PM Modi Speech: ನನ್ನ ಪ್ರೀತಿಯ ಕರುನಾಡಿನ ಜನತೆಗೆ ನಮಸ್ಕಾರಗಳು; ಕನ್ನಡದಲ್ಲೇ ಭಾಷಣ ಆರಂಭಿಸಿ, ಕರುನಾಡನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ
ಡಬಲ್ ಇಂಜಿನ್ ಕರ್ನಾಟಕದ ಅಭಿವೃದ್ಧಿಗೆ ಭರವಸೆ ನೀಡಿತ್ತು. ಆ ಭರವಸೆಗಳಿಗೆ ಇಂದು ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ನಿಮ್ಮ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ಮೋದಿ ಹೇಳಿದರು.
ಬೆಂಗಳೂರು: ಕೊಮ್ಮಘಟ್ಟದಲ್ಲಿ ಇಂದು (ಜೂನ್ 20) ನಡೆದ ‘ಪ್ರಧಾನಿ ಸಾರ್ವಜನಿಕ ಕಾರ್ಯಕ್ರಮದಲ್ಲಿ’ ದೇಶದ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಕೆಲ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ, ಬಳಿಕ ಭಾಷಣ ಮಾಡಿದರು. ಭಾಷಣದ ಆರಂಭದಲ್ಲಿ ‘ಕರುನಾಡಿನ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಹೇಳಿದರು. ಬಳಿಕ ‘ಬೆಂಗಳೂರಿಗೆ ಮಹಾಜನತೆಗೆ ವಿಶೇಷವಾದ ನಮಸ್ಕಾರಗಳು. ಕರ್ನಾಟಕದ ಜನರ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಮೂಲಭೂತ ಯೋಜನೆಗಳಿಗೆ ಜಾರಿಗೊಳಿಸಲು ಸಂತೋಷವಾಗುತ್ತಿದೆ’ ಎಂದು ಕನ್ನಡದಲ್ಲಿ ಮೋದಿ ಮಾತನಾಡಿ ಸಂತಸ ವ್ಯಕ್ತಪಡಿಸಿದರು .
ಮುಂದುವರಿದು ಮಾತನಾಡಿದ ಮೋದಿ, ಡಬಲ್ ಇಂಜಿನ್ ಕರ್ನಾಟಕದ ಅಭಿವೃದ್ಧಿಗೆ ಭರವಸೆ ನೀಡಿತ್ತು. ಆ ಭರವಸೆಗಳಿಗೆ ಇಂದು ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ನಿಮ್ಮ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಇಲ್ಲಿ ಬರುವುದಕ್ಕಿಂತ ಮುಂಚೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ಭೇಟಿ ನೀಡಿದ್ದೆ. ಇಲ್ಲಿಂದ ಹೊಸದನ್ನು ಏನೋ ತೆಗೆದುಕೊಂಡು ಹೋಗುತ್ತಿದ್ದೇನೆ. ಕರ್ನಾಟಕದಲ್ಲಿ 5 ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತು 7 ರೈಲು ಯೋಜನೆಗೆ ಚಾಲನೆ ನೀಡಿದ್ದೇವೆ ಎಂದರು.
ಬೆಂಗಳೂರು ಕನಸುಗಳು ನಗರ: ಬೆಂಗಳೂರು ಕನಸುಗಳು ನಗರವಾಗಿದೆ ಎಂದು ಭಾಷಣದಲ್ಲಿ ಹೇಳಿಕೆ ನೀಡಿದ ಮೋದಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಯೋಜನೆ ತಂದಿದ್ದೇವೆ. ಕಳೆದ 40 ವರ್ಷಗಳಿಂದ ಕೇವಲ ಚರ್ಚೆಯಲ್ಲಿ ಸಮಯ ಕಳೆದರು. ನಮ್ಮ ಸರ್ಕಾರ ಬಂದ ಮೇಲೆ ಕೇವಲ 40 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಹಿಂದಿನ 40 ವರ್ಷಗಳಲ್ಲೇ ಯೋಜನೆ ಮಾಡಿದ್ರೆ ಕಥೆ ಬೇರೆ ಇರ್ತಿತ್ತು. ಆದರೆ ನಾವು ಬೆಂಗಳೂರು ನಗರ ರೈಲು ಯೋಜನೆ ಮಾಡುತ್ತೇವೆ. ಪ್ರತಿ ಕ್ಷಣವನ್ನು ನಿಮ್ಮ ಸೇವೆಗೆ ಸಮಯವನ್ನು ಮೀಸಲಿಟ್ಟಿದ್ದೇವೆ. ಸುರಕ್ಷತೆ ಮತ್ತು ನಾಗರಿಕ ಸ್ನೇಹಿ ನಗರವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ತಾಕತ್ತು ಬಹಳ ದೊಡ್ಡದ್ದು: ದೇಶದಲ್ಲಿ 21ನೇ ಶತಮಾನದಲ್ಲಿ ಬೆಂಗಳೂರು ನಗರ ಆತ್ಮನಿರ್ಭರ್ ಶಕ್ತಿಗೆ ಪ್ರೇರಣೆ ನೀಡಿದೆ. ಭಾರತೀಯ ಯುವ ಜನರು ಮನಸು ಮಾಡಿದರೆ ಎಲ್ಲವನ್ನೂ ಸಾಧಿಸುತ್ತಾರೆ. ಬೆಂಗಳೂರು ತಾಕತ್ತು ಬಹಳ ದೊಡ್ಡದ್ದು. ಜನರ ಮನಸ್ಥಿತಿಯನ್ನು ಬದಲಾವಣೆಗೆ ಹೊಂದಿಸುವಂತೆ ಮಾಡುತ್ತೆ. ದೇಶದ ಸ್ಟಾರ್ಟ್ ಅಪ್ ಕೇಂದ್ರಗಳಲ್ಲಿ ಬೆಂಗಳೂರಿನ ಕೇಂದ್ರ ಅತಿ ದೊಡ್ಡದ್ದು. ಕಳೆದ 8 ವರ್ಷಗಳಿಂದ ವಿದೇಶಿ ಕಂಪನಿಗಳು ಹೂಡಿಕೆಗೆ ನಿರಂತರವಾಗಿ ಬರುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ.
ಯುವಕರಿಗೆ ಉದ್ಯೋಗ ನೀಡ್ತೇವೆ- ಮೋದಿ: ಹಿಂದಿನ ಆಡಳಿತದಲ್ಲಿ ಸಮರ್ಥ ಯುವಜನತೆ ಸಾಮರ್ಥ್ಯಕ್ಕೆ ಪೆಟ್ಟು ಬಿದ್ದಿದೆ. ಆದ್ರೆ ಯುವಕರ ಸಾಮರ್ಥ್ಯ ಸದುಪಯೋಗಪಡಿಸಲು ನಾವು ಸಿದ್ಧ. ಖಾಸಗಿ ಉದ್ಯಮಗಳ ಮೂಲಕ ಯುವಕರಿಗೆ ಉದ್ಯೋಗ ನೀಡ್ತೇವೆ. ಇ-ಮಾರ್ಕೆಟ್ ರೂಪದಲ್ಲಿ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಭಾರತದ ಎಕೋ ಸಿಸ್ಟಮ್ ಸ್ಟಾರ್ಟ್ ಅಪ್‌ಗಳ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. 100ಕ್ಕೂ ಹೆಚ್ಚು ಕಂಪನಿಗಳಿಂದ ಬಿಲಿಯನ್ ಡಾಲರ್ ವಹಿವಾಟು ನಡೆದಿದೆ. 8 ವರ್ಷಗಳಿಂದ ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಿದೆ. ಸ್ಟಾರ್ಟ್ ಅಪ್ ಹಾಗೂ ಅನ್ವೇಷಣಾ ಕ್ಷೇತ್ರ ಸುಲಭ ಅಲ್ಲವೇ ಅಲ್ಲ ಎಂದು ಪ್ರಧಾನಿ ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಭರವಸೆ ನೀಡಿ ಪ್ರಧಾನಿ ಭಾಷಣ ಮುಗಿಸಿದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Mon, 20 June 22