ಅರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ ಪದೇ ಪದೆ ಹೇಳಿಕೆ ಬದಲಿಸೋಕೆ ಎಂದು ಅವರ ವಿರುದ್ಧ ದೂರು ನೀಡಿದ ಮೊಹಮ್ಮದ್‌ ನಲಪಾಡ್

ಅರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ ಪದೇ ಪದೆ ಹೇಳಿಕೆ ಬದಲಿಸೋಕೆ ಎಂದು ಅವರ ವಿರುದ್ಧ ದೂರು ನೀಡಿದ ಮೊಹಮ್ಮದ್‌ ನಲಪಾಡ್
ಅರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ ಪದೇ ಪದೇ ಹೇಳಿಕೆ ಬದಲಿಸೋಕೆ ಎಂದು ಅರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಿಸಿದ ಮೊಹಮ್ಮದ್‌ ನಲಪಾಡ್

ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್‌ ನಲಪಾಡ್ ದೂರು ಸಲ್ಲಿಸಿದ್ದಾರೆ. ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಗೆ ದೂರು ನೀಡಿರುವ ನಲಪಾಡ್, ಜೆಜೆ ನಗರ ಚಂದ್ರು ಕೊಲೆ ಸಂಬಂಧ ಸಚಿವ ಅರಗ ಜ್ಞಾನೇಂದ್ರ (araga jnanendra) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ (Karnataka youth congress president mohammed nalapad). ಇದೇ ವೇಳೆ ಮೊಹಮ್ಮದ್‌ ನಲಪಾಡ್ ಹೇಳಿಕೆ ನೀಡಿದ್ದು […]

TV9kannada Web Team

| Edited By: sadhu srinath

Apr 07, 2022 | 6:13 PM

ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್‌ ನಲಪಾಡ್ ದೂರು ಸಲ್ಲಿಸಿದ್ದಾರೆ. ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಗೆ ದೂರು ನೀಡಿರುವ ನಲಪಾಡ್, ಜೆಜೆ ನಗರ ಚಂದ್ರು ಕೊಲೆ ಸಂಬಂಧ ಸಚಿವ ಅರಗ ಜ್ಞಾನೇಂದ್ರ (araga jnanendra) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ (Karnataka youth congress president mohammed nalapad).

ಇದೇ ವೇಳೆ ಮೊಹಮ್ಮದ್‌ ನಲಪಾಡ್ ಹೇಳಿಕೆ ನೀಡಿದ್ದು ಅರ್ಧ ಜ್ಞಾನ ಇದ್ರೆ ತುಂಬಾ ಕಷ್ಟ..! ಫುಲ್ ಜ್ಞಾನ ಇರಬೇಕು, ಇಲ್ಲ ಜ್ಞಾನವೇ ಇರಬಾರದು. ಅರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ ಪದೇ ಪದೇ ಹೇಳಿಕೆ ಬದಲಿಸೋಕೆ. ಅರಗ ಜ್ಞಾನೇಂದ್ರ ಮೂರನೇ ಬಾರಿಗೆ ಈ ತರಹದ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ. ರಾಜ್ಯದ ಕೋಮು ಸಾಮರಸ್ಯ ಹಾಳು ಮಾಡುವ ಕೆಲಸವನ್ನ ಅರಗ ಜ್ಞಾನೇಂದ್ರ ಮಾಡಿದ್ದಾರೆ. ಅರಗ ಜ್ಞಾನೇಂದ್ರ ಮೇಲೆ ಎಫ್ಐಆರ್ ಮಾಡಬೇಕು ಎಂದಿದ್ದಾರೆ.

ಅರಗ ಜ್ಞಾನೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಅಂತಾನೂ ದೂರು ನೀಡಿದ್ದೇವೆ. ಗೃಹ ಸಚಿವರಿಗೆ ಎಲ್ಲಾ ಕಡೆಯಿಂದ ಮಾಹಿತಿ ಬಂದಿರುತ್ತೆ‌. ನಾವು ಕಂಪ್ಲೆಂಟ್ ಕೊಡಬಾರದು ಅಂತಾ ನಮ್ಮ ಮನೆ ಬಳಿ ಪೊಲೀಸರು ಹೊರ ಬರೋಕೆ ಬಿಡ್ತಿರಲಿಲ್ಲ‌. ರಾಜ್ಯದ ಎಲ್ಲಾ ಕಡೆ ದೂರು ನೀಡ್ತಾ ಇದ್ದೇವೆ ಎಂದು ಮೊಹಮದ್ ನಲಪಾಡ್ ಹೇಳಿದ್ದಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಅವರು ಕೇಂದ್ರ ವಿಭಾಗದ ಡಿಸಿಪಿ ಎಂಎನ್ ಅನುಚೇತ್ ಗೆ ದೂರು ನೀಡಿದ್ದಾರೆ.

Also Read: ಬೆಳಗಾವಿ ಅಜ್ಜಿ ಬಳ್ಳಾರಿ ಕಾಲೇಜಿಗೆ ದೇಹ ದಾನ ಮಾಡಿ ಸಾರ್ಥಕತೆ ಮೆರೆದರು ! ಇದಕ್ಕೆ ಪ್ರೇರಣೆ ಯಾರು? ಇಲ್ಲಿದೆ ಕ್ರಾಂತಿಕಾರಿ ಸ್ಟೋರಿ!

Also Read: ಬೆಂಗಳೂರಿಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಆಗಮನ ಹಿನ್ನೆಲೆ; ರಾಘವೇಂದ್ರ ಸ್ವಾಮಿ ಮಠಕ್ಕೆ ಸಿಎಂ ಭೇಟಿ

Follow us on

Related Stories

Most Read Stories

Click on your DTH Provider to Add TV9 Kannada