Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆ ಮಾಡುವ ಉದ್ದೇಶ ನನಗಿರಲಿಲ್ಲ; ಬುದ್ಧಿ ಕಲಿಸಲು ಹೋಗಿ ಕೋಪದಿಂದ ಮಗನನ್ನೇ ಕೊಂದೆ, ವಿಚಾರಣೆ ವೇಳೆ ಅರ್ಪಿತ್ ತಂದೆ ಕಣ್ಣೀರು

ಮಗ ಹಾಳಾಗಿ ಹೋಗಿ ಮನೆಯನ್ನು ಹಾಳು ಮಾಡ್ತಾನೆ ಎಂದು ಕೋಪಗೊಂಡಿದ್ದೆ. ಕೋಪಗೊಂಡು ಬುದ್ಧಿ ಕಲಿಸಲು ಅಲ್ಲೆ ಇದ್ದ ಥಿನ್ನರ್ ಹಾಕಿದ್ದೆ. ಮೊದಲ ಸಲ ಕಡ್ಡಿ ಗೀರಿದಾಗ ಅವನು ಅಲುಗಾಡಲಿಲ್ಲ. ಆಗ ಮತ್ತೊಮ್ಮೆ ಕೋಪದಿಂದ ಕಡ್ಡಿ ಗೀರಿದ್ದೆ. ಕೊಲೆ ಮಾಡುವ ಉದ್ದೇಶ ಇರಲಿಲ್ಲ.

ಕೊಲೆ ಮಾಡುವ ಉದ್ದೇಶ ನನಗಿರಲಿಲ್ಲ; ಬುದ್ಧಿ ಕಲಿಸಲು ಹೋಗಿ ಕೋಪದಿಂದ ಮಗನನ್ನೇ ಕೊಂದೆ, ವಿಚಾರಣೆ ವೇಳೆ ಅರ್ಪಿತ್ ತಂದೆ ಕಣ್ಣೀರು
ಅರ್ಪಿತ್ ಮತ್ತು ತಂದೆ ಸುರೇಂದ್ರ
Follow us
TV9 Web
| Updated By: ಆಯೇಷಾ ಬಾನು

Updated on:Apr 08, 2022 | 7:39 AM

ಬೆಂಗಳೂರು: ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರಬಹುದು, ಕೆಟ್ಟ ಅಪ್ಪ-ಅಮ್ಮ ಇರಲ್ಲ ಅಂತಾರೆ. ಆದ್ರೆ, ಇಲ್ಲಿ ಕೊಳ್ಳಿ ಇಡಬೇಕಾದ ಮಗನಿಗೆ ಅಪ್ಪನೇ ಬೆಂಕಿ ಹಚ್ಚಿದ್ದಾನೆ. ಮಾರ್ಚ್ 7ರಂದು ರಾಜಸ್ಥಾನ ಮೂಲದ ಸುರೇಂದ್ರ ಎಂಬ ತಂದೆ ಅರ್ಪಿತ್ನನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ತಂದೆ ಸುರೇಂದ್ರನನ್ನು ಅರೆಸ್ಟ್ ಮಾಡಿದ್ದಾರೆ. ಆದ್ರೆ ತನಿಖೆ ವೇಳೆ ಸತ್ಯವನ್ನು ಬಾಯ್ಬಿಟ್ಟಿದ್ದು ಮಗನ ಸಾವಿಗೆ ತಂದೆ ಕಣ್ಣೀರು ಹಾಕಿದ್ದಾರೆ.

ಆಜಾದ್ ನಗರದಲ್ಲಿ ತಂದೆಯಿಂದ ಪುತ್ರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿಚಾರಣೆ ವೇಳೆ ಕೊಲೆಯ ಅಸಲಿ ವಿಚಾರ ಬಯಲಾಗಿದೆ. ಪೊಲೀಸರ ಮುಂದೆ ಸುರೇಂದ್ರ ಕಣ್ಣೀರು ಹಾಕಿದ್ದಾರೆ. ಮಗ ಜೀವನದಲ್ಲಿ ಏನನ್ನೂ ಸರಿ ಮಾಡಲಿಲ್ಲಾ. ಇತ್ತ ಸಿಎ ಅರ್ಧಕ್ಕೆ ನಿಲ್ಲಿಸಿದ್ದ. ಅತ್ತ ವ್ಯವಹಾರ ನೋಡಿಕೊಳ್ಳಲು ಸೇರಿಸಿಕೊಂಡಿದ್ದೆ. ಅಲ್ಲಿಯೂ ಸರಿಯಾಗಿ ಕೆಲಸ ಮಾಡಲಿಲ್ಲ. ಬದಲಾಗಿ ಹಣಕಾಸು ಎಲ್ಲದ್ರಲ್ಲೂ ಸರಿಯಾದ ಲೆಕ್ಕಾಚಾರ ಇರಲಿಲ್ಲಾ. ಮಗ ಹಾಳಾಗಿ ಹೋಗಿ ಮನೆಯನ್ನು ಹಾಳು ಮಾಡ್ತಾನೆ ಎಂದು ಕೋಪಗೊಂಡಿದ್ದೆ. ಕೋಪಗೊಂಡು ಬುದ್ಧಿ ಕಲಿಸಲು ಅಲ್ಲೆ ಇದ್ದ ಥಿನ್ನರ್ ಹಾಕಿದ್ದೆ. ಮೊದಲ ಸಲ ಕಡ್ಡಿ ಗೀರಿದಾಗ ಅವನು ಅಲುಗಾಡಲಿಲ್ಲ. ಆಗ ಮತ್ತೊಮ್ಮೆ ಕೋಪದಿಂದ ಕಡ್ಡಿ ಗೀರಿದ್ದೆ. ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಬುದ್ಧಿ ಕಲಿಸುವ ಉದ್ದೇಶ ಇತ್ತು. ನಾನೆ ಕೈಯಾರೆ ಮಗನ ಕೊಂದು ಬಿಟ್ಟೆ ಎಂದು ಅರ್ಪಿತ್ ತಂದೆ ಸುರೇಂದ್ರ ಕಣ್ಣೀರು ಹಾಕಿದ್ದಾರೆ.

ನಾನೇ ಬೆಂಕಿ ಹಚ್ಚಿಕೊಂಡಿದ್ದು ಎಂಬ ಹೇಳಿಕೆ ನೀಡಿದ್ದ ಅರ್ಪಿತ್ ಇನ್ನು ಘಟನೆ ನಡೆದ ದಿನ ಪೊಲೀಸರಿಗೆ ದೂರು ನೀಡಿಲ್ಲ. ಆಸ್ಪತ್ರೆ ಎಂಎಲ್ಸಿ ಅನ್ವಯ ಅಸ್ಪತ್ರೆಗೆ ಭೇಟಿ ನೀಡಿದ್ದ ಚಾಮರಾಜಪೇಟೆ ಪೊಲೀಸರು ಅರ್ಪಿತ್ ಹೇಳಿಕೆ ದಾಖಲು ಮಾಡಿಕೊಂಡಿದ್ರು. ತಾನೆ ತಾನಾಗಿಯೇ ಬೆಂಕಿ ಹಾಕಿಕೊಂಡಿದ್ದಾಗಿ ಅರ್ಪಿತ್ ಹೇಳಿಕೆ ನೀಡಿದ್ದ. ಮೊದಲ ದಿನ ಹೇಳಿಕೆ ನೀಡುವಾಗ ಅರ್ಪಿತ್ ಆರೋಗ್ಯವಾಗಿದ್ದ. ಆಸ್ಪತ್ರೆಯಲ್ಲಿ ಮಗನಿಗೆ ಸುರೇಂದ್ರರೇ ಚಿಕಿತ್ಸೆ ಕೊಡಿಸುತಿದ್ದರು. ಮೊದಲ ಹೇಳಿಕೆ ಬಳಿಕ ಸ್ಥಳ ಪರಿಶೀಲನೆ ನಡೆಸಿದ್ದ ಪೊಲೀಸರು ಸ್ಥಳ ಪರಿಶೀಲನೆ ನಡೆಸುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯ ಪತ್ತೆಯಾಗಿದೆ. ನಂತ್ರ ಮತ್ತೊಮ್ಮೆ ಹೇಳಿಕೆ ದಾಖಲು ಮಾಡಲು ಪೊಲೀಸರು ಬಂದಿದ್ದು ಈ ವೇಳೆ ಅರ್ಪಿತ್ ಗೆ ಸುಟ್ಟ ಗಾಯಗಳು ಮಾಸದೆ ಸೀರಿಯಸ್ ಆಗಿದ್ದ ಆಗ ಸಾಕ್ಷಿ ಬೇರೆ ಇದೆ ನೀನು ಬೇರೆ ಹೇಳಿದ್ದಿಯಾ ಎಂದು ಪೊಲೀಸರು ಪ್ರಶ್ನಿಸಿದಕ್ಕೆ ಆಗ ತಂದೆ ಕೋಪದಲ್ಲಿ ಹೀಗೆ ಮಾಡಿಬಿಟ್ರು ಎಂದಿದ್ದ. ತಂದೆ ಬೆಂಕಿ ಹಾಕಿದ್ದು ಎಂದು ಹೇಳಿಕೆ ನೀಡಿದ್ದ. ಬಳಿಕ ಆಸ್ಪತ್ರೆಯಲ್ಲಿ ಸಹ ತಂದೆಯೇ ತನನ್ನು ಬದುಕಿಸಲು ಹೋರಾಡುತಿದ್ದಾರೆ ಎಂದಿದ್ದ.

ಇಷ್ಟಾದ ಬಳಿಕವೂ ಅರ್ಪಿತ್ ಬದುಕಲಿಲ್ಲ. ಅರ್ಪಿತ್ ಘಟನೆ ಬಗ್ಗೆ ಕುಟುಂಬದವರು ದೂರು ನೀಡಿಲ್ಲ. ಪ್ರತ್ಯಕ್ಷದರ್ಶಿ ಓರ್ವರು ನೀಡಿದ ದೂರಿನ ಅನ್ವಯ ಕೇಸ್ ದಾಖಲಾಗಿದೆ. ಕೊಲೆ ಪ್ರಕರಣ ದಾಖಲು ಮಾಡಿ ತಂದೆ ಸರೇಂದ್ರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಘಟನೆ ಹಿನ್ನೆಲೆ ಮನೆ ಎದುರೇ ಮಗ ಅರ್ಪಿತ್(25)ಗೆ ತಂದೆ ಸುರೇಂದ್ರ ಬೆಂಕಿ ಇಟ್ಟಿದ್ದಾರೆ. ರಾಜಸ್ಥಾನ ಮೂಲದ ಸುರೇಂದ್ರ, ಪತ್ನಿ, ಮಗ, ಮಗಳೊಂದಿಗೆ ಚಾಮರಾಜಪೇಟೆಯ ಆಜಾದ್ ನಗರದಲ್ಲಿ ವಾಸವಿದ್ರು. ಬಿಲ್ಡಿಂಗ್ ಫ್ಯಾಬ್ರಿಕೇಷನ್ ವರ್ಕ್ಸ್ ಮಾಡ್ತಿದ್ದ ಸುರೇಂದ್ರ ಪಕ್ಕಾ ಬ್ಯುಸಿನೆಸ್ ಮೈಂಡೆಡ್. ಮನೆಯಲ್ಲೂ ಡಿಸಿಷನ್ ಮೇಕರ್. ಸಿಎ ಅರ್ಧಕ್ಕೆ ಬಿಟ್ಟಿದ್ದ ಮಗನನ್ನ, ಬ್ಯುಸಿನೆಸ್ಗೆ ಸೇರಿಸಿಕೊಂಡಿದ್ರು. ಆದ್ರೆ, ಅರ್ಪಿತ್ ಜವಾಬ್ದಾರಿ ವಹಿಸಿಕೊಂಡ ಕೆಲವೇ ದಿನಗಳಲ್ಲಿ, ಒಂದೂವರೆ ಕೋಟಿ ವ್ಯತ್ಯಾಸವಾಗಿತ್ತಂತೆ. ಇದೇ ಕಾರಣಕ್ಕೆ ಏಪ್ರಿಲ್ 2ರಂದು ವಾಗ್ವಾದ ನಡೆದಿದೆ. ಸಿಟ್ಟಿಗೆದ್ದ ಸುರೇಂದ್ರ ಥಿನ್ನರ್ ಲಿಕ್ವಿಡ್ ಅನ್ನ ಮಗನ ಮೇಲೆರೆಚಿದ್ದಾನೆ. ತಕ್ಷಣ ಅರ್ಪಿತ್ ಹೊರಗೆ ಬಂದಿದ್ದಾನೆ. ಅಲ್ಲಿಗೂ ಬಂದ ಸುರೇಂದ್ರ ಕಡ್ಡಿ ಗೀರಿ ಮಗನ ಮೇಲೆ ಎಸೆದಿದ್ದಾನೆ.

ಮಧ್ಯಾಹ್ನ 1.50ರ ಸುಮಾರಿಗೆ ಜನರೆದುರೇ ಸುರೇಂದ್ರ ಮಗನ ಮೇಲೆ ಬೆಂಕಿ ಹಚ್ಚಿದ್ರು. ಈ ವೇಳೆ ಕಿರುಚುತ್ತಾ ಅರ್ಪಿತ್ ಓಡಿದ್ದು, ಕೂಡಲೇ ಸ್ಥಳೀಯರು ದೌಡಾಯಿಸಿದ್ದಾರೆ. ನಂತರ, ಸ್ಥಳೀಯರ ನೆರವೊಂದಿಗೆ ಅಪ್ಪನೇ ಮಗನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಿಸದೆ ಅರ್ಪಿತ್ ವಿಕ್ಟೋರಿಯಾದಲ್ಲಿ ಉಸಿರು ಚೆಲ್ಲಿದ್ದಾನೆ.

ಅಂದಹಾಗೇ, ಅರ್ಪಿತ್ ತಂದೆ ಸುರೇಂದ್ರ, ತಮ್ಮ ಮಾತೇ ನಡೆಯಬೇಕೆಂದು ಹಠ ಹಿಡೀತಿದ್ರಂತೆ. ಅರ್ಪಿತ್ ಕೂಡ ಅಪ್ಪನ ಮಾತು ಮೀರದಂತೆ ಹೆಜ್ಜೆ ಹಾಕ್ತಿದ್ನಂತೆ. ಆದ್ರೆ, ಅವತ್ತು ಮಾತಿಗೆ ಮಾತು ಬೆಳೆದಾಗ, “ನಾನು ಲೆಕ್ಕ ಕೊಟ್ರೂ ಸಾಯಿಸ್ತೀಯಾ, ಕೊಡದಿದ್ರೂ ಸಾಯಿಸ್ತೀಯಾ ಏನು ಮಾಡ್ತೀಯೋ ಮಾಡ್ಕೋ” ಅಂದುಬಿಟ್ಟಿದ್ದಾನೆ. ಹೀಗಾಗಿ, ಕೋಪದಲ್ಲಿ ಸುರೇಂದ್ರ ಮಗನನ್ನ ಬೆದರಿಸಲು ಹೋಗಿದ್ನಂತೆ. ಹೀಗಿದ್ರೂ ಮಗ ಭಯಪಟ್ಟಿರಲಿಲ್ವಂತೆ. ಇದ್ರಿಂದ ತಂದೆ ಕಡ್ಡಿಗೀರಿ ಬೆಂಕಿ ಹಚ್ಚೋದಾಗಿ ಭಯಪಡಿಸಿದ್ದಾರೆ. ಆದ್ರೆ, ದುರಂತ ಅಂದ್ರೆ ಮಗನಿಗೆ ಬೆಂಕಿ ಹೊತ್ತಿಕೊಂಡಿದೆ. ಪೊಲೀಸರ ವಿಚಾರಣೆಯಲ್ಲಿ ತಂದೆ ನಾನು ಬೇಕು ಅಂತಾ ಮಾಡಲಿಲ್ಲ. ಮಗನಿಗೆ ಬುದ್ಧಿ ಕಲಿಸಲು ಹೋಗಿ ಹೀಗೆ ಆಗೋಯ್ತು ಎಂದಿದ್ದಾರೆ.

ಇದನ್ನೂ ಓದಿ: Curd: ಮೊಸರನ್ನು ಹತ್ತು ಹಲವು ಪದಾರ್ಥದೊಂದಿಗೆ, ಪ್ರತ್ಯೇಕವಾಗಿ ಬೆರೆಸಿಕೊಂಡು ತಿನ್ನಿ -ಫಲಿತಾಂಶ ಅದ್ಭುತವಾಗಿರುತ್ತದೆ!

ಹಣಕಾಸು ವ್ಯವಹಾರದಲ್ಲಿ ಲೆಕ್ಕ ತಪ್ಪಿದಕ್ಕೆ CA ಓದುತ್ತಿದ್ದ ಮಗನಿಗೆ ಬೆಂಕಿ ಹಚ್ಚಿದ ಜಿಪುಣ ತಂದೆ; ಚಿಕಿತ್ಸೆ ಫಲಿಸದೆ ಮಗ ಸಾವು

Published On - 7:22 am, Fri, 8 April 22