ದಾಸರಹಳ್ಳಿ: 6 ತಿಂಗಳ ಹಿಂದೆ 35 ಲಕ್ಷ ಸಾಲ, ಸಾಲ ವಸೂಲಿಗಾರರ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ನೇಣಿಗೆ ಶರಣು
ಮಲ್ಲೇಶ್ವರಂನ ಪ್ರಗತಿ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಆರು ತಿಂಗಳ ಹಿಂದೆ ₹35 ಲಕ್ಷ ಸಾಲ ಮಾಡಿದ್ದ ರಾಜು, ಬ್ಯಾಂಕ್ ಸಿಬ್ಬಂದಿ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾರೆ. ಸಾಲ ಕಟ್ಟುವಂತೆ ಬ್ಯಾಂಕ್ ಸಿಬ್ಬಂದಿ ಶಂಕರಪ್ಪ, ಮುಕುಂದ ಎನ್ನುವವರು ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಬೆಂಗಳೂರು: ಆರು ತಿಂಗಳ ಹಿಂದೆಯಷ್ಟೇ ₹35 ಲಕ್ಷ ಸಾಲ ಮಾಡಿದ್ದ ವ್ಯಕ್ತಿಯೋರ್ವ ಸಾಲ ಮರುಪಾವತಿಸಲಾಗದೇ, ಸಾಲ ವಸೂಲಿಗಾರರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಘಟನೆ ಬೆಂಗಳೂರಿನ ದಾಸರಹಳ್ಳಿಯ ಪ್ರಶಾಂತನಗರದಲ್ಲಿ ನಡೆದಿದೆ. ಮಲ್ಲೇಶ್ವರಂನ ಪ್ರಗತಿ ಕೋ ಆಪರೇಟಿವ್ ಬ್ಯಾಂಕ್‌ನಿಂದ ₹35 ಲಕ್ಷ ಸಾಲ ಪಡೆದಿದ್ದ ರಾಜು (55) ಎಂಬ ವ್ಯಕ್ತಿ ನೇಣಿಗೆ ಕೊರಳೊಡ್ಡಿರುವುದಾಗಿ ತಿಳಿದುಬಂದಿದೆ.
ಮಲ್ಲೇಶ್ವರಂನ ಪ್ರಗತಿ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಆರು ತಿಂಗಳ ಹಿಂದೆ ₹35 ಲಕ್ಷ ಸಾಲ ಮಾಡಿದ್ದ ರಾಜು, ಬ್ಯಾಂಕ್ ಸಿಬ್ಬಂದಿ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾರೆ. ಸಾಲ ಕಟ್ಟುವಂತೆ ಬ್ಯಾಂಕ್ ಸಿಬ್ಬಂದಿ ಶಂಕರಪ್ಪ, ಮುಕುಂದ ಎನ್ನುವವರು ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಬ್ಯಾಂಕ್ ಸಿಬ್ಬಂದಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮನನೊಂದ ರಾಜು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾರಿ ಮತ್ತು ಕಾರು ಡಿಕ್ಕಿ; ಮಹಿಳೆ ಸ್ಥಳದಲ್ಲೇ ಸಾವು ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಗೊರೂರು ಗ್ರಾಮದ ಬಳಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಪುತ್ತೂರು ಮೂಲದ ಧನುಷ (25) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗೋಪಿಕ್ ನಾಯಕ್, ಸ್ನೇಹ, ಸುಬ್ಬಲಕ್ಷ್ಮಿ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದು ಗಾಯಳುಗಳಿಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುದೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ತಲೆ ಮೇಲೆ ರಾಟೆ ಮುರಿದು ಬಿದ್ದು ಕೂಲಿ ಕಾರ್ಮಿಕ ಸಾವು ಮೈಸೂರು: ತಲೆ ಮೇಲೆ ರಾಟೆ ಮುರಿದು ಬಿದ್ದು ಕೂಲಿ ಕಾರ್ಮಿಕ ಸಾವಿಗೀಡಾದ ಘಟನೆ ಮೈಸೂರಿನ ಇರ್ವಿನ್ ರಸ್ತೆಯಲ್ಲಿ ನಡೆದಿದೆ. ಇರ್ವಿನ್ ರಸ್ತೆಯಲ್ಲಿನ ಕಟ್ಟಡ ಕಾಮಗಾರಿ ವೇಳೆ ದುರ್ಘಟನೆ ಸಂಭವಿಸಿದ್ದು, ಮೃತರನ್ನು ನೆಹರು ನಗರದ ಮೊಹಮ್ಮದ್ ಯಾಸೀನ್ (21) ಎಂದು ಗುರುತಿಸಲಾಗಿದೆ. ವಸತಿಗೃಹವೊಂದರ ಕಟ್ಟಡ ಕಾಮಗಾರಿಗೆ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಯಾಸೀನ್, ಸಿಮೆಂಟ್ ಮಿಶ್ರಣ ಇರುವ ಬಕೆಟ್ಗಳನ್ನು ಮೇಲಂತಸ್ತಿಗೆ ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ತಲೆಮೇಲೆ ರಾಟೆ ಮುರಿದು ಬಿದ್ದ ಪರಿಣಾಮ ಯಾಸೀನ್ ಮೃತಪಟ್ಟಿದ್ದಾರೆ. ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಹಾಕುವಂತಿಲ್ಲ -ಕರ್ನಾಟಕ ಲೇವಾದೇವಿದಾರರ ವಿಧೇಯಕ ಅಂಗೀಕಾರ
ಮಗ ಮಾಡಿದ ಸಾಲಕ್ಕೆ ತಂದೆಯ ಅಪಹರಣ ಮಾಡಿದ ಸಾಲಗಾರರು! ಸಾಲದ ಮೊತ್ತ ಎಷ್ಟು ಗೊತ್ತಾ?