Bengaluru Crime: ಅಶ್ಲೀಲ ಫೋಟೋ, ವಿಡಿಯೋ ಕಳಿಸಿ ಮಹಿಳೆಯರಿಗೆ ಕಾಟ ಕೊಡುತ್ತಿದ್ದ ಆರೋಪಿ ಅರೆಸ್ಟ್

| Updated By: ಆಯೇಷಾ ಬಾನು

Updated on: Feb 18, 2022 | 10:11 AM

ಆರೋಪಿ ಫೇಸ್ ಬುಕ್ ಮೆಸೆಂಜರ್, ವಾಟ್ಸ್ ಆ್ಯಪ್ನಲ್ಲಿ ಅಶ್ಲೀಲ ವಿಡಿಯೋ ಕಳಿಸಿ ಮಹಿಳೆಯರಿಗೆ ಕಾಟ ಕೊಡ್ತಿದ್ದ. ವಿಡಿಯೋ ಕಳಿಸಿ ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿದ್ದ. ತನಿಖೆ ವೇಳೆ 10 ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಕಾಟ ಕೊಟ್ಟಿರೋದು ಬೆಳಕಿಗೆ ಬಂದಿದೆ.

Bengaluru Crime: ಅಶ್ಲೀಲ ಫೋಟೋ, ವಿಡಿಯೋ ಕಳಿಸಿ ಮಹಿಳೆಯರಿಗೆ ಕಾಟ ಕೊಡುತ್ತಿದ್ದ ಆರೋಪಿ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮಹಿಳೆಯರಿಗೆ ಅಶ್ಲೀಲ ಫೋಟೋ, ವಿಡಿಯೋ ಕಳಿಸಿ ಕಾಟ ಕೊಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕೆ.ಎನ್.ಹರೀಶ್(26) ಬಂಧಿತ ಆರೋಪಿ‌. ಈತ ಫೇಸ್ ಬುಕ್ ಮೆಸೆಂಜರ್, ವಾಟ್ಸ್ ಆ್ಯಪ್ನಲ್ಲಿ ಅಶ್ಲೀಲ ವಿಡಿಯೋ ಕಳಿಸಿ ಮಹಿಳೆಯರಿಗೆ ಕಾಟ ಕೊಡ್ತಿದ್ದ. ವಿಡಿಯೋ ಕಳಿಸಿ ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿದ್ದ. ತನಿಖೆ ವೇಳೆ 10 ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಕಾಟ ಕೊಟ್ಟಿರೋದು ಬೆಳಕಿಗೆ ಬಂದಿದೆ. ತನ್ನ ಪತ್ನಿಗೆ ಇದೇ ರೀತಿ ಕಾಟ ಕೊಡಲಾಗುತ್ತಿದೆ ಎಂದು ಪತಿಯೊಬ್ಬರು ದೂರು ನೀಡಿದ್ರು. ಆ ದೂರಿನ ಆಧಾರದ ಮೇಲೆ ಆರೋಪಿಯನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಇತರೆ ಕ್ರೈಂ ಸುದ್ದಿಗಳು
ಮೈಸೂರು: ಹುಲಿಯ ಚರ್ಮ, ಉಗುರು, ಮೀಸೆ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಮಾಲ್ದಾರೆ ಗ್ರಾಮದ ಗೋವಿಂದ, ಗೋಪಾಲ, ಲಿಂಗ, ಬಸವನನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಸತ್ತು ಬಿದ್ದ ಹುಲಿಯ ಚರ್ಮ, ಉಗುರು ಕಾಲು ಮೀಸೆ ಮಾರಾಟಕ್ಕೆ ಯತ್ನಿಸುತ್ತಿದ್ದರು.

ಅನೈತಿಕ ಸಂಬಂಧಕ್ಕೆ ಬೆಸೆದುಕೊಂಡ ಅಣ್ತಂಗಿ, ತಾಯಿಯನ್ನು ಕೊಲೆ ಮಾಡಿ ಸಂಪ್​ಗೆ ತಳ್ಳಿದ್ದರು!
ತುಮಕೂರು: ಮನೆ ಮುಂದಿನ ನೀರಿನ ಸಂಪ್ ಗೆ ಬಿದ್ದು ಮಹಿಳೆಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧಕ್ಕಾಗಿ (Illicit relationship) ಅಣ್ಣನ ಜೊತೆ ಸೇರಿ ತಾಯಿಯನ್ನೇ ಮಗಳು ಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಪುನೀತ್ (26) ಮತ್ತು ಶೈಲಜಾ (21) ಬಂಧಿತ ಅಣ್ಣ-ತಂಗಿ. ಕಳೆದ ಜನವರಿ 30 ರಂದು ಕೊರಟಗೆರೆ ಪಟ್ಟಣದ (koratagere) ಸಜ್ಜನರಾವ್ ಬೀದಿಯ ಸಾವಿತ್ರಮ್ಮ(45) (mother) ಸಂಪಿಗೆ ಬಿದ್ದು ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೊರಟಗೆರೆ ಪೊಲೀಸರು ಪ್ರೀತಿಗೆ ಅಡ್ಡ ಬಂದರೆಂದು ಉಸಿರುಗಟ್ಟಿಸಿ ಸಾವಿತ್ರಮ್ಮ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಶೈಲಜಾ ಹಾಗೂ ಪುನೀತ್ ಇಬ್ಬರು ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳು. ವರಸೆಯಲ್ಲಿ ಶೈಲಜಾಗೆ ಪುನೀತ್ ಅಣ್ಣನಾಗಿದ್ದಾನೆ. ಹೊರಜಗತ್ತಿಗೆ ಇಬ್ಬರೂ ಅಣ್ಣ ತಂಗಿಯಂತೆ ವರ್ತನೆ ಮಾಡ್ತಿದ್ದರು. ಆದರೆ ಮನೆಯೊಳಗೆ.. ಇಬ್ಬರೂ ಅನೈತಿಕ ಸಂಬಂಧದಲ್ಲಿ ತೊಡಗ್ತಿದ್ದರು. ಇಬ್ಬರ ಲವ್ವಿ ಡವ್ವಿಗೆ ಬ್ರೇಕ್ ಹಾಕಿ ಪುನೀತ್ ಹಾಗೂ ಶೈಲಜಾಗೆ ಸಾವಿತ್ರಮ್ಮ ಹಾಗೂ ಪುನೀತ್ ತಾಯಿ ಬುದ್ಧಿ ಹೇಳಿದ್ದರು.

ಮತ್ತೆ ಅನೈತಿಕ ಸಂಬಂಧಕ್ಕೆ ಬೆಸೆದುಕೊಂಡ ಅಣ್ತಂಗಿ!
ಮೆಸೇಜ್ ಅಥವಾ ಕಾಲ್ ಮಾಡದಂತೆ ಇಬ್ಬರಿಗೂ ಎಚ್ಚರಿಕೆ ಸಹ ಕೊಟ್ಟಿದ್ದರು. ಸ್ವಲ್ಪ ದಿನಗಳ ಕಾಲ ಅಣ್ಣ-ತಂಗಿಯಂತೆ ಇದ್ದವರು ಮತ್ತೆ ಅನೈತಿಕ ಸಂಬಂಧಕ್ಕೆ ಬೆಸೆದುಕೊಂಡಿದ್ದಾರೆ. ಇದೇ ವೇಳೆ ಇಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಸಾವಿತ್ರಮ್ಮನನ್ನ ಕತ್ತು ಹಿಸುಕಿ ಕೊಲೆಗೈದಿದ್ದಾರೆ ಶೈಲಜಾ ಹಾಗೂ ಪುನೀತ್ ಜೋಡಿ.

ಬಳಿಕ, ಸಾವಿತ್ರಮ್ಮ ಕಾಲು ಜಾರಿ ಸಂಪ್ ಗೆ ಬಿದ್ದು ಸಾವನ್ನಪ್ಪಿರೋದಾಗಿ ಶೈಲಜಾ ಹಾಗೂ ಪುನೀತ್ ಬಿಂಬಿಸಿದ್ದರು. ಸಾವಿನ ಘಟನೆಯ ಬಳಿಕ ಪುನೀತ್ ಹಾಗೂ ಶೈಲಜಾ ಆಟಾಟೋಪ ಮಿತಿಮಿರಿತ್ತು. ಪೊಲೀಸರಿಗೆ ಅನುಮಾನ ಬಂದು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಸದ್ಯ ಇಬ್ಬರನ್ನೂ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ‘ಅವರಿಂದ ಪಡೆದ ಹಣ ನಾನಿನ್ನೂ ವಾಪಸ್​ ಕೊಟ್ಟಿಲ್ಲ’; ​ಇನ್​ಸೈಡ್​ ಮಾಹಿತಿ ಬಹಿರಂಗ ಪಡಿಸಿದ ಧನಂಜಯ

Published On - 10:07 am, Fri, 18 February 22