PM Modi Speech: ಬೆಂಗಳೂರಿನಲ್ಲಿ ಸಂಚಾರದಟ್ಟಣೆ ನಿಯಂತ್ರಿಸಲು ಹೊಸ ಯೋಜನೆ ತಂದಿದ್ದೇವೆ: ಕೊಮ್ಮಘಟ್ಟದಲ್ಲಿ ಪ್ರಧಾನಿ ಮೋದಿ

PM Modi Speech: ಬೆಂಗಳೂರಿನಲ್ಲಿ ಸಂಚಾರದಟ್ಟಣೆ ನಿಯಂತ್ರಿಸಲು ಹೊಸ ಯೋಜನೆ ತಂದಿದ್ದೇವೆ: ಕೊಮ್ಮಘಟ್ಟದಲ್ಲಿ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸಂಚಾರದಟ್ಟಣೆ ನಿಯಂತ್ರಿಸಲು ಹೊಸ ಯೋಜನೆ ತಂದಿದ್ದೇವೆ: ಕೊಮ್ಮಘಟ್ಟದಲ್ಲಿ ಪ್ರಧಾನಿ ಮೋದಿ

Narendra Modi: ಕಳೆದ 40 ವರ್ಷಗಳಿಂದ ಕೇವಲ ಚರ್ಚೆಯಲ್ಲಿ ಸಮಯ ಕಳೆದರು. ನಮ್ಮ ಸರ್ಕಾರ ಬಂದ ಮೇಲೆ ಕೇವಲ 40 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಪ್ರತಿ ಕ್ಷಣವನ್ನು ನಿಮ್ಮ ಸೇವೆಗೆ ಸಮಯ ಮೀಸಲಿಟ್ಟಿದ್ದೇವೆ. ರಾಜಧಾನಿ ಬೆಂಗಳೂರು ಇನ್ನು ಸುರಕ್ಷತೆ ಮತ್ತು ನಾಗರಿಕ ಸ್ನೇಹಿ ನಗರವಾಗುತ್ತಿದೆ -ಪ್ರಧಾನ ಮಂತ್ರಿ ನರೇಂದ್ರ ಮೋದಿ

TV9kannada Web Team

| Edited By: sadhu srinath

Jun 20, 2022 | 4:36 PM


ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಪ್ರವಾಸಕ್ಕೆಂದು 2 ದಿನಗಳ ಕಾಲ ರಾಜ್ಯಕ್ಕೆ ಆಗಮಿಸಿದ್ದು, ನಾನಾ ಸರ್ಕಾರಿ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೊಮ್ಮಘಟ್ಟದಲ್ಲಿ ನಡೆದಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು, ಬೆಂಗಳೂರಿನ ಮಹಾಜನತೆಗೆ ವಿಶೇಷವಾದ ನಮಸ್ಕಾರಗಳನ್ನು ತಿಳಿಸುತ್ತಾ ಕರ್ನಾಟಕದ ಜನರ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಮೂಲಭೂತ ಯೋಜನೆಗಳಿಗೆ ಜಾರಿಗೊಳಿಸಲು ಸಂತೋಷವಾಗುತ್ತಿದೆ. ಡಬಲ್ ಇಂಜಿನ್ ಕರ್ನಾಟಕದ ಅಭಿವೃದ್ಧಿಗೆ ಭರವಸೆ ನೀಡಿತ್ತು. ಆ ಭರವಸೆಗಳಿಗೆ ಇಂದು ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ನಿಮ್ಮ ಸೇವೆಗೆ ನಾವು ಸದಾ ಸಿದ್ದರಿದ್ದೇವೆ. ಇಲ್ಲಿ ಬರುವುದಕ್ಕಿಂತ ಮುಂಚೆ ಇಂಡಿಯನ್​ ಇನ್​ಸ್ಟಿಟ್ಯೂಟ್ & ಅಂಬೇಡ್ಕರ್ ಸ್ಕೂಲ್ ಆಫ್​ ಎಕನಾಮಿಕ್ಸ್​ಗೆ​ ಭೇಟಿ ನೀಡಿದ್ದೆ. ಇಲ್ಲಿಂದ ಹೊಸದನ್ನು ಏನೋ ತೆಗೆದುಕೊಂಡು ಹೋಗುತ್ತಿದ್ದೇನೆ ಅನ್ನಿಸುತ್ತಿದೆ ಎಂದು ತಿಳಿಸಿದರು (Narendra Modi in Bangalore).

ಕರ್ನಾಟಕದಲ್ಲಿ 5 ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತು 7 ರೈಲು ಯೋಜನೆಗೆ ಚಾಲನೆ ನೀಡಿದ್ದೇವೆ. ಬೆಂಗಳೂರಿನಲ್ಲಿ ಸಂಚಾರಿದಟ್ಟಣೆ ನಿಯಂತ್ರಿಸಲು ಯೋಜನೆ ತಂದಿದ್ದೇವೆ. ಬೆಂಗಳೂರಿನಲ್ಲಿ ಸಂಚಾರದಟ್ಟಣೆ ನಿಯಂತ್ರಿಸಲು ಇದು ಸಹಾಯಕವಾಗಲಿದೆ. ಬೆಂಗಳೂರು ಕನಸುಗಳು ನಗರವಾಗಿದೆ. 8 ವರ್ಷಗಳಿಂದ ನಿರಂತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ ಬಂದಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಬೆಂಗಳೂರಿನ ಸುತ್ತಮುತ್ತ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇವಾಗಲಿವೆ. ಕಳೆದ 40 ವರ್ಷಗಳಿಂದ ಕೇವಲ ಚರ್ಚೆಯಲ್ಲಿ ಸಮಯ ಕಳೆದರು. ನಮ್ಮ ಸರ್ಕಾರ ಬಂದ ಮೇಲೆ ಕೇವಲ 40 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಪ್ರತಿ ಕ್ಷಣವನ್ನು ನಿಮ್ಮ ಸೇವೆಗೆ ಸಮಯ ಮೀಸಲಿಟ್ಟಿದ್ದೇವೆ. ರಾಜಧಾನಿ ಬೆಂಗಳೂರು ಇನ್ನು ಸುರಕ್ಷತೆ ಮತ್ತು ನಾಗರಿಕ ಸ್ನೇಹಿ ನಗರವಾಗುತ್ತಿದೆ. ಭಾರತ ರತ್ನ ಸರ್​ ಎಂ. ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣವನ್ನು ಆಧುನೀಕರಣಗೊಳಿಸಲಾಗಿದೆ. ದೇಶದಲ್ಲಿ 21ನೇ ಶತಮಾನದಲ್ಲಿ ಬೆಂಗಳೂರು ನಗರ ಆತ್ಮನಿರ್ಭರ್​ ಶಕ್ತಿಗೆ ಪ್ರೇರಣೆ ನೀಡಿದೆ. ಭಾರತೀಯ ಯುವಜನರು ಮನಸು ಮಾಡಿದರೆ ಎಲ್ಲವನ್ನೂ ಸಾಧಿಸುತ್ತಾರೆ. ಬೆಂಗಳೂರು ತಾಕತ್ತು ಬಹಳ ದೊಡ್ಡದ್ದು. ಜನರ ಮನಸ್ಥಿತಿಯನ್ನು ಬದಲಾವಣೆಗೆ ಹೊಂದಿಸುವಂತೆ ಮಾಡುತ್ತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತಸದಿಂದ ಹೇಳಿದರು.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada