International Yoga Day 2022: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಯೋಗಾಸನಗಳು ಸಹಕಾರಿ

ಯೋಗವನ್ನು ಸರಿಯಾದ ವಯಸ್ಸಿನಲ್ಲಿ ಮಕ್ಕಳು ತಮ್ಮ ಜೀವನದಲ್ಲಿ ಪ್ರತಿದಿನ ಅಳವಡಿಸಿಕೊಳ್ಳುವುದರಿಂದ ಅವರ ಎತ್ತರ ಹೆಚ್ಚಿಸಲು ಮತ್ತು ಅವರನ್ನು ಕ್ರಿಯಾಶೀಲರನ್ನಾಗಿಸಲು ಸಹಾಯ ಮಾಡುತ್ತದೆ. 

International Yoga Day 2022: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಯೋಗಾಸನಗಳು ಸಹಕಾರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 20, 2022 | 10:26 AM

ಪ್ರತಿಯೊಬ್ಬ ಪೋಷಕರು ಬಯಸುವುದೇನೆಂದರೆ ತಮ್ಮ ಮಕ್ಕಳು ಉತ್ತಮ ಸ್ಮರಣ (Memory)  ಶಕ್ತಿ ಮತ್ತು ಆರೋಗ್ಯ ಮನಸ್ಸನ್ನು ಹೊಂದಲಿ ಎನ್ನುವುದು. ಕೋವಿಡ್​ ಸಂದರ್ಭದಲ್ಲಿ ಲಾಕ್‌ಡೌನ್‌ ಮಾಡಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ ಆನ್‌ಲೈನ್ ತರಗತಿಗಳಲ್ಲಿ ಮಕ್ಕಳು ಮುಳಗು ಹೋಗಿದ್ದರು. ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ಒಂದು ರೀತಿಯಲ್ಲಿ ಮಕ್ಕಳಲ್ಲಿ ಸೋಮಾರಿತ ಉಂಟಾಗಿತ್ತು. ವೃದ್ಧಾಪ್ಯದಲ್ಲಿ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ದೇಹವನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗುತ್ತದೆ. ಅಲ್ಲದೆ, ಯೋಗವನ್ನು ಸರಿಯಾದ ವಯಸ್ಸಿನಲ್ಲಿ ಮಕ್ಕಳು ತಮ್ಮ ಜೀವನದಲ್ಲಿ ಪ್ರತಿದಿನ ಅಳವಡಿಸಿಕೊಳ್ಳುವುದರಿಂದ ಅವರ ಎತ್ತರ ಹೆಚ್ಚಿಸಲು ಮತ್ತು ಅವರನ್ನು ಕ್ರಿಯಾಶೀಲರನ್ನಾಗಿಸಲು ಸಹಾಯ ಮಾಡುತ್ತದೆ.   ಸ್ವಾಮಿ ರಾಮ್‌ದೇವ್ ಪ್ರಕಾರ, ಯೋಗ ಮಾಡುವುದರಿಂದ ಮಕ್ಕಳು ಉತ್ತಮ ಆರೋಗ್ಯ ಹೊಂದುವುದರ ಮೂಲಕ ಮಾನಸಿಕವಾಗಿ ಬಲಶಾಲಿಯಾಗುತ್ತಾರೆ. ಅವರು ತಮ್ಮ ದೇಹವನ್ನು ಉತ್ತಮ ರೀತಿಯಲ್ಲಿ ದಂಡಿಸುವುದರಿಂದ ಅವರು ಹೆಚ್ಚು ಆತ್ಮವಿಶ್ವಾಸವನ್ನು ಹೊಂದುತ್ತಾರೆ. ಆದ್ದರಿಂದ, ಮಕ್ಕಳು ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಯೋಗವನ್ನು ಮಾಡುವುದು ಮುಖ್ಯ ಎಂದು ಹೇಳುತ್ತಾರೆ. ಮಕ್ಕಳಿಗೆ ಪೂರಕವಾಗುವಂತಹ ಕೆಲವೊಂದು ಯೋಗಾಸನಗಳು ಇಲ್ಲಿವೆ ಮುಂದೆ ಓದಿ.

ಎತ್ತರ ಹೆಚ್ಚಿಸಿಕೊಳ್ಳಲು ಯೋಗಾಸನಗಳು:

ಯೋಗಾಸನಗಳಾದ ತಾಡಾಸನ, ಸರ್ವಾಂಗಸ್ನ, ಹಲಾಸನ ಮತ್ತು ಇತರ ಯೋಗಾಸನಗಳು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಈ ಯೋಗ ಆಸನಗಳು, ಮಕ್ಕಳಲ್ಲಿ ದೃಷ್ಟಿ ಮತ್ತು ಸ್ಮರಣ ಶಕ್ತಿಯನ್ನು ಚುರುಕುಗೊಳಿಸುತ್ತವೆ.

ತಾಡಾಸನ: ಈ ಆಸನವನ್ನು ಮಾಡುವುದರಿಂದ ಮಕ್ಕಳ ತಮ್ಮ ಎತ್ತರವು ವೇಗವಾಗಿ ಹೆಚ್ಚಿಕೊಳ್ಳಬಹುದು. ಈ ಆಸನವನ್ನು 5 ರಿಂದ 10 ನಿಮಿಷಗಳ ಕಾಲ ಮಾಡಬೇಕು.

ಸರ್ವಾಂಗಾಸನ: ಮಕ್ಕಳು ಈ ಆಸನ ಮಾಡುವುದರಿಂದ ದೇಹವು ಸಂಪೂರ್ಣ ಆರೋಗ್ಯಕರವಾಗಿರುತ್ತದೆ.

ಹಲಾಸನ: ಈ ಆಸನವನ್ನು ಮಾಡುವುದರಿಂದ ಮಕ್ಕಳು ಸ್ಥೂಲಕಾಯದಿಂದ ಪಾರಾಗಲು ಸಹಾಯ ಮಾಡುತ್ತದೆ. ಮತ್ತು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ‘ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ, ಅದು ಯಾವುದು ಅಂತ ಈಗ ಬೇಡ’: ವೇದಿಕೆಯಲ್ಲಿ ಶಿವಣ್ಣ ಮನದ ಮಾತು

ಚಕ್ರಾಸನ: ಈ ಆಸನವನ್ನು ಮಾಡುವುದರಿಂದ ಮೂಳೆಗಳು ಬಲಗೊಳ್ಳುವುದರ ಜೊತೆಗೆ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪಶ್ಚಿಮೋತ್ಥಾನಾಸನ: ಈ ಆಸನವು ಸ್ನಾಯು ನೋವಿನ ಜೊತೆಗೆ ಮೂತ್ರಪಿಂಡದ ಸಮಸ್ಯೆಗಳಿಗೆ ಸಹಕಾರಿಯಾಗಿದೆ. ಇದು ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಶಿರ್ಸಾಸನ: ಈ ಆಸನದಿಂದ ಮೆದುಳಿನಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಇದರಿಂದ ಮಕ್ಕಳು ಒತ್ತಡದಿಂದ ಮುಕ್ತರಾಗುವುದಲ್ಲದೆ, ಜ್ಞಾಪಕಶಕ್ತಿ ಹೆಚ್ಚುತ್ತದೆ.

ಏಕಾಗ್ರತೆಗಾಗಿ ಯೋಗ

ಮಕ್ಕಳಲ್ಲಿ ಸಾಮಾನ್ಯವಾಗಿ ಜ್ಞಾಪಕ ಶಕ್ತಿ ಕೊರತೆ ಉಂಟಾಗುತ್ತದೆ. ಎಷ್ಟೇ ಓದಿದರು ಕೂಡ ಅದು ನೆನಪಿನಲ್ಲಿ ಉಳಿಯುವುದಿಲ್ಲ. ಅಂತಹ ಮಕ್ಕಳು ವೃಕ್ಷಾಸನ ಮತ್ತು ಶಿರಶಾಸನವನ್ನು ಮಾಡಬೇಕು. ಇದರಿಂದ ಮೆದುಳಿನಲ್ಲಿ ರಕ್ತ ಸಂಚಾರವಾಗಿ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಅಥವಾ ಸ್ಮರಣ ಶಕ್ತಿ ಹೆಚ್ಚುತ್ತದೆ.

ಉತ್ತಮ ದೃಷ್ಟಿ ಹೊಂದಲು ಯೋಗ

ಮಕ್ಕಳು ಉತ್ತಮ ದೃಷ್ಟಿ ಹೊಂದಲು ಅನುಲೋಮ್ ವಿಲೋಮ್​ನ್ನು ಪ್ರತಿದಿನ ಕನಿಷ್ಠ 5 ನಿಮಿಷಗಳ ಕಾಲ ಮಾಡಿಬೇಕು.

ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಈ ಪ್ರಾಣಾಯಾಮಗಳು:

ಕಪಾಲಭಾತಿ ಭಸ್ತ್ರಿಕಾ ಭ್ರಮರಿ ಅನುಲೋಮ್ ವಿಲೋಮ್ ಉಜ್ಜಯಿ ಶೀತಕಾರಿ

ಬೆಳಿಗ್ಗೆ ಜಾಗಿಂಗ್, ಲಘು ವ್ಯಾಯಾಮ ಮತ್ತು ಸೂರ್ಯ ನಮಸ್ಕಾರ ಮಾಡುವುದನ್ನು ಸಹ ಒಳ್ಳೆಯದು. ಅವು ಕೊಬ್ಬನ್ನು ಕಡಿಮೆ ಮಾಡುವ ಮೂಲಕ ದೇಹವನ್ನು ಹುರಿಗೊಳಿಸುತ್ತದೆ. ಅಲ್ಲದೆ, ದೇಹವನ್ನು ಹೆಚ್ಚು ಕಾಲ ಚೈತನ್ಯದಿಂದಿಡಲು ಸಹಕರಿಸುತ್ತದೆ.

ಇನ್ನಷ್ಟು ಯೋಗ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:25 am, Mon, 20 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ