ಹುಬ್ಬಳ್ಳಿಯಲ್ಲಿ ಪೋಷಕರೇ ಕಾಲೇಜಿಗೆ ಹೋಗಿ ಹಿಜಾಬ್ ಧರಿಸಿರುವ ಮಕ್ಕಳಿಗೆ ತರಗತಿಯಲ್ಲಿ ಕೂರಲು ಅನುಮತಿ ಕೇಳುತ್ತಾರೆ!
ಹಾಗೆ ಮಾಡುವುದು ಸಾಧ್ಯವಿಲ್ಲ, ಕೋರ್ಟಿನ ಆದೇಶವವನ್ನು ನಾವು ಪಾಲಿಸಬೇಕಾಗುತ್ತದೆ ಎಂದು ಪ್ರಿನ್ಸಿಪಾಲರು ಪೋಷಕರಿಗೆ ಕೈಮುಗಿದು ಹೇಳುತ್ತಿದ್ದಾರೆ. ಅದರೆ ಪೋಷಕರು ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡದೆ ತಮ್ಮ ವಾದವನ್ನೇ ಮುಂದಿಡುತ್ತಿದ್ದಾರೆ.
ಮಂಡ್ಯದ ಕಾಲೇಜೊಂದರ ವಿದ್ಯಾರ್ಥಿನಿಯರು ಹೈಕೋರ್ಟ್ (High Court) ಆದೇಶ ಹೇಗೆ ಪಾಲಿಸಬೇಕು ಅಂತ ರಾಜ್ಯದ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ತೋರಿಸಿಕೊಟ್ಟರೆ, ಹುಬ್ಬಳ್ಳಿಯ (Hubballi) ಒಂದು ಕಾಲೇಜಿನ ಅವರಣದ (college premises) ಮುಂದೆ ಅದಕ್ಕೆ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗಿದೆ. ಮಂಡ್ಯ ವಿದ್ಯಾರ್ಥಿನಿಯರ ಪೋಷಕರು ಅಭಿನಂದನಾರ್ಹರು. ಕೋರ್ಟ್ ಆದೇಶ ಪಾಲಿಸುವ ಮಹತ್ವ ಮತ್ತು ಅವಶ್ಯಕತೆಯನ್ನು ಅವರು ತಮ್ಮ ಮಕ್ಕಳಿಗೆ ತಿಳಿಹೇಳಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ ಪೋಷಕರೇ ಕಾಲೇಜಿಗೆ ಬಂದು ತಮ್ಮ ಮಕ್ಕಲು ಹಿಜಾಬ್ ಧರಿಸಿ ತರಗತಿಗಳಲ್ಲಿ ಕೂರಲು ಅನುಮತಿ ಕೊಡಿ ಅಂತ ಪ್ರಿನ್ಸಿಪಾಲ್ ಮತ್ತು ಅಧ್ಯಾಪಕ ವೃಂದಕ್ಕೆ ಅಗ್ರಹಿಸುತ್ತಿದ್ದಾರೆ ಮತ್ತು ಕೊನೆಕೊನೆಗೆ ಹೆದರಿಸುವ ಪ್ರಯತ್ನವನ್ನೂ ಮಾಡುತ್ತಾರೆ. ನಿಮಗೊಂದು ವಿಷಯ ಗೊತ್ತಿರಲಿ, ಇದು ಮಹಿಳಾ ಕಾಲೇಜು!
ಹಾಗೆ ಮಾಡುವುದು ಸಾಧ್ಯವಿಲ್ಲ, ಕೋರ್ಟಿನ ಆದೇಶವವನ್ನು ನಾವು ಪಾಲಿಸಬೇಕಾಗುತ್ತದೆ ಎಂದು ಪ್ರಿನ್ಸಿಪಾಲರು ಪೋಷಕರಿಗೆ ಕೈಮುಗಿದು ಹೇಳುತ್ತಿದ್ದಾರೆ. ಅದರೆ ಪೋಷಕರು ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡದೆ ತಮ್ಮ ವಾದವನ್ನೇ ಮುಂದಿಡುತ್ತಿದ್ದಾರೆ.
ಕೆಲವು ಪೋಷಕರು ಅತಿರೇಕದಿಂದ ವರ್ತಿಸುವುದು ವಿಡಿಯೋನಲ್ಲಿ ಕಾಣುತ್ತದೆ. ಮಾಧ್ಯಮದ ಕೆಮೆರಾಗಳು ಕಣ್ಣಿಗೆ ಬೀಳುತ್ತಿದ್ದಂತೆ ಅವರ ಅರಚಾಟ ಕಿರುಚಾಟ ಹೆಚ್ಚಾಗುತ್ತದೆ. ಇದೆಲ್ಲ ಬೇಕಿಲ್ಲ ಮಾರಾಯ್ರೇ. ಕೋರ್ಟಿನ ಆದೇಶವನ್ನು ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಎಲ್ಲ ಶಿಕ್ಷಣ ಸಂಸ್ಥೆಗಳು ಪಾಲಿಸಲೇಬೇಕು.