ಬೆಂಗಳೂರಿನ ಬಹುತೇಕ ಎಲ್ಲ ರಸ್ತೆಗಳಲ್ಲಿ ಕಸದ ಗುಡ್ಡೆಗಳು; ಪೌರಕಾರ್ಮಿಕರ ಪ್ರತಿಭಟನೆ ಹಿನ್ನೆಲೆ ವಿಲೇವಾರಿ ಆಗದ ಕಸ
ಇಂದಿನಿಂದ ಬಿಬಿಎಂಪಿ ಕಸ ಸಂಗ್ರಹ ಗುತ್ತಿಗೆದಾರರ ಮುಷ್ಕರ ಹಿನ್ನೆಲೆ, ರಸ್ತೆಯಲ್ಲಿ ಕಸ ಗುಡಿಸಿ ಗುಡ್ಡೆ ಮಾಡಿ ಪೌರಕಾರ್ಮಿಕರು ಹಾಗೆಯೇ ಬಿಟ್ಟಿದ್ದಾರೆ. ಕಸ ಕೊಂಡೊಯ್ಯುವ ಟಿಪ್ಪರ್, ಲಾರಿಗಳು ಬಾರದ ಕಾರಣ ಅಲ್ಲಲ್ಲಿ ಕಸವನ್ನು ಪೌರಕಾರ್ಮಿಕರು ಬಿಟ್ಟುಹೋಗಿದ್ದಾರೆ.
ಬೆಂಗಳೂರು: ಬಿಬಿಎಂಪಿ(BBMP) ಕಳೆದ 6 ತಿಂಗಳಿಂದ ಬಿಲ್ ಪಾವತಿಸದ ಹಿನ್ನೆಲೆ ಇಂದಿನಿಂದ(ಫೆಬ್ರವರಿ 18) ಬಿಬಿಎಂಪಿ ಕಸ(Garbage) ಸಂಗ್ರಹ ಗುತ್ತಿಗೆದಾರರು ಮುಷ್ಕರ ನಡೆಸುತ್ತಿದ್ದಾರೆ. ಬೆಂಗಳೂರಲ್ಲಿ ಕಸ ಸಂಗ್ರಹಿಸದಿರಲು ಗುತ್ತಿಗೆದಾರರು ನಿರ್ಧಾರ ಮಾಡಿದ್ದಾರೆ. ಕಳೆದ 6 ತಿಂಗಳಿಂದ ಬಾಕಿ ಉಳಿಸಿಕೊಂಡ ನೂರಾರು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಗುತ್ತಿಗೆದಾರರು ಪ್ರತಿಭಟನೆ(Protest) ನಡೆಸುತ್ತಿದ್ದಾರೆ. ಪರಿಣಾಮ ಮನೆ ಮನೆಯಿಂದ ಕಸ ಸಂಗ್ರಹಣೆ, ಸಂಗ್ರಹಿಸಿದ ಕಸವನ್ನು ಲ್ಯಾಂಡ್ ಫಿಲ್ಗಳಿಗೆ ಸರಬರಾಜು ಮಾಡದೆ ಕಸದ ರಾಶಿಗಳು ರಸ್ತೆ ಬದಿಯಲ್ಲಿ ಹಾಗೆಯೇ ಉಳಿದಿವೆ.
ಇಂದಿನಿಂದ ಬಿಬಿಎಂಪಿ ಕಸ ಸಂಗ್ರಹ ಗುತ್ತಿಗೆದಾರರ ಮುಷ್ಕರ ಹಿನ್ನೆಲೆ, ರಸ್ತೆಯಲ್ಲಿ ಕಸ ಗುಡಿಸಿ ಗುಡ್ಡೆ ಮಾಡಿ ಪೌರಕಾರ್ಮಿಕರು ಹಾಗೆಯೇ ಬಿಟ್ಟಿದ್ದಾರೆ. ಕಸ ಕೊಂಡೊಯ್ಯುವ ಟಿಪ್ಪರ್, ಲಾರಿಗಳು ಬಾರದ ಕಾರಣ ಅಲ್ಲಲ್ಲಿ ಕಸವನ್ನು ಪೌರಕಾರ್ಮಿಕರು ಬಿಟ್ಟುಹೋಗಿದ್ದಾರೆ.
ಉಡುಪಿ: ಹಿಜಾಬ್, ಕೇಸರಿ ಸಂಘರ್ಷ ನಡೆದ ಕಾಲೇಜು ಮತ್ತೆ ಆರಂಭ: ಮತ್ತೆ ಪ್ರತಿಭಟನೆ ನಡೆಯದಂತೆ ಮುನ್ನೆಚ್ಚರಿಕೆ
ಹಿಜಾಬ್, ಕೇಸರಿ ಸಂಘರ್ಷ ನಡೆದ ಉಡುಪಿಯ ಎಂಜಿಎಂ ಕಾಲೇಜು ಮತ್ತೆ ಶುರುವಾಗಿದೆ. ಹೀಗಾಗಿ ಮತ್ತೆ ಪ್ರತಿಭಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಫೆ.7ರಂದು ಹಿಜಾಬ್ ಹಾಗೂ ಕೇಸರಿ ಸಂಘರ್ಷ ಕಾಲೇಜು ಕ್ಯಾಂಪಸ್ನಲ್ಲಿ ನಡೆದಿತ್ತು. ಕೇಸರಿ ಶಾಲು ಪೇಟ ಧರಿಸಿ ಹಿಂದೂ ವಿದ್ಯಾರ್ಥಿಗಳು ಹಾಗೂ ಬುರ್ಖಾ ಧರಿಸಿ ಮುಸ್ಲೀಂ ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದರು. ಸಂಘರ್ಷ ನಡೆದ ದಿನ ಅನಿರ್ದಿಷ್ಟಾವಧಿ ರಜೆ ನೀಡಲಾಗಿತ್ತು. ಇಂದಿನಿಂದ ಮತ್ತೆ ಪದವಿ ತರಗತಿ ಆರಂಭವಾಗಿದೆ. ಬಿಎ ವಿಭಾಗದ ಪರೀಕ್ಷೆ ಆರಂಭ ಹಿನ್ನೆಲೆ ಬಿಎ ವಿಭಾಗ ಮಾತ್ರ ಆರಂಭವಾಗಿದೆ.
ಹಂತಹಂತವಾಗಿ ತರಗತಿ ಆರಂಭಿಸಲಿರುವ ಎಂಜಿಎಂ ಕಾಲೇಜು ಆಡಳಿತ ಮಂಡಳಿ
ಇದೇ ಕಾಲೇಜಿನ ಪದವಿಪೂರ್ವ ವಿಭಾಗದ ಕೆಮಿಸ್ಟ್ರಿ ಲ್ಯಾಬ್ ಪರೀಕ್ಷೆ ಕೂಡ ಆರಂಭವಾಗಲಿದೆ. ನಿನ್ನೆ ನಡೆಯಬೇಕಿದ್ದ ದ್ವಿತೀಯ ಪಿಯು ಲ್ಯಾಬ್ ಪರೀಕ್ಷೆ ಮುಂದುಡಲಾಗಿದೆ. ಪಿಯು ಪರೀಕ್ಷೆ ಹಾಗೂ ಪದವಿ ತರಗತಿ ಆರಂಭ ಹಿನ್ನಲೆ ಭಿಗಿ ಪೊಲೀಸ್ ಭದ್ರತೆ ಎರ್ಪಡಿಸಲಾಗಿದೆ. ಮತ್ತೆ ಪ್ರತಿಭಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಪ್ರವೇಶ ನಿರಾಕರಿಸಿದಾಗ ಪ್ರತಿಭಟನೆಗೆ ಕೂತರು!
Published On - 9:05 am, Fri, 18 February 22