ಬೆಂಗಳೂರು: ಎರಡು ದಿನಗಳ ಕರ್ನಾಟಕ ಪ್ರವಾಸಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರು ಮೂಲಕ ತುಮಕೂರಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇಂದು ಸಂಜೆ ವೇಳೆಗೆ ಪ್ರಧಾನಿ ಮೋದಿ ಬೆಂಗಳೂರಿಗೆ ವಾಪಸಾಗಲಿದ್ದು, ರಾಜಭವನದಲ್ಲಿ ತಂಗಲಿದ್ದಾರೆ.
ನಾಳೆ ಶುಕ್ರವಾರ ಪ್ರಧಾನಿ ಮೋದಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳು ಮತ್ತು ಸಂಚಾರ ವಿವರ ಹೀಗಿದೆ.
ಬೆಳಗ್ಗೆ 9:40 ಕ್ಕೆ ರಾಜಭವನದಿಂದ ರಸ್ತೆ ಮೂಲಕ ಜಿಕೆವಿಕೆಗೆ ಆಗಮನ.
ಬೆಳಗ್ಗೆ 10:00 ರಿಂದ 11:05 ನಿಮಿಷದವರೆಗೆ 107ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ
ಬೆಳಗ್ಗೆ 11:10 ಕ್ಕೆ ರಸ್ತೆ ಮೂಲಕ ಹೆಚ್ ಎಎಲ್ ಗೆ ಆಗಮನ
ಬೆಳಗ್ಗೆ 11:30 ಕ್ಕೆ ಹೆಚ್ ಎಎಎಲ್ ನಿಂದ ಹೆಲಿಕಾಪ್ಟರ್ ಮೂಲಕ ದೆಹಲಿಗೆ ವಾಪಸ್.
ಪ್ರಧಾನಿ ನರೇಂದ್ರ ಮೋದಿ ಬಳ್ಳಾರಿ ರಸ್ತೆ, ಹೆಬ್ಬಾಳ ಫ್ಲೈ ಓವರ್, ಮೇಕ್ರಿ ಸರ್ಕಲ್, ಟ್ರಿನಿಟಿ ಸರ್ಕಲ್ ಮಾರ್ಗವಾಗಿ ಹೆಚ್ ಎಎಲ್ ಏರ್ಪೋರ್ಟ್ ತಲುಪಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ಮಾರ್ಗ ಬಳಸುವುದು ಒಳಿತು.