ಫೇಸ್​ಬುಕ್​​ನಲ್ಲಿ ಮಹಿಳೆಯರ ಫೋಟೋ, ಸಂಪರ್ಕ ಸಂಖ್ಯೆ ಹಾಕಿ ಕಿರುಕುಳ; ಡಾರ್ಲಿಂಗ್ ಚಂದು ಎಂಬಾತನ ಬಂಧನ

| Updated By: ganapathi bhat

Updated on: Mar 01, 2022 | 10:00 AM

ಕಿರುಕುಳಕ್ಕೆ ಬೇಸತ್ತ ಮಹಿಳೆಯಿಂದ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಅರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಫೇಸ್​ಬುಕ್​​ನಲ್ಲಿ ಮಹಿಳೆಯರ ಫೋಟೋ, ಸಂಪರ್ಕ ಸಂಖ್ಯೆ ಹಾಕಿ ಕಿರುಕುಳ; ಡಾರ್ಲಿಂಗ್ ಚಂದು ಎಂಬಾತನ ಬಂಧನ
ಡಾರ್ಲಿಂಗ್ ಚಂದು
Follow us on

ಬೆಂಗಳೂರು: ಫೇಸ್​ಬುಕ್​​ನಲ್ಲಿ ಮಹಿಳೆಯ ಫೋಟೋ ಹಾಕಿ ಕಿರುಕುಳ ನೀಡುತ್ತಿದ್ದ ಚಂದ್ರಶೇಖರ ಅಲಿಯಾಸ್​ ಡಾರ್ಲಿಂಗ್ ಚಂದು (35) ಎಂಬಾತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಫೋಟೋ ಜೊತೆ ಮಹಿಳೆ ಕಾಂಟ್ಯಾಕ್ಟ್ ನಂಬರ್ ಪೋಸ್ಟ್ ಮಾಡಿದ್ದ ಆರೋಪಿ ಚಂದ್ರಶೇಖರ ಎಂಬಾತನನ್ನು ಬಂಧಿಸಲಾಗಿದೆ. ಮಹಿಳೆಯ ದೂರು ಆಧರಿಸಿ ಬಾಗಲಗುಂಟೆ ಪೊಲೀಸರಿಂದ ಬಂಧನ ಮಾಡಲಾಗಿದೆ.

ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಮಹಿಳೆಯ ಫೋಟೋ ಜೊತೆ ಕಾಂಟ್ಯಾಕ್ಟ್ ನಂಬರ್ ಕೂಡ ಪೋಸ್ಟ್ ಮಾಡುತ್ತಿದ್ದ. ಕಿರುಕುಳಕ್ಕೆ ಬೇಸತ್ತ ಮಹಿಳೆಯಿಂದ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಅರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮದ್ಯ ಸಾಗಾಟ ಮಾಡುತ್ತಿದ್ದವರು ಬಂಧನ:
ವಿಜಯಪುರ: ಮಹಾರಾಷ್ಟ್ರಕ್ಕೆ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದದಲ್ಲಿ ಅಬಕಾರಿ ಪೊಲೀಸರ ದಾಳಿ ವೇಳೆ ನಿಶಾಂತ್ ಕಾಂಬಳೆ ಹಾಗೂ ಯಲ್ಲಾಲಿಂಗ ಹೊನ್ನೂರ ಬಂಧನಕ್ಕೊಳಗಾಗಿದ್ದಾರೆ. ಬಂಧಿತರಿಂದ 10 ಬಾಕ್ಸ್ ಗೋವಾ ಮಧ್ಯ ಒಂದು ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಟರಿಗಳನ್ನ ಕದಿಯುತ್ತಿದ್ದ ಆರೋಪಿಗಳ ಅರೆಸ್ಟ್:
ಬೆಲೆ ಬಾಳುವ ಬ್ಯಾಟರಿಗಳನ್ನ ಕದಿಯುತ್ತಿದ್ದ ಆರೋಪಿಗಳ ಅರೆಸ್ಟ್ ಆಗಿದ್ದಾರೆ. ಚಾಮರಾಜಪೇಟೆ ಪೊಲೀಸರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳು ಚಾಮರಾಜಪೇಟೆ, ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಯುಪಿಎಸ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 1 ಲಕ್ಷ ಮೌಲ್ಯದ 9 ಬ್ಯಾಟರಿಗಳು ಹಾಗೂ ಒಂದು ಆಟೋ ಜಪ್ತಿ ಮಾಡಿದ್ದಾರೆ.

ಮಾರಕಾಸ್ತ್ರ ಹಿಡಿದು ಓಡಾಡಿದ್ದ ವಿದೇಶಿ ಪ್ರಜೆ ಸೆರೆ:
ಮದ್ಯದ ಅಮಲಿನಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಸಾರ್ವಜನಿಕವಾಗಿ ಓಡಾಡಿದ್ದ ವಿದೇಶಿ ಪ್ರಜೆಯನ್ನು ಸೆರೆಹಿಡಿಯಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ವಿದೇಶಿ ಪ್ರಜೆ ಮಾರಕಾಸ್ತ್ರ ಹಿಡಿದು ಓಡಾಡಿದ್ದ. ಓಕಾವೋ ಲಿಯೋಸ್ ಬಂಧಿತ ವಿದೇಶಿ ಪ್ರಜೆ. ಈತ ಮಾರಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಹೆದರಿಸಿದ್ದ. ವಶಕ್ಕೆ ಪಡೆಯಲು ಹೋದ ಎಎಸ್ಐ ಗೆ ಕೈಯಿಂದ ಹಲ್ಲೆ ನಡೆಸಿದ್ದ. ಶರಣಾಗುವಂತೆ ಹೇಳಿದ್ದರೂ ಮಾರಕಾಸ್ತ್ರ ಬೀಸುತ್ತಾ ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾಗಿದ್ದ.

ಇದನ್ನೂ ಓದಿ: ಕೊಪ್ಪಳ: ಜನರಿಗೆ ವಿವಿಧ ರೀತಿ ವಂಚನೆ ಮಾಡುತ್ತಿದ್ದ ಕಪಟ ಸ್ವಾಮೀಜಿ ಪೊಲೀಸರ ಬಲೆಗೆ

ಇದನ್ನೂ ಓದಿ: ಮೃತ ಹರ್ಷ ಮೊಬೈಲ್ ಫೋನ್ ಪತ್ತೆಯಾಗಿಲ್ಲ, 10 ಆರೋಪಿಗಳ ಬಂಧನ; ಶಿವಮೊಗದಲ್ಲಿ ಎಸ್​ಪಿ ಮಾಹಿತಿ

Published On - 9:59 am, Tue, 1 March 22