ಮೃತ ನವೀನ್​ನ ಕುಟುಂಬಸ್ಥರನ್ನು ಭೇಟಿಯಾಗಿ ಭಾವುಕರಾದ ಪ್ರಧಾನಿ ಮೋದಿ

| Updated By: ವಿವೇಕ ಬಿರಾದಾರ

Updated on: Jun 20, 2022 | 8:40 PM

ಷ್ಯಾ-ಉಕ್ರೇನ್​​​ ಯುದ್ಧದಲ್ಲಿ ಕರುನಾಡಿನ ಹಾವೇರಿ ಜಿಲ್ಲೆಯ MBBS ವಿದ್ಯಾರ್ಥಿ ನವೀನ ಸಾವನ್ನಪ್ಪಿದ್ದು, ಇಂದು (ಜೂನ್​​ 20) ರಂದು ವಿದ್ಯಾರ್ಥಿ ನವೀನ ತಂದೆ ಶೇಖರಗೌಡ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

ಮೃತ ನವೀನ್​ನ ಕುಟುಂಬಸ್ಥರನ್ನು ಭೇಟಿಯಾಗಿ ಭಾವುಕರಾದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮೃತ ನವೀನ್​ ಕುಟುಂಬ
Follow us on

ಬೆಂಗಳೂರು: ರಷ್ಯಾ-ಉಕ್ರೇನ್ ​​ಯುದ್ಧದಲ್ಲಿ (Russia-Ukraine war) ಕರುನಾಡಿನ ಹಾವೇರಿ (Haveri) ಜಿಲ್ಲೆಯ MBBS ವಿದ್ಯಾರ್ಥಿ ನವೀನ (Naveen) ಸಾವನ್ನಪ್ಪಿದ್ದು, ಇಂದು (ಜೂನ್​​ 20) ರಂದು ವಿದ್ಯಾರ್ಥಿ ನವೀನ ತಂದೆ ಶೇಖರಗೌಡ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಭೇಟಿಯಾದ ಬಳಿಕೆ ಟಿವಿ9ಗೆ ಮಾಹಿತಿ ನೀಡಿದ ಅವರು ನಾಲ್ಕೈದು ನಿಮಿಷಗಳ ಕಾಲ‌ ಪ್ರಧಾನಿಯವರು ನಮ್ಮ ಜೊತೆ ಮಾತನಾಡಿದರು. ನಮ್ಮ ಕಣ್ಣೀರು ನೋಡಿ ಪ್ರಧಾನಿ ನರೇಂದ್ರ ಮೋದಿಯವರು ಭಾವುಕರಾದರು. ಮಗನ ಸಾವಿನ ದುಃಖದಲ್ಲೂ ಮಗನ ದೇಹದಾನ ಮಾಡಿದ್ದಕ್ಕೆ ಪಿಎಂ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿಸಿದರು.

ಇದನ್ನು ಓದಿ: ಮೈಸೂರಿನಲ್ಲಿ ಮೋದಿ ಕಾರ್ಯಕ್ರಮ: ವೇದಿಕೆ ಮೇಲೆ ಮಂಡ್ಯ ಸಂಸದೆ ಸುಮಲತಾ ಪ್ರತ್ಯಕ್ಷ!

ನವೀನ ಮೃತಪಟ್ಟ ನಂತರ ನಿಮ್ಮ ಭೇಟಿಗೆ ಬರಬೇಕಾಗಿತ್ತು. ಆದರೆ ಈಗ ಕಾಲ ಕೂಡಿ ಬಂತು. ನವೀನ ಸಹೋದರ ಹರ್ಷನನ್ನು ನೋಡಿದರೆ ಹರ್ಷ ಕೂಡ ಪ್ರತಿಭಾವಂತ ಇದ್ದಾನೆ. ಉಕ್ರೇನ್ ನಿಂದ ಬಂದ ಎಂಬಿಬಿಎಸ್ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ವ್ಯವಸ್ಥೆ ಮಾಡುವಂತೆ ಕೇಳಿದೆವು. ಪ್ರಯತ್ನ ಮಾಡುತ್ತೇವೆ ಅಂತಾ ಹೇಳಿದರು.
ನಮಗೆ ಧೈರ್ಯವಾಗಿ ಇರುವಂತೆ ಧೈರ್ಯ ತುಂಬಿದರು ಎಂದು ಹೇಳಿದರು.

ಇದನ್ನು ಓದಿ: International Day of Yoga 2022: ಯೋಗ ದಿನದ ಬಗ್ಗೆ ನಿಮಗೆಷ್ಟು ಗೊತ್ತು? ನಮ್ಮ ಸಿಂಪಲ್​ ಪ್ರಶ್ನೆಗಳಿಗೆ ಉತ್ತರಿಸಿ !

ನವೀನ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮೀ ಮತ್ತು ನವೀನ ಸಹೋದರ ಹರ್ಷನನ್ನು ಬೆಂಗಳೂರಿನ ಕುಮ್ಮಘಟ್ಟದ ಕಾರ್ಯಕ್ರಮ ಸ್ಥಳದ ಹಿಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Mon, 20 June 22