ನ.13ರಂದು ಮೋದಿ ಕರ್ನಾಟಕ ಪ್ರವಾಸ: ಯಾವಾಗ ಎಲ್ಲಿಗೆ ಭೇಟಿ? ವೇಳಾಪಟ್ಟಿ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ನವೆಂಬರ್ 13ರಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ, ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಮೈಸೂರಿನಲ್ಲಿ ಭಾರತ್ ವನ್ ಕಾರ್ಯಕ್ರಮ ಮತ್ತು COSMOS ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರ ಬೆಂಗಳೂರು ಮತ್ತು ಮೈಸೂರು ಪ್ರವಾಸದ ಸಂಪೂರ್ಣ ವೇಳಾಪಟ್ಟಿ, ಕಾರ್ಯಕ್ರಮಗಳ ಸಮಯದ ವಿವರ ಇಲ್ಲಿದೆ.

ನ.13ರಂದು ಮೋದಿ ಕರ್ನಾಟಕ ಪ್ರವಾಸ: ಯಾವಾಗ ಎಲ್ಲಿಗೆ ಭೇಟಿ? ವೇಳಾಪಟ್ಟಿ ಇಲ್ಲಿದೆ
ನರೇಂದ್ರ ಮೋದಿ
Edited By:

Updated on: Nov 10, 2026 | 1:06 PM

ಮುಖ್ಯಾಂಶಗಳು

  • ನವೆಂಬರ್ 13ರಂದು ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ, ಬೆಂಗಳೂರು-ಮೈಸೂರಿನಲ್ಲಿ ಹಲವು ಕಾರ್ಯಕ್ರಮಗಳು
  • ತಾವರೆಕೆರೆ ಮೆಟ್ರೋ ನಿಲ್ದಾಣದಿಂದ ಐಐಎಂವರೆಗೆ ಮೆಟ್ರೋದಲ್ಲಿ ಮೋದಿ ಪ್ರಯಾಣ
  • ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ, ಭಾರತ್ ವನ್ ಹಾಗೂ COSMOS ಉದ್ಘಾಟನೆ

ಬೆಂಗಳೂರು, ನಬವೆಂಬರ್ 10: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಶಾಂತಿ ಕುಟೀರಂನ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೆ, ಮೆಟ್ರೋದಲ್ಲಿ ಪ್ರಯಾಣಿಸಿ ಐಐಎಂ ಬೆಂಗಳೂರು ಮೆಟ್ರೋ ನಿಲ್ದಾಣದವರೆಗೆ ತೆರಳಲಿದ್ದಾರೆ. ಬೆಂಗಳೂರಿನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ಮೈಸೂರಿಗೆ ತೆರಳಿ ಭಾರತ್ ವನ್ ಕಾರ್ಯಕ್ರಮ ಹಾಗೂ COSMOS ಮೈಸೂರು ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.

ಮೋದಿ ಪ್ರವಾಸದ ವೇಳಾಪಟ್ಟಿ ಇಲ್ಲಿದೆ

ಬೆಳಗ್ಗೆ ಬೆಂಗಳೂರಿಗೆ ಆಗಮನ

Loading...
  • 07:20 AM: ದೆಹಲಿಯಿಂದ IAF BBJ ವಿಮಾನದ ಮೂಲಕ ಪ್ರಯಾಣ ಆರಂಭ.
  • 10:10 AM: HAL ವಿಮಾನ ನಿಲ್ದಾಣಕ್ಕೆ ಆಗಮನ.
  • 10:10 AM: MI-17 ಹೆಲಿಕಾಪ್ಟರ್ ಮೂಲಕ ಪ್ರಯಾಣ.
  • 10:30 AM: ಬೆಂಗಳೂರು ಹೆಲಿಪ್ಯಾಡ್-1ಕ್ಕೆ ಆಗಮನ.
  • 10:35 AM: ಹೆಲಿಪ್ಯಾಡ್-1ರಿಂದ ರಸ್ತೆ ಮಾರ್ಗವಾಗಿ ಪ್ರಯಾಣ.
  • 10:40 AM: ಸಾರ್ವಜನಿಕ ಕಾರ್ಯಕ್ರಮದ ಸ್ಥಳಕ್ಕೆ ಆಗಮನ.
  • 10:45 AM – 12:00 PM: ಪ್ರಶಾಂತಿ ಕುಟೀರಂನ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಗಿ.

ಮಧ್ಯಾಹ್ನ ಮೆಟ್ರೋ ಸಂಚಾರ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

  • 12:00 PM: ಕಾರ್ಯಕ್ರಮದ ಸ್ಥಳದಿಂದ ನಿರ್ಗಮನ.
  • 12:05 PM: ಬೆಂಗಳೂರು ಹೆಲಿಪ್ಯಾಡ್-1ಕ್ಕೆ ಆಗಮನ.
  • 12:10 PM: MI-17 ಹೆಲಿಕಾಪ್ಟರ್ ಮೂಲಕ ಪ್ರಯಾಣ.
  • 12:30 PM: ಬೆಂಗಳೂರು ಹೆಲಿಪ್ಯಾಡ್-2ಕ್ಕೆ ಆಗಮನ.
  • 12:35 PM: ಹೆಲಿಪ್ಯಾಡ್-2ರಿಂದ ರಸ್ತೆ ಮಾರ್ಗವಾಗಿ ಪ್ರಯಾಣ.
  • 12:40 PM: ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಆಗಮನ.
  • 12:45 PM – 01:05 PM: ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ಹಾಗೂ ರೈಲಿನಲ್ಲಿ ಪ್ರಯಾಣ.
  • 01:05 PM: ಐಐಎಂ ಬೆಂಗಳೂರು ಮೆಟ್ರೋ ನಿಲ್ದಾಣದಿಂದ ನಿರ್ಗಮನ.
  • 01:10 PM: ಐಐಎಂ ಬೆಂಗಳೂರು ಸಭಾಂಗಣಕ್ಕೆ ಆಗಮನ.
  • 01:15 PM – 02:15 PM: ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಷ್ಟ್ರಕ್ಕೆ ಸಮರ್ಪಣೆ.
  • 02:20 PM: ಕಾರ್ಯಕ್ರಮದ ಸ್ಥಳದಿಂದ ನಿರ್ಗಮನ.
  • 02:25 PM: ಬೆಂಗಳೂರು ಹೆಲಿಪ್ಯಾಡ್-2ಕ್ಕೆ ಆಗಮನ.
  • 02:30 PM: MI-17 ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ.

ಸಂಜೆಯೇ ಮೈಸೂರು ಕಾರ್ಯಕ್ರಮಗಳು

  • 03:20 PM: ಮೈಸೂರು ಹೆಲಿಪ್ಯಾಡ್‌ಗೆ ಆಗಮನ.
  • 03:25 PM: ಹೆಲಿಪ್ಯಾಡ್‌ನಿಂದ ರಸ್ತೆ ಮಾರ್ಗವಾಗಿ ಪ್ರಯಾಣ.
  • 03:30 PM: ಕೆ.ಸಿ. ಲೇಔಟ್ ಪಾರ್ಕ್‌ಗೆ ಆಗಮನ.
  • 03:30 PM – 03:45 PM: ಭಾರತ್ ವನ್ ಕಾರ್ಯಕ್ರಮದಲ್ಲಿ ಭಾಗಿ.
  • 03:50 PM: ಕಾರ್ಯಕ್ರಮದ ಸ್ಥಳದಿಂದ ನಿರ್ಗಮನ.
  • 03:55 PM: COSMOS ಮೈಸೂರು ಕಾರ್ಯಕ್ರಮದ ಸ್ಥಳಕ್ಕೆ ಆಗಮನ.
  • 04:00 PM – 05:45 PM: COSMOS ಮೈಸೂರು ಉದ್ಘಾಟನೆ.
  • 05:45 PM: ಕಾರ್ಯಕ್ರಮದ ಸ್ಥಳದಿಂದ ನಿರ್ಗಮನ.
  • 06:00 PM: ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ.
  • 06:05 PM: IAF BBJ ವಿಮಾನದ ಮೂಲಕ ದೆಹಲಿಗೆ ಪ್ರಯಾಣ.
  • 08:55 PM: ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮನ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಈ ಒಂದು ದಿನದ ಕರ್ನಾಟಕ ಪ್ರವಾಸದಲ್ಲಿ ಬೆಂಗಳೂರು ಮತ್ತು ಮೈಸೂರಿನ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರೆಯಲಿದೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ಸಿದ್ಧತೆಗಳು ನಡೆಯುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Tue, 10 November 26

ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More
Loading...
Unable to load recommendations.
Follow Us