107ನೇ ಸಮ್ಮೇಳನಕ್ಕೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

107ನೇ ಸಮ್ಮೇಳನಕ್ಕೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದಾರೆ. ಯಲಹಂಕ ಬಳಿಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಜಿಕೆವಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮೋದಿ ಬೆಳಗ್ಗೆ 10 ಗಂಟೆಗೆ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಕೇಂದ್ರ ವಿಜ್ಞಾನ- ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಭಾಗಿಯಾಗಲಿದ್ದಾರೆ. ಹಾಗೂ ಪ್ರಧಾನಿ ಮೋದಿ ಗ್ರಾಮೀಣ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತು ಸಮ್ಮೇಳನದಲ್ಲಿ ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆ ಯಲಹಂಕದ ಜಿಕೆವಿಕೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆಚ್ಚು ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ.

ಭದ್ರತೆಗಾಗಿ 8 ಡಿಸಿಪಿ, 25 ಎಸಿಪಿ, 50 ಇನ್ಸ್‌ಪೆಕ್ಟರ್‌ಗಳು ಸೇರಿ 1,500ಕ್ಕೂ ಹೆಚ್ಚು ಪೇದೆಗಳು, 40 ಕೆಎಸ್‌ಆರ್‌ಪಿ ತುಕಡಿ 20 ಸಿಎಆರ್ ತುಕಡಿಗಳು ಭದ್ರತೆಗಾಗಿ ನಿಯೋಜನೆಗೊಂಡಿವೆ. ಯಲಹಂಕ ಸುತ್ತಮುತ್ತ ಯಾರು ಡ್ರೋಣ್​ಗಳನ್ನು ಹಾರಿಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಪೊಲೀಸರ ಸೂಚನೆ ಮೀರಿದವರಿಗೆ ತಕ್ಷಣ ಸೂಕ್ತ ಕ್ರಮಕ್ಕೆ ಪೊಲೀಸರು ನಿರ್ಧಾರಿಸಿದ್ದಾರೆ.

ರಾಜಭವನದಿಂದ ರಸ್ತೆ ಮಾರ್ಗವಾಗಿ ಜಿಕೆವಿಕೆಗೆ ಪ್ರಧಾನಿ ಭೇಟಿ:
ಬೆಳಗ್ಗೆ 9.40ಕ್ಕೆ ಬೆಂಗಳೂರಿನ ಜಿಕೆವಿಕೆಗೆ ಮೋದಿ ಆಗಮನ
ಬೆಳಗ್ಗೆ 11.05ರವರೆಗೆ ಕಾರ್ಯಕ್ರಮದಲ್ಲಿ ಮೋದಿ ಭಾಗಿ
ಬಳಿಕ HALನಿಂದ ದೆಹಲಿಗೆ ತೆರಳಲಿರುವ ಪ್ರಧಾನಿ ಮೋದಿ
ಬೆಳಗ್ಗೆ 11.30ಕ್ಕೆ HALನಿಂದ ದೆಹಲಿಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ.

Click on your DTH Provider to Add TV9 Kannada