AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಬೆಂಗಳೂರು ಭೇಟಿ; ನವೆಂಬರ್​ 25 ರಂದು HAL ಕಾರ್ಯಕ್ರಮದಲ್ಲಿ ಭಾಗಿ

ವಿಧಾನಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ನವೆಂಬರ್ 25ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬರಲಿದ್ದು, ಹೆಚ್​ಎಎಲ್​​ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ಮೋದಿ ಬೆಂಗಳೂರು ಭೇಟಿ; ನವೆಂಬರ್​ 25 ರಂದು HAL ಕಾರ್ಯಕ್ರಮದಲ್ಲಿ ಭಾಗಿ
ನರೇಂದ್ರ ಮೋದಿ
ಕಿರಣ್​ ಹನಿಯಡ್ಕ
| Edited By: |

Updated on:Nov 22, 2023 | 3:05 PM

Share

ಬೆಂಗಳೂರು ನ.22: ವಿಧಾನಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಎರಡನೇ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ನವೆಂಬರ್ 25ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬರಲಿದ್ದು, ಹೆಚ್​ಎಎಲ್​​ (HAL) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರು ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ. ನ.30ರಂದು ತೆಲಂಗಾಣದ 119 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ

ವಿಧಾನಸಭೆ ಚುನಾವಣೆಯಾದ ಬಳಿಕ ಅಗಸ್ಟ್​ 26 ರಂದು ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದರು. ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಈ  ಐತಿಹಾಸಿಕ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದರು.

ಈ ವೇಳೆ ಚಂದ್ರಯಾನ-3 ಯೋಜನೆ, ಪ್ರಜ್ಞಾನ್​ ರೋವರ್​​ ಕಾರ್ಯನಿರ್ವಹಣೆ, ಅನ್ವೇಷಣೆ ಬಗ್ಗೆ ಇಸ್ರೋ ವಿಜ್ಞಾನಿಗಳು ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದರು. ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅನ್ವೇಷಣೆ ಬಗ್ಗೆ ವಿವರಿಸಿದ್ದರು. ಐತಿಹಾಸಿಕ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದು ಇಸ್ರೋ ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ವಿಜ್ಞಾನಿಗಳ ಜೊತೆ 45 ನಿಮಿಷಗಳ ಕಾಲ ಸಂವಾದ ನಡೆಸಿದ್ದರು. ಈ ವೇಳೆ ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಮಕರಣ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:05 pm, Wed, 22 November 23

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್