Yoga in Hampi: ಪರಂಪರೆಯ ಸ್ಥಳದಲ್ಲಿ ಯೋಗ ಮಾಡಬೇಕು ಅನ್ನೋದು ಮೋದಿ ಮನ್ ಕೀ ಬಾತ್ -ಪ್ರಧಾನಿ ಮನದ ಮಾತಿಗೆ ಹಂಪಿಯಿಂದಲೇ ಜೋಶಿ ಯೋಗದ ಸಾಥ್!
ಹಂಪಿಯ ಹಿರಿಮೆಯನ್ನು ಪ್ರಪಂಚಕ್ಕೆ ಮತ್ತಷ್ಟು ಹತ್ತಿರವಾಗಿಸಲು, ವಿದೇಶಿಗರನ್ನು ಹಂಪಿಯತ್ತ ಸೆಳೆಯುವ ನಿಟ್ಟಿನಲ್ಲಿ ಈ ಬಾರಿಯ ಯೋಗ ದಿನ ಪೂರಕವಾಗಲಿದೆ. ದೇಶದ ಪಾರಂಪರಿಕ ಪ್ರದೇಶಗಳನ್ನು ವಿಶ್ವಕ್ಕೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಸಂದೇಶ ಪಾಲಿಸುವ ಮೂಲಕ ಹಂಪಿಯ ಹಿರಿಮೆಯನ್ನು ಎತ್ತಿ ಹಿಡಿಯಲು ಹೊರಟಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
ನಮ್ಮ ದೇಶ ವಿಶ್ವಕ್ಕೆ ಯೋಗ ಗುರು ಆಗಿದೆ. ಭಾರತದ ಪುರಾತನ ಯೋಗ ಪರಂಪರೆ ಇಂದು ಪ್ರಪಂಚದಾದ್ಯಂತ ಚಿರಪರಿಚಿತ. ಪ್ರಧಾನಿ ಮೋದಿ (Narendra Modi) ಅವರು ಯೋಗ ಸಂಸ್ಕೃತಿಯನ್ನು ಜಗದ್ವಿಖ್ಯಾತಗೊಳಿಸಿ, ಈ ದೇಶದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದವರು. ಪ್ರಧಾನಿ ಮೋದಿ ಅವರು ಈ ದೇಶದ ಸಂಸ್ಕೃತಿ – ಸಂಸ್ಕಾರಗಳನ್ನು ಜಗತ್ತಿನಾದ್ಯಂತ ಹರಡುವಂತೆ ಮಾಡುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡವರು. ಇವುಗಳಲ್ಲಿ ಭಾರತದ ಯೋಗಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಸಹ ಘೋಷಣೆ ಮಾಡಿದವರು. 21 ಜೂನ್ ಅನ್ನು ಅಂತರಾಷ್ಟ್ರೀಯ ಯೋಗ ದಿನ ಅಂತ 2015 ರಲ್ಲಿ ಘೋಷಣೆ ಮಾಡಿ, ಇವತ್ತಿಗೂ ಆಚರಣೆ ಮಾಡ್ಕೊಂಡು ಬರ್ತಾ ಇರೋದು ಸಂತಸದ ವಿಚಾರ (International Yoga Day 2022).
ಈ ಬಾರಿಯ ಯೋಗ ದಿನ ಜೂನ್ 21ರಂದು ಭಾರತದ ಪಾರಂಪರಿಕ ತಾಣಗಳನ್ನು (Yoga Utsav 2022 Hampi) ಜಗತ್ತಿಗೆ ಪರಿಚಯ ಮಾಡೋ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಚಿಂತನೆ ನಡೆಸಿದ್ದಾರೆ. ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗ ದಿನದಂದು ದೇಶದ ಪಾರಂಪರಿಕ ಸ್ಥಳಗಳನ್ನು ಗುರುತಿಸಿ, ಅಲ್ಲಿ ಯೋಗ ಮಾಡುವಂತೆ ಮನ್ ಕೀ ಬಾತ್ ಮೂಲಕ ಪ್ರಧಾನಿ ಕರೆ ಕೊಟ್ಟಿದ್ದಾರೆ. ಈ ಬಾರಿಯ ಯೋಗ ದಿನದಂದು ನಿಮ್ಮ ಸಮೀಪ ಇರುವ ಪಾರಂಪರಿಕ ಸ್ಥಳಗಳಲ್ಲಿ ಯೋಗ ಮಾಡಿ. ಇದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತೆ. ಆಗ ನಮ್ಮ ದೇಶದ ಯೋಗದ ಜೊತೆಗೆ, ಇಲ್ಲಿನ ಪಾರಂಪರಿಕ ಸ್ಥಳಗಳೇನಿವೆ ಅವುಗಳು ಸಹ ಜಗತ್ತಿನ ಗಮನ ಸೆಳೆಯುತ್ತೆ. ಜಗದ್ವಿಖ್ಯಾತ ಆಗುತ್ತೆ ಅಂತ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಅವರು ಹೇಳಿದ್ರು.
ಪ್ರಧಾನಿ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಯೋಗ ದಿನವನ್ನು ವಿಶೇಷವಾದ ಕರ್ನಾಟಕದ ಸ್ಥಳವೊಂದರಲ್ಲಿ ಹಲವಾರು ಜನ ಯೋಗಿಗಳು, ಪ್ರಸಿದ್ಧರ ಜೊತೆಗೆ ಯೋಗ ಮಾಡುವ ನಿರ್ಣಯ ಮಾಡಿದ್ದಾರೆ.
ವಿದೇಶಿಗರನ್ನು ನಮ್ಮ ಹಂಪಿಯತ್ತ ಸೆಳೆಯಲು ಈ ಬಾರಿಯ ಯೋಗ ದಿನ ಪೂರಕ:
ಉತ್ತರ ಕರ್ನಾಟಕದ ಪಾರಂಪರಿಕ ಸ್ಥಳ, ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜಗದ್ವಿಖ್ಯಾತ ಹಂಪಿಯಲ್ಲಿ ನಡೆಯುವ ಯೋಗದಿನದಲ್ಲಿ ಜೋಶಿ ಅವರು ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ 5000 ಮಂದಿ ಯೋಗಿಗಳು ಕೂಡಾ ಭಾಗವಹಿಸಲಿದ್ದಾರೆ. ಇನ್ನು ಕೇಂದ್ರ ಸಚಿವ ಜೋಶಿ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಇದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ನೇರಪ್ರಸಾರ ಆಗಲಿದೆ. ಆ ಮೂಲಕ ಹಂಪಿಯ ಸೊಬಗು ವಿದೇಶಿಗರನ್ನು ಇನ್ನಷ್ಟು ತಲುಪಲಿದೆ. ಪ್ರವಾಸಿಗರನ್ನು ಆಕರ್ಷಿಸುವುದಕ್ಕೂ ಸಹಕಾರಿಯಾಗಲಿದೆ.
Hampi is one of the UNESCO World Heritage Sites which possesses alluring & ancient temples, forts & other monuments. The splendid town was the capital of the Vijayanagar Empire around 1500 AD, & as per historical records, the second-largest city in the world during that era. pic.twitter.com/IgtgTX3Wgk
— Pralhad Joshi (@JoshiPralhad) June 16, 2022
ಹಂಪಿ ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ, ಪ್ರೇಕ್ಷಣೀಯ ಸ್ಥಳವಾಗಿದ್ದು, ಇದು ಜೋಶಿ ಅವರ ಕಾರ್ಯಕ್ಷೇತ್ರ ಹುಬ್ಬಳ್ಳಿಗೆ ಸಹ ಸಮೀಪದಲ್ಲಿದೆ. ಹೀಗಾಗಿ ಇದೇ ಸ್ಥಳವನ್ನು ಜಗತ್ತಿಗೆ ಯೋಗದ ಜೊತೆಗೆ ಮತ್ತಷ್ಟು ಪರಿಚಯ ಮಾಡುವ ನಿಟ್ಟಿನಲ್ಲಿ ಜೋಶಿ ಅವರು ಈ ಬಾರಿಯ ಯೋಗ ದಿನವನ್ನು ಜೂನ್ 21 ರಂದು ಹಂಪಿಯಲ್ಲಿ ಆಚರಿಸ್ತಾರೆ. ಇದರಲ್ಲಿ ಸಾವಿರಾರು ಮಂದಿ ಯೋಗಿಗಳು ಸಹ ಭಾಗವಹಿಸ್ತಾರೆ. ಪತಂಜಲಿ, ಆರ್ಟ್ ಆಫ್ ಲಿವಿಂಗ್, ಬ್ರಹ್ಮಕುಮಾರಿ ಸೇರಿದಂತೆ ಇನ್ನೂ ಹಲವು ಕೇಂದ್ರಗಳ ಯೋಗಿಗಳು, ಚಲನಚಿತ್ರ ನಟರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಹೀಗೆ ಹಲವಾರು ಜನರ ಸಮ್ಮುಖದಲ್ಲಿ, ಹಲವಾರು ಜನರ ಭಾಗವಹಿಸುವಿಕೆಯಲ್ಲಿ, ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆಯುವ "ಯೋಗೋತ್ಸವ-2022"ವು ನಮ್ಮ ದೇಶದ ಹೆಮ್ಮೆಯ ಐತಿಹಾಸಿಕ ತಾಣವಾದ ಹಂಪಿಯಲ್ಲಿ ನಡೆಯಲಿದೆ. ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿದ್ದು, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಂತಹ ಸ್ಥಳದಲ್ಲಿ ಯೋಗದಿನ ನಡೆಯಲಿದ್ದು, ತಾವೆಲ್ಲರೂ ಭಾಗವಹಿಸಬಹುದಾಗಿದೆ.#YogaIndia #IDY2022 pic.twitter.com/nvfUDnCmn0
— Pralhad Joshi (@JoshiPralhad) June 17, 2022
ಹಂಪಿಯ ಹಿರಿಮೆಯನ್ನು ಪ್ರಪಂಚಕ್ಕೆ ಮತ್ತಷ್ಟು ಹತ್ತಿರವಾಗಿಸಲು, ವಿದೇಶಿಗರನ್ನು ಹಂಪಿಯತ್ತ ಸೆಳೆಯುವ ನಿಟ್ಟಿನಲ್ಲಿ ಈ ಬಾರಿಯ ಯೋಗ ದಿನ ಪೂರಕವಾಗಲಿದೆ. ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಸುವಲ್ಲಿ ಯೋಗ ಸಹಕಾರಿ ಆದ್ರೆ, ಈ ದೇಶದ ಪಾರಂಪರಿಕ ಪ್ರದೇಶಗಳನ್ನು ಇಡೀ ವಿಶ್ವಕ್ಕೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಸಂದೇಶ ಮತ್ತಷ್ಟು ವಿಶೇಷವಾದದ್ದು. ಅವರ ಸಂದೇಶವನ್ನು ಪಾಲಿಸುವ ಮೂಲಕ ಹಂಪಿಯ ಹಿರಿಮೆಯನ್ನು ಎತ್ತಿ ಹಿಡಿಯಲು ಹೊರಟ ಪ್ರಲ್ಹಾದ ಜೋಶಿ ಅವರ ನಿಲುವಿಗೆ ಹ್ಯಾಟ್ಸ್ ಆಫ್.