Sign In

By signing in or creating an account, you agree with Associated Broadcasting Company's Terms & Conditions and Privacy Policy.

Curd: ಮೊಸರನ್ನು ಹತ್ತು ಹಲವು ಪದಾರ್ಥದೊಂದಿಗೆ, ಪ್ರತ್ಯೇಕವಾಗಿ ಬೆರೆಸಿಕೊಂಡು ತಿನ್ನಿ -ಫಲಿತಾಂಶ ಅದ್ಭುತವಾಗಿರುತ್ತದೆ!

ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಅಲ್ಸರ್ ಮಾಯವಾಗುತ್ತದೆ. ಈ ಮಿಶ್ರಣ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿನ ಇನ್‌‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ.

Curd: ಮೊಸರನ್ನು ಹತ್ತು ಹಲವು ಪದಾರ್ಥದೊಂದಿಗೆ, ಪ್ರತ್ಯೇಕವಾಗಿ ಬೆರೆಸಿಕೊಂಡು ತಿನ್ನಿ -ಫಲಿತಾಂಶ ಅದ್ಭುತವಾಗಿರುತ್ತದೆ!
ಮೊಸರನ್ನು ಹತ್ತು ಹಲವು ಪದಾರ್ಥದೊಂದಿಗೆ ಪ್ರತ್ಯೇಕವಾಗಿ ಬೆರೆಸಿಕೊಂಡು ತಿನ್ನಿ, ಫಲಿತಾಂಶ ಅದ್ಭುತವಾಗಿರುತ್ತದೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 08, 2022 | 6:06 AM

ಹಾಲಿನಿಂದ ತಯಾರಿಸುವ ಮೊಸರೆಂದರೆ ಬಹಳಷ್ಟು ಮಂದಿಗೆ ಇಷ್ಟ. ಕೆಲವರಂತೂ ಊಟದ ಕೊನೆಯಲ್ಲಿ ಮೊಸರು ತಿನ್ನದಿದ್ದರೆ ಅವರಿಗೆ ಪರಿಪೂರ್ಣ ತೃಪ್ತಿ ಸಿಗುವುದಿಲ್ಲ. ಭೋಜನ ಅಪೂರ್ಣವಾಗಿ ಮುಗಿದಂತೆ ಭಾವಿಸುತ್ತಾರೆ. ಆ ಮಾತು ಬಿಡಿ, ಮೊಸರಿನಿಂದ ನಮಗೆ ಅನೇಕ ವಿಧವಾದ ಲಾಭಗಳಿವೆ. ಈ ವಿಷಯ ಎಲ್ಲರಿಗೂ ಗೊತ್ತಿರುವುದೇ. ಮೊಸರಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಬೆರೆಸಿಕೊಂಡು ತಿಂದರೆ ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ಸುಲಭವಾಗಿ ದೂರವಾಗುತ್ತವೆ. ಆ ಆಹಾರ ಯಾವುದು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.

  1.  ಸ್ವಲ್ಪ ಜೀರಿಗೆ ತೆಗೆದುಕೊಂಡು ಪುಡಿ ಮಾಡಿ ಅದನ್ನು ಒಂದು ಕಪ್ ಮೊಸರಿನಲ್ಲಿ ಬೆರೆಸಿಕೊಂಡು ತಿಂದರೆ ಶೀಘ್ರವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.
  2.  ಸ್ವಲ್ಪ ಕಪ್ಪು ಉಪ್ಪನ್ನು ತೆಗೆದುಕೊಂಡು ನುಣ್ಣಗೆ ಮಾಡಿಕೊಳ್ಳಿ. ಅದನ್ನು ಒಂದು ಕಪ್ ಮೊಸರಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು. ಇದರಿಂದ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಮುಖ್ಯವಾಗಿ ಗ್ಯಾಸ್, ಅಸಿಡಿಟಿಯಂತಹವು ಕಡಿಮೆಯಾಗುತ್ತವೆ.
  3.  ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನಬೇಕು. ಇದರಿಂದ ದೇಹಕ್ಕೆ ಕೂಡಲೆ ಶಕ್ತಿ ಸಿಗುತ್ತದೆ. ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ.
  4. ಸ್ವಲ್ಪ ಓಂಕಾಳನ್ನು ತೆಗೆದುಕೊಂಡು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ತಿನ್ನಬೇಕು. ಇದರಿಂದ ಬಾಯಿಹುಣ್ಣು, ಹಲ್ಲುನೋವು, ಇತರೆ ದಂತ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.
  5. ಒಂದು ಕಪ್ಪು ಮೊಸರಿನೊಂದಿಗೆ ಸ್ವಲ್ಪ ಕಪ್ಪು ಮೆಣಸಿನ ಪುಡಿಯನ್ನು ಬೆರೆಸಿ ತಿನ್ನಬೇಕು. ಇದರಿಂದ ಮಲಬದ್ಧತೆ ದೂರವಾಗುತ್ತದೆ. ತಿಂದ ಆಹಾರ ಸರಿಯಾಗಿ ಪಚನವಾಗುತ್ತದೆ.
  6. ಮೊಸರಿನಲ್ಲಿ ಸ್ವಲ್ಪ ಓಟ್ಸ್ ಬೆರೆಸಿ ತಿನ್ನಬೇಕು. ಹೀಗೆ ಮಾಡುವುದರಿಂದ ಒಳ್ಳೆಯ ಪ್ರೋಬಯೋಟಿಕ್ಸ್, ಪ್ರೋಟೀನ್ ಲಭಿಸುತ್ತದೆ. ಇವು ಮಾಂಸಖಂಡಗಳ ಶಕ್ತಿಗೆ ಸಹಾಯಕಾರಿ.
  7. ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ಶರೀರ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಲವು ವಿಧದ ಇನ್‌ಫೆಕ್ಷನ್‌ಗಳು, ರೋಗಗಳು ಬರದಂತೆ ನೋಡಿಕೊಳ್ಳಬಹುದು.
  8. ಮೊಸರಿನೊಂದಿಗೆ ಸ್ವಲ್ಪ ಅರಿಶಿನ, ಸ್ವಲ್ಪ ಶುಂಠಿ ಬೆರೆಸಿ ತಿನ್ನಬೇಕು. ಇದರಿಂದ ಫೋಲಿಕ್ ಆಸಿಡ್ ಶರೀರಕ್ಕೆ ಸೇರುತ್ತದೆ. ಇದು ಚಿಕ್ಕಮಕ್ಕಳಿಗೆ, ಗರ್ಭಿಣಿಯರಿಗೆ ಎಷ್ಟೋ ಉಪಯುಕ್ತ.
  9. ಮೊಸರಿನೊಂದಿಗೆ ಆರೆಂಜ್ ಜ್ಯೂಸ್ ಬೆರೆಸಿಕೊಂಡು ತಿನ್ನಬೇಕು. ಇದರಿಂದ ಶರೀರಕ್ಕೆ ಸಾಕಷ್ಟು ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ಕೀಲು ನೋವು ಕಡಿಮೆ ಮಾಡುತ್ತೆ. ವೃದ್ಧಾಪ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
  10.  ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಅಲ್ಸರ್ ಮಾಯವಾಗುತ್ತದೆ. ಈ ಮಿಶ್ರಣ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿನ ಇನ್‌‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ. (ಬರಹ -ವಾಟ್ಸಪ್ ಸಂದೇಶ)

ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ