ಕಾಂಗ್ರೆಸ್​ ಹೋರಾಡಬೇಕಿರುವುದು ಪಾಕ್ ವಿರುದ್ಧ, ನಮ್ಮ ವಿರುದ್ಧವೇ ಅಲ್ಲ -ಪ್ರಧಾನಿ ಮೋದಿ

ಕಾಂಗ್ರೆಸ್​  ಹೋರಾಡಬೇಕಿರುವುದು  ಪಾಕ್  ವಿರುದ್ಧ, ನಮ್ಮ ವಿರುದ್ಧವೇ ಅಲ್ಲ -ಪ್ರಧಾನಿ ಮೋದಿ

ತುಮಕೂರು: ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಂತಹವರಿಗೆ ರಕ್ಷಣೆ ನೀಡುವುದು ತಪ್ಪಾ ಎಂಬುದು ಇಲ್ಲಿಯ ಪ್ರಶ್ನೆ. ಪಾಕಿಸ್ತಾನದಿಂದ ಬಂದ ಸಿಖ್ಖರು, ಜೈನರು, ಪಾರ್ಸಿಗಳ ರಕ್ಷಣೆ ಮಾಡುತ್ತಿದ್ದೇವೆ. ಇಂತಹವರ ರಕ್ಷಣೆಗೆ ಮುಂದಾದರೆ ಹೋರಾಟ ಮಾಡ್ತಾರೆ. ಕೆಲವರು ಸಂಸತ್​ ನಿರ್ಣಯದ ವಿರುದ್ಧ ಹೋರಾಡುತ್ತಿದ್ದಾರೆ. ಪಾಕ್​ನಲ್ಲಿ ದಬ್ಬಾಳಿಕೆ ನಡೆಸುತ್ತಿರುವವರ ವಿರುದ್ಧ ಹೋರಾಡಿ. ಪಾಕ್​ನ 70 ವರ್ಷಗಳ ಕರಾಳ ಕಾರ್ಯದ ವಿರುದ್ಧ ಹೋರಾಡಿ ಎಂದು ಪ್ರಧಾನಿ ಮೋದಿ ಕಾಂಗ್ರೆಸ್​ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೂರು ಸಂಕಲ್ಪ ಮಾಡಲು ಪ್ರಧಾನಿ ಮನವಿ:
ನಮ್ಮ ಕರ್ತವ್ಯಗಳಿಗೆ ಪುರಾತನ ಸಂಸ್ಕೃತಿ ಜಾಗೃತಗೊಳಿಸೋಣ. ಪ್ರಕೃತಿ, ಪರಿಸರ ಸಂರಕ್ಷಣೆಗೆ ಪ್ಲ್ಯಾಸ್ಟಿಕ್​ ಮುಕ್ತಗೊಳಿಸೋಣ. ಜಲಸಂರಕ್ಷಣೆಗೆ ಜನಜಾಗೃತಿ ಆಂದೋಲನ ಮಾಡೋಣ ಎಂದು ಸಿದ್ಧಲಿಂಗ ಶ್ರೀಗಳ ಮೂಲಕ ಸಂಕಲ್ಪ ಮಾಡಲು  ತುಮಕೂರಿನ ಸಿದ್ಧಗಂಗಾ ಮಠದಲ್ಲಿ ತಮ್ಮ ಭಾಷಣದ ವೇಳೆ ಪ್ರಧಾನಿ ಮೋದಿ ಕರೆ ನೀಡಿದರು.

Click on your DTH Provider to Add TV9 Kannada