಕೆ ಸೇರಿ ಕಿ.ಮೀ. 30 ರೂ ಪಡೆಯಬೇಕೆಂದು ಸಾರಿಗೆ ಇಲಾಖೆ ನಿರ್ದೇಶನ ನೀಡಿದೆ. ಸಾರಿಗೆ ಇಲಾಖೆಯ ಈ ನಿರ್ಧಾರಕ್ಕೆ ಉಬರ್​, ಓಲಾ ಕಂಪನಿಗಳು ಒಪ್ಪಿಗೆ ನೀಡಿವೆ ಎಂದು ಸಾರಿಗೆ ಇಲಾಖೆ ಆಯುಕ್ತ ಟಿ. ಹೆಚ್​. ಎಮ್​​ ಕುಮಾರ್​ ಹೇಳಿದ್ದಾರೆ. ಆಟೋ ಚಾಲಕರು ಸಲ್ಲಿಸುವ ಮನವಿಯನ್ನ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಸಾರಿಗೆ ಇಲಾಖೆ ಸಚಿವರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Published On - 10:10 am, Wed, 12 October 22