ಚಿಕ್ಕಮಗಳೂರಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಪ್ರವೇಶ ನಿರಾಕರಿಸಿದಾಗ ಪ್ರತಿಭಟನೆಗೆ ಕೂತರು!
ಮುಷ್ಕರನಿರತ ವಿದ್ಯಾರ್ಥಿಗಳಿಗೆ ತಿಳಿ ಹೇಳಲು ಚಿಕ್ಕಮಗಳೂರಿನ ತಹಸೀಲ್ದಾರರು ಕಾಲೇಜಿಗೆ ಆಗಮಿಸಿದ್ದರು. ಅವರ ಮಾತನ್ನೂ ಧಿಕ್ಕರಿಸಿ ವಿದ್ಯಾರ್ಥಿನಿಯರು ಮುಷ್ಕರ ಮುಂದುವರಿಸಿದ್ದಾರೆ. ಕೋವಿಡ್-19 ಪಿಡುಗಿನಿಂದಾಗಿ ಪಠ್ಯ ಬಹಳ ಹಿಂದೆ ಬಿದ್ದಿದೆ. ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಅದರ ಬಗ್ಗೆ ಚಿಂತೆ ಇದ್ದಂತಿಲ್ಲ.
ಹಿಜಾಬ್ ಪ್ರಕರಣದ ವಿಚಾರಣೆ ಹೈಕೋರ್ಟ್ ನಲ್ಲಿ (High Court) ನಡೆಯುತ್ತಿದೆ. ರಾಜ್ಯ ಸರ್ಕಾರ ಬುಧವಾರದಿಂದ ಕಾಲೇಜುಗಳನ್ನು ಪುನರಾರಂಭಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸೋಮವಾರದಿಂದಲೇ ರೀಓಪನ್ ಆಗಿವೆ. ನಮಗೆ ಚಿಕ್ಕಮಗಳೂರಿನ ಮಲ್ನಾಡ್ ಕಾಲೇಜಿನಲ್ಲಿ (Malnad College) ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (hijab) ಧರಿಸಿ ಕಾಲೇಜುಗಳಿಗೆ ಬಂದಾಗ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ಅವರ ಪರವಾಗಿ ಅದೇ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚೆ ಮಾಡಿದ್ದಾರೆ. ಶಾಲೆಯವರು ನಾವು ಕೋರ್ಟಿನ ಆದೇಶ ಪಾಲಿಸುತ್ತಿರುವುದಾಗಿ ಹೇಳಿದ್ದಾರೆ. ಆಗ ವಿದ್ಯಾರ್ಥಿನಿಯರು ಕಾಲೇಜಿನ ಗೇಟ್ ಎದುರು ಕೂತು ಮುಷ್ಕರ ನಡೆಸಲಾರಂಭಿಸಿದ್ದಾರೆ. ನಮಗೆ ನ್ಯಾಯ ಬೇಕು ಅಂತ ಘೋಷಣೆಗಳನ್ನು ಕೂಗುತ್ತಿರುವುದು ವಿಡಿಯೋನಲ್ಲಿ ಕೇಳಿಸುತ್ತದೆ.
ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿನಿಯರಿಗೆ ಭದ್ರತೆ ಒದಗಿಸುವ ಸಲುವಾಗಿ ಕಾಲೇಜಿನ ಪುರುಷ ವಿದ್ಯಾರ್ಥಿಗಳು ಅವರ ಸುತ್ತ ಮಾನವ ಸರಪಳಿಯನ್ನು ನಿರ್ಮಿಸಿದ್ದಾರೆ. ಸಹಪಾಠಿಗಳ ಬಗ್ಗೆ ಅವರಿಗೆ ಕಾಳಜಿ ಇರೋದು ಮೆಚ್ಚುವ ಅಂಶವೇ.
ಆದರೆ, ಇವರೆಲ್ಲ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಒಂದಿಷ್ಟು ಜ್ಞಾನ ಅವರಲ್ಲಿ ಇದ್ದೇ ಇರುತ್ತದೆ. ಸರ್ಕಾರಗಳೂ ಕೋರ್ಟ್ ಹೇಳಿದಂತೆ ಕೇಳಬೇಕು, ಅದರಲ್ಲಿ ದೂಸ್ರಾ ಮಾತೇ ಇಲ್ಲ.
ಮುಷ್ಕರನಿರತ ವಿದ್ಯಾರ್ಥಿಗಳಿಗೆ ತಿಳಿ ಹೇಳಲು ಚಿಕ್ಕಮಗಳೂರಿನ ತಹಸೀಲ್ದಾರರು ಕಾಲೇಜಿಗೆ ಆಗಮಿಸಿದ್ದರು. ಅವರ ಮಾತನ್ನೂ ಧಿಕ್ಕರಿಸಿ ವಿದ್ಯಾರ್ಥಿನಿಯರು ಮುಷ್ಕರ ಮುಂದುವರಿಸಿದ್ದಾರೆ. ಕೋವಿಡ್-19 ಪಿಡುಗಿನಿಂದಾಗಿ ಪಠ್ಯ ಬಹಳ ಹಿಂದೆ ಬಿದ್ದಿದೆ. ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಅದರ ಬಗ್ಗೆ ಚಿಂತೆ ಇದ್ದಂತಿಲ್ಲ.
ಇದನ್ನೂ ಓದಿ: Viral Video: ಹಳ್ಳಿಯ ದಾರಿಯಲ್ಲಿ ಬೈಕ್ನಲ್ಲಿ ಹೋಗುವಾಗ ದಿಢೀರೆಂದು ಎದುರು ಬಂದ ಸಿಂಹಿಣಿ; ಶಾಕಿಂಗ್ ವಿಡಿಯೋ ಇಲ್ಲಿದೆ