ಹೆಚ್ಚುತ್ತಿವೆ ಥರಹೇವಾರಿ ಆನ್​ಲೈನ್ ದೋಖಾಗಳು! ಕಡಿವಾಣ ಹಾಕಲು ಸಿಬ್ಬಂದಿಯೇ ಇಲ್ಲ..

ಹೆಚ್ಚುತ್ತಿವೆ ಥರಹೇವಾರಿ ಆನ್​ಲೈನ್ ದೋಖಾಗಳು! ಕಡಿವಾಣ ಹಾಕಲು ಸಿಬ್ಬಂದಿಯೇ ಇಲ್ಲ..

ಬೆಂಗಳೂರು: ನಗರದೆಲ್ಲೆಡೆ ಆನ್ ಲೈನ್ ದೋಖಾ ಮಿತಿ ಮೀರುತ್ತಿದೆ. ಹೊಸ ವರ್ಷಕ್ಕೆ ಕಡಿಮೆ ಹಣದಲ್ಲಿ ಆನ್ ಲೈನ್ ಶಾಪಿಂಗ್ ಮಾಡಿ ಅನ್ನುವ ಮಾತುಗಳಿಂದ, ಇಲ್ಲದಿದ್ರೆ ಓಟಿಪಿ ನಂಬರ್ ಕೇಳಿ ಮೋಸ ಮಾಡುತ್ತಿದ್ದಾರೆ. ತಾಂತ್ರಿಕತೆ ಹೆಚ್ಚುತ್ತಿದ್ದಂತೆ ಸೈಬರ್ ಅಪರಾಧಗಳೂ ಸಹ ಹೆಚ್ಚುತ್ತಿವೆ. ಆದ್ರೆ ಆನ್ ಲೈನ್ ಫ್ರಾಡ್ ಕೇಸ್​ಗಳು ಪತ್ತೆಯಾಗೋದು ತೀರ ವಿರಳ. ಕಳ್ಳರೆಲ್ಲ ಹೈ ಟೆಕ್ನಾಲಜಿ ಬಳಸಿ ಆನ್​ಲೈನ್ ದೋಖಾ ಮಾಡುತ್ತಿದ್ದಾರೆ. ಕೂತಲ್ಲೆ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ.

ಆನ್​ಲೈನ್​ ದೋಖಾ ನಡೆದಿದ್ದರೆ ಇಲ್ಲಿ ದೂರು ದಾಖಲಿಸಬಹುದು cyberpolicebangalore

ಮೊದಲು ಸಾವಿರಾರು ಕೇಸ್​ಗಳಿಗೆ ಒಂದೇ ಸೈಬರ್ ಕ್ರೈಂ ಪೊಲೀಸ್ ಠಾಣೆ ಇತ್ತು. ಇತ್ತೀಚಿಗೆ ನಗರದ 8 ವಿಭಾಗಗಳಲ್ಲಿ ಸೈಬರ್ ಠಾಣೆ ಸ್ಥಾಪಿಸಲಾಗಿದೆ. ಸಿಎಂರಿಂದ ಉದ್ಘಾಟನೆ ಸಹ ನಡೆದಿತ್ತು. ಆದರೆ ಇನ್ನು ಠಾಣೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಸಿಬ್ಬಂದಿ ಕೊರತೆ ಹಿನ್ನೆಲೆ ಪೊಲೀಸರು ಕೇಸ್​ಗಳ ಕಡೆ ಹೆಚ್ಚಾಗಿ ಗಮನ ನೀಡುತ್ತಿಲ್ಲ. ಮೊಬೈಲ್ ಬಳಕೆ ಹೆಚ್ಚಿದಂತೆ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಳವಾಗಿದೆ. ಹಾಗಿದ್ರೆ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಕೇಸ್​ಗಳೆಷ್ಟು ಎನ್ನೋದಾದ್ರೆ?

ಮೂರು ವರ್ಷದಲ್ಲಿ ದಾಖಲಾದ ಕೇಸ್​ಗಳು:
2017, 2018 ಮತ್ತು 2019 ರಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಅಂಕಿ ಅಂಶ ಲಭ್ಯವಾಗಿದೆ.

ಡೆಬಿಟ್ ಕ್ರೆಡಿಟ್ ಕಾರ್ಡ್ ಬಳಕೆ ವೇಳೆ ವಂಚನೆ:
2017ರಲ್ಲಿ 880 ಕೇಸ್​ಗಳು ದಾಖಲಾಗಿವೆ. 2018ರಲ್ಲಿ 2446 ಹಾಗೂ 2019ರಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟು 3745 ವಂಚನೆ ಪ್ರಕರಣಗಳು ದಾಖಲಾಗಿವೆ.

ಉದ್ಯೋಗ ವಂಚನೆ ಪ್ರಕರಣ:
2017ರಲ್ಲಿ 172 ಕೇಸ್​ಗಳು, 2018ರಲ್ಲಿ 382 ಕೇಸ್​ಗಳು ಮತ್ತು 2019ರಲ್ಲಿ 482 ಕೇಸ್​ಗಳು ದಾಖಲಾಗಿವೆ.

ಎಟಿಎಂ ದುರ್ಬಳಕೆ ಪ್ರಕರಣ:
2017ರಲ್ಲಿ 395, 2018ರಲ್ಲಿ 663 ಮತ್ತು 2019ರಲ್ಲಿ 2414 ಕೇಸ್​ಗಳು.

ಮ್ಯಾಟ್ರಿಮೋನಿ ವಂಚನೆ:
2017ರಲ್ಲಿ 20, 2018ರಲ್ಲಿ 45 ಹಾಗೂ 2019ರಲ್ಲಿ 80 ಪ್ರಕರಣಗಳು ದಾಖಲಾಗಿವೆ.

ಬ್ಯುಸಿನೆಸ್ ವಂಚನೆ ಪ್ರಕರಣ:
2017ರಲ್ಲಿ 60, 2018ರಲ್ಲಿ 68, 2019ರಲ್ಲಿ142 ಕೇಸ್​ಗಳು.

ಓಎಲ್ ಎಕ್ಸ್ ಹೆಸರಿನಲ್ಲಿ ವಂಚನೆ ಕೇಸ್:
2017ರಲ್ಲಿ290 ಕೇಸ್​ಗಳು, 2018ರಲ್ಲಿ 945 ಕೇಸ್​ಗಳು ಹಾಗೂ 2019ರಲ್ಲಿ ವಂಚನೆ ಜಾಲವೇ ರೂಪುಗೊಂಡಿದ್ದು, 2052 ದೂರುಗಳು ದಾಖಲಾಗಿವೆ.

ಲಾಟರಿ ಫ್ರಾಡ್ ಕೇಸ್​ಗಳು:
2017ರಲ್ಲಿ 53, 2018ರಲ್ಲಿ 53, 2019ರಲ್ಲಿ 87 ಪ್ರಕರಣಗಳು ದಾಖಲಾಗಿವೆ. ಈ ರೀತಿ ವಂಚನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ.

Click on your DTH Provider to Add TV9 Kannada