ಬೆಂಗಳೂರು: ನಗರದ ಸಂದೀಪ್ ಲಾಲ್ ಎಂಬುವವರ ಮನೆಯಲ್ಲಿ 2 ಕೋಟಿಗೂ ಹೆಚ್ಚು ಹಣ, ಚಿನ್ನ ಕದ್ದು ಎಸ್ಕೇಪ್ ಆಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಮನೆ ದೋಚಲು ಬಂದ ಕಳ್ಳರು 2 ಕೋಟಿ ರೂ. ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಕೊಂಡಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಡೆದಿದೆ. ಆರೋಪಿ ಸುನೀಲ್, ದಿಲೀಪ್‍ರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ಸಂದೀಪ್ ಲಾಲ್ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಆರೋಪಿ ಸುನೀಲ್ ಈ ಹಿಂದೆ ಕೂಡ ಕಳ್ಳತನ ಮಾಡಿ ಜೈಲು ಸೇರಿದ್ದ. ಆ ವೇಳೆ ಆತನ ಫಿಂಗರ್ ಪ್ರಿಂಟ್ ಪಡೆದಿದ್ದ ಪೊಲೀಸರು ಸಂದೀಪ್ ಮನೆ ಕಳ್ಳತನ ಪ್ರಕರಣ ಸ್ಥಳ ಪರಿಶೀಲನೆ ವೇಳೆ ಫಿಂಗರ್ ಫ್ರಿಂಟ್ ಮ್ಯಾಚ್ ಮಾಡಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಆರೋಪಿಗಳು ಚೀಲದಲ್ಲಿ ಹಣ ತುಂಬಿ ಮನೆಯಲ್ಲೆ ಇಟ್ಟಿದ್ದರು. ನಂತರ ಆರೋಪಿ ದಿಲೀಪ್ ಮಹದೇಶ್ವರ ಬೆಟ್ಟಕ್ಕೆ ಹೋಗಿ ಅವಿತು ಕುಳಿತಿದ್ದ. ಈ ಪೈಕಿ ಸುಬ್ರಹ್ಮಣ್ಯ ನಗರ ಮನೆಯಲ್ಲೇ ಆರೋಪಿ ಸುನೀಲ್ ಸಿಕ್ಕಿ ಬಿದ್ದಿದ್ದಾನೆ. ಆರೋಪಿಗಳು ಲೆಕ್ಕವನ್ನೂ ಮಾಡದೆ ಗುಡ್ಡೆ ಮಾಂಸದ ರೀತಿ ಹಣ ಹಂಚಿಕೊಂಡಿದ್ರು. ಮನೆಯ ಸೆಲ್ಫ್ ಮೇಲೆ ಹಣ ಚೀಲದಲ್ಲಿ ತುಂಬಿಟ್ಟಿದ್ದರು. ಸುನಿಲ್@ತೊರೆ ಮಂಡ್ಯ ಮೂಲದವನು. ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ವಾಸವಿದ್ದ.
ಮತ್ತೊಬ್ಬ ಆರೋಪಿ ದಿಲೀಪ್ ಮಾಗಡಿಯ ಮಾಚೋಹಳ್ಳಿಯವನು. ಸುನೀಲ್ ಮತ್ತು ದಿಲೀಪ್ ಜೈಲಿನಲ್ಲಿದ್ದಾಗ ಪ್ರೆಂಡ್ಸ್ ಆಗಿದ್ದರು. ಡ್ರಗ್ ಕೇಸಲ್ಲಿ ದಿಲೀಪ್ ಜೈಲು ಸೇರಿದ್ದ. ಜೈಲಿನಲ್ಲೆ ನಿನ್ನ ಜೀವನ ಬದಲಾಯಿಸ್ತಿನಿ ಬಾ ಎಂದು ಸುನೀಲ್ ಪುಸಲಾಯಿಸಿದ್ದ. ಜೈಲಿಂದ ಹೊರ ಬಂದ ಮೇಲೆ ಕಳ್ಳತನಕ್ಕೆ ಪ್ಲಾನ್ ಮಾಡಿದ ಇಬ್ಬರೂ ವೃದ್ಧ ಸಂದೀಪ್ ಲಾಲ್ನನ್ನು 15 ದಿನ ಫಾಲೋ ಮಾಡಿದ್ದರು. ಮನೆ ಮುಂದೆ ನಿಂತಿದ್ದ ಐಶಾರಾಮಿ ಬೈಕ್ ಗಳನ್ನ ನೋಡಿ ಕಳ್ಳತನಕ್ಕೆ ಪ್ಲಾನ್ ಮಾಡಿದ್ದರು. ಮನೆಯಲ್ಲಿ ಏಕಾಂಗಿಯಾಗಿದ್ದ ಸಂದೀಪ್ ಲಾಲ್ ಹೊರಗೆ ಹೋಗಿದ್ದ ವೇಳೆ ಕಳ್ಳತನಕ್ಕೆ ಕೈ ಹಾಕಿ 2 ಕೋಟಿಗೂ ಹೆಚ್ಚು ಹಣ, ಚಿನ್ನ ಕದ್ದು ಎಸ್ಕೇಪ್ ಆಗಿದ್ರು. ಸದ್ಯ ಆರೋಪಿಗಳನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಹಾಗಾದ್ರೆ ಹಣ ಹೊಡಿಯೋ ಐಡಿಯಾ ಹುಟ್ಟಿಕೊಂಡಿದ್ದು ಹೇಗೆ?
ಸುನೀಲ್ ಕಳ್ಳನಾಗಿದ್ರು ಜೀವನೋಪಾಯಕ್ಕೆ ಆಟೊ ಓಡಿಸ್ತಿದ್ದ. ಸುಬ್ರಹ್ಮಣ್ಯ ನಗರದಲ್ಲಿ ಮನೆ ಮಾಡಿಕೊಂಡಿದ್ದ. ಈ ವೇಳೆ ಜೆಪಿ ನಗರದಿಂದ ಕೆ.ಎಸ್.ಲೇಔಟ್ ಗೆ ಬಾಡಿಗೆಗೆ ಬಂದಿದ್ದ ಸಂದೀಪ್ ಲಾಲ್ ಮನೆ ಮುಂದೆ ಬಂದು ಪ್ಯಾಸೆಂಜರ್ ಡ್ರಾಪ್ ಮಾಡಿದ್ದ. ಈ ವೇಳೆ ಸಂದೀಪ್ ಲಾಲ್ ತಂದೆ ಮನಮೋಹನ್ ಲಾಲ್ ಗೆ ವ್ಯಕ್ತಿಯೊಬ್ಬ ಕಂತೆ ಕಂತೆ ಹಣ ಕೊಟ್ಟಿದ್ದ. ಅದನ್ನ ನೋಡಿದ್ದ ಸುನೀಲ್ ಕಣ್ಣು ಕುಕ್ಕಿತ್ತು. ಅಲ್ಲದೇ ಮನೆ ಮುಂದೆ ಐಷಾರಾಮಿ ಬೈಕ್ ಗಳು ನಿಂತಿದ್ವು. ಸಂದೀಪ್ ಲಾಲ್ ಒಬ್ಬನೇ ಒಂದು ಮನೆಯಲ್ಲಿ ವಾಸವಿದ್ದ. ಅವರ ತಂದೆ ಮನಮೋಹನ್ ಲಾಲ್ ಮತ್ತು ತಾಯಿ ಪಕ್ಕದಲ್ಲೇ ಮನೆ ಮಾಡಿಕೊಂಡು ವಾಸವಿದ್ರು.
ಹೀಗೆ ಪ್ರತಿದಿನ ಬಂದ ಒಂದು ವಾರ ಮನೆ ಬಳಿ ಗಮನಿಸಿದ್ದಾನೆ. ದಿಲೀಪ್ ನನ್ನು ಜೊತೆಗೆ ಕರೆದುಕೊಂಡು ಬಂದು ಕಳ್ಳತನಕ್ಕೆ ಪ್ಲಾನ್ ಮಾಡಿದ್ದಾನೆ. 28 ರಂದು ಕೂಡ ಮನೆ ಬಳಿ ಬಂದು ಸುನೀಲ್ ಮತ್ತು ದಿಲೀಪ್ ಗಮನಿಸಿದ್ದರು. ಸಂದೀಪ್ ಲಾಲ್ ತಂದೆ ಮನಮೋಹನ್ ಲಾಲ್ ಮನೆಗೆ ಬಂದು ಬೀಗ ಹಾಕಿ ಹೋಗ್ತಿದ್ರು. ಇದನ್ನು ಗಮನಿಸಿ ಮನೆಯಲ್ಲಿ ಯಾರು ಇಲ್ಲ ಅನ್ನೋದನ್ನ ಕನ್ಫರ್ಮ್ ಮಾಡಿಕೊಂಡಿದ್ದಾರೆ. ರಾತ್ರಿ 12 ಗಂಟೆಗೆ ಬಂದು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಹಣ ನೋಡಿ ಕಳ್ಳರೇ ಫುಲ್ ಕಕ್ಕಾಬಿಕ್ಕಿ ಆಗಿದ್ದು ಮೂಟೆಯಲ್ಲಿ ಹಣ ತುಂಬಿಕೊಂಡು ಪರಾರಿಯಾಗಿದ್ದರು.
ನಂತರ ಹಣ ಹಂಚಿಕೊಂಡು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ದಿಲೀಪ್ ಕದ್ದ ಹಣದಲ್ಲಿ ತಂದೆ ತಾಯಿಗೆ ಚಿನ್ನಾಭರಣ ಕೊಡಿಸಿದ್ದ. ಗೋವಾಗೆ ತೆರಳಿ ಮಜಾ ಮಾಡಿ ಬಂದಿದ್ದ. ಸುನೀಲ್ ಮಾತ್ರ ಪ್ರತಿದಿನ ಹೋಗಿ ಹಣ ನೋಡಿ ಬರ್ತಿದ್ದ. ಇಷ್ಟಾಗ್ತಿದ್ದಂತೆ ಮನೆಯಲ್ಲಿಯೇ ಸುನೀಲ್ ಲಾಕ್ ಆಗಿದ್ದಾನೆ. ದಿಲೀಪ್ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದು ಮನೆಯವರನ್ನೆಲ್ಲ ಒಂದೊಂದು ದಿಕ್ಕಿಗೆ ಕಳುಹಿಸಿಬಿಟ್ಟಿದ್ದ. ದಿಲೀಪ್ ಪತ್ತೆಯೇ ಪೊಲೀಸರಿಗೆ ತಲೆನೋವಾಗಿತ್ತು. ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ ಅಥವಾ ಅಲ್ ಖೈದಾ ಮುಖ್ಯಸ್ಥನಾ? ರಾಜ್ಯದ ಜನರೇ ತೀರ್ಮಾನಿಸಬೇಕು -ಕೆಎಸ್ ಈಶ್ವರಪ್ಪ