AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿಗೆ ಹೋದ ಖ್ಯಾತ ಕಮಿಡಿಯನ್ ಸಹಾಯಕ್ಕೆ ಧಾವಿಸಿದ ಸೋನು ಸೂದ್

Sonu Sood help to Rajpal Yadav: ಸೋನು ಸೂದ್, ತಮ್ಮದೇ ಚಿತ್ರರಂಗದ ಸಹನಟನಿಗೆ ಸಹಾಯ ಘೋಷಿಸಿದ್ದಾರೆ. ಇತ್ತೀಚೆಗಷ್ಟೆ ಜೈಲುಪಾಲಾದ ಖ್ಯಾತ ಹಾಸ್ಯ ನಟ ರಾಜ್​​ಪಾಲ್ ಯಾದವ್​​ ಅವರಿಗೆ ತಾವು ಸಹಾಯ ಮಾಡುವುದಾಗಿ ಸೋನು ಸೂದ್ ಹೇಳಿದ್ದಾರೆ. ಮಾತ್ರವಲ್ಲದೆ ಚಿತ್ರರಂಗದ ಇತರರು ಸಹ ರಾಜ್​ಪಾಲ್ ಯಾದವ್ ಅವರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಜೈಲಿಗೆ ಹೋದ ಖ್ಯಾತ ಕಮಿಡಿಯನ್ ಸಹಾಯಕ್ಕೆ ಧಾವಿಸಿದ ಸೋನು ಸೂದ್
Sonu Sood Rajpal
ಮಂಜುನಾಥ ಸಿ.
|

Updated on: Feb 10, 2026 | 12:53 PM

Share

ಸೋನು ಸೂದ್ (Sonu Sood), ಕೋವಿಡ್ ಸಮಯದಲ್ಲಿ ಮಾಡಿದ ಅಭೂತಪೂರ್ವ ಸಮಾಜ ಸೇವೆ ಅವರಿಗೆ ‘ಮಸೀಹ’ (ದೇವರ ಅವತಾರ) ಎಂಬ ಹೆಸರು ತಂದುಕೊಟ್ಟಿದೆ. ಕೋವಿಡ್ ಬಳಿಕವೂ ಸಹ ಸೋನು ಸೂದ್ ಅವರು ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರೆಸಿದ್ದಾರೆ. ಹಲವಾರು ಮಕ್ಕಳ ಶಿಕ್ಷಣ, ಆರೋಗ್ಯ ಚಿಕಿತ್ಸೆಗಳಿಗೆ ನೆರವಾಗುತ್ತಲೇ ಇದ್ದಾರೆ. ಇದೀಗ ಸೋನು ಸೂದ್, ತಮ್ಮದೇ ಚಿತ್ರರಂಗದ ಸಹನಟನಿಗೆ ಸಹಾಯ ಘೋಷಿಸಿದ್ದಾರೆ. ಇತ್ತೀಚೆಗಷ್ಟೆ ಜೈಲುಪಾಲಾದ ಖ್ಯಾತ ಹಾಸ್ಯ ನಟ ರಾಜ್​​ಪಾಲ್ ಯಾದವ್​​ ಅವರಿಗೆ ತಾವು ಸಹಾಯ ಮಾಡುವುದಾಗಿ ಸೋನು ಸೂದ್ ಹೇಳಿದ್ದಾರೆ.

9 ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯವು ರಾಜ್​​ಪಾಲ್ ಯಾದವ್ ಅವರು ಅಪರಾಧಿ ಎಂದು ತೀರ್ಪು ನೀಡಿದ್ದು, ರಾಜ್​ಪಾಲ್ ಅವರಿಗೆ ಶಿಕ್ಷೆ ವಿಧಿಸಿದೆ. ಜೈಲಿಗೆ ಹೋಗುವ ಮುಂಚೆ ಹೇಳಿಕೆ ನೀಡಿದ್ದ ರಾಜ್​ಪಾಲ್ ಯಾದವ್, ತಮ್ಮ ಬಳಿ ಹಣವೂ ಇಲ್ಲ, ಯಾರೂ ಸ್ನೇಹಿತರೂ ಇಲ್ಲ’ ಎಂದಿದ್ದರು. ಇದೀಗ ಸೋನು ಸೂದ್, ರಾಜ್​ಪಾಲ್ ಯಾದವ್ ಅವರಿಗೆ ನೆರವಾಗಲು ಮುಂದೆ ಬಂದಿದ್ದಾರೆ.

ರಾಜ್​ಪಾಲ್ ಯಾದವ್​​ಗೆ ಸಹಾಯ ಮಾಡಲು ಮುಂದೆ ಬಂದಿರುವ ಸೋನು ಸೂದ್, ರಾಜ್​ಪಾಲ್ ಅವರಿಗೆ ತಮ್ಮ ಸಿನಿಮಾನಲ್ಲಿ ಪಾತ್ರ ನೀಡುವ ಜೊತೆಗೆ ಅವರಿಗೆ ಒಳ್ಳೆಯ ಮೊತ್ತವನ್ನು ಮುಂಗಡವಾಗಿ ನೀಡುವುದಾಗಿಯೂ ಸಹ ಹೇಳಿದ್ದಾರೆ. ಅಲ್ಲದೆ, ಇದು ನಾನು ಅವರಿಗೆ ಮಾಡುತ್ತಿರುವ ಸಹಾಯ ಏನಲ್ಲ ಬದಲಿಗೆ ಒಬ್ಬ ಕಲಾವಿದನಿಗೆ ನೀಡುತ್ತಿರುವ ಬೆಂಬಲ ಅಷ್ಟೆ ಎಂದಿದ್ದಾರೆ.

ಇದನ್ನೂ ಓದಿ:ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಸೋನು ಸೂದ್, ಚಿತ್ರರಂಗದ ಇತರರು ಸಹ ಮುಂದೆ ಬಂದು ರಾಜ್​ಪಾಲ್ ಯಾದವ್ ಅವರಿಗೆ ಸಹಾಯ ಮಾಡಬೇಕು ಎಂದಿದ್ದಾರೆ. ‘ರಾಜ್‌ಪಾಲ್ ಯಾದವ್ ಒಬ್ಬ ಪ್ರತಿಭಾನ್ವಿತ ನಟ, ಅವರು ನಮ್ಮ ಚಿತ್ರರಂಗಕ್ಕೆ ವರ್ಷಗಳ ಕಾಲ ಮರೆಯಲಾಗದ ನೆನಪುಗಳನ್ನು ನೀಡಿದ್ದಾರೆ. ಕೆಲವೊಮ್ಮೆ ಸಂದರ್ಭಗಳು ಸಂಕಟಮಯ ಆಗಿಬಿಡುತ್ತವೆ, ಈಗ ಅವರ ಸಮಯ ಕ್ರೂರವಾಗಿದೆ. ಅವರು, ನಾನು ಬದುಕುತ್ತಿರುವ ಚಿತ್ರರಂಗದ ಭಾಗವೇ ಆಗಿದ್ದಾರೆ ಮತ್ತು ನಿರ್ಮಾಪಕರು, ನಿರ್ದೇಶಕರು, ಸಹೋದ್ಯೋಗಿಗಳು ಒಟ್ಟಾಗಿ ನಿಲ್ಲುವ ಕ್ಷಣ ಎಂದು ನಾನು ನಂಬುತ್ತೇನೆ. ಭವಿಷ್ಯದ ಕೆಲಸಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಬಹುದಾದ ಸಣ್ಣ ಮುಂಗಡ ಮೊತ್ತ ದಾನವಲ್ಲ, ಅದು ಘನತೆ’ ಎಂದಿದ್ದಾರೆ.

ಆ ಮೂಲಕ ಸಿನಿಮಾಕ್ಕಾಗಿ ಅಡ್ವಾನ್ಸ್ ಹಣವನ್ನು ನೀಡುವ ಮೂಲಕ ರಾಜ್​ಪಾಲ್ ಯಾದವ್ ಅವರಿಗೆ ಈ ಕ್ಷಣದಲ್ಲಿ ನೆರವಾಗಬೇಕಿದೆ ಎಂದಿದ್ದಾರೆ. ಅಸಲಿಗೆ ರಾಜ್​ಪಾಲ್ ಯಾದವ್ ಅವರಿಗೆ ಚಿತ್ರರಂಗದಲ್ಲಿ ಕೆಲವು ಗೆಳೆಯರಿದ್ದಾರೆ. ವರುಣ್ ಧವನ್ ತಂದೆ ಡೇವಿಡ್ ಧವನ್, ರಾಜ್​ಪಾಲ್ ಅವರಿಂದ ಸಾಕಷ್ಟು ಕೆಲಸ ತೆಗೆಸಿಕೊಂಡಿದ್ದಾರೆ. ನಿರ್ದೇಶಕ ಪ್ರಿಯದರ್ಶನ್ ಸಹ ಸಾಕಷ್ಟು ಕೆಲಸ ಮಾಡಿಸಿಕೊಂಡಿದ್ದಾರೆ. ಇನ್ನೂ ಕೆಲವು ನಿರ್ದೇಶಕರುಗಳು ಸಹ ರಾಜ್​ಪಾಲ್ ಯಾದವ್ ಅವರಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ಆದರೆ ಈ ಸಮಯದಲ್ಲಿ ಅವರು ಬಹುತೇಕ ಮೌನವಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್