AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಟಾಚಿ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಹೇಳಿದ್ದೇನು ನೋಡಿ!

ಹಿಟಾಚಿ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಹೇಳಿದ್ದೇನು ನೋಡಿ!

ಜಗದೀಶ ಬಿ.
| Edited By: |

Updated on: Feb 10, 2026 | 11:33 AM

Share

ತುಮಕೂರಿನ ಅಂತರಸನಹಳ್ಳಿ ಬಳಿಯ ಟಾಟಾ ಹಿಟಾಚಿ ಶೋರೂಂಗೆ ಬೀಗ ಹಾಕಿದ ಗ್ರಾಹಕ, ಟಾಟಾ ಕಂಪನಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವ್ಯಾಕೆ ಶೋರೂಂ ವಿರುದ್ಧ ಹಾಗೆ ನಡೆದುಕೊಂಡೆ, ಸಿಬ್ಬಂದಿಯ ಹೊರಗೆ ಕಳುಹಿಸಿ ಬೀಗ ಜಡಿದಿದ್ದು ಯಾಕೆ ಎಂಬ ಬಗ್ಗೆ ‘ಟಿವಿ9’ ಜತೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ.

ತುಮಕೂರು, ಫೆಬ್ರವರಿ 10: 52 ಲಕ್ಷ ರೂಪಾಯಿ ಮೌಲ್ಯದ ‘ಹಿಟಾಚಿ 140’ ಯಂತ್ರವು ಖರೀದಿಸಿದ ಐದೇ ತಿಂಗಳಲ್ಲಿ ಕೆಟ್ಟುಹೋಗಿದ್ದರಿಂದ ಅಸಮಾಧಾನಗೊಂಡ ಗ್ರಾಹಕ ಗಿರೀಶ್ ಅವರು ಹಿಟಾಚಿ ಶೋರೂಂಗೆ ಬೀಗ ಜಡಿದ ಘಟನೆ ತುಮಕೂರಿನ ಅಂತರಸನಹಳ್ಳಿ ಬಳಿ ನಡೆದಿದೆ. 2022ರ ಡಿಸೆಂಬರ್‌ನಲ್ಲಿ ಯಂತ್ರವನ್ನು ಖರೀದಿಸಲಾಗಿತ್ತು. 7,000 ಗಂಟೆಗಳ ವಾರಂಟಿ ಇದ್ದರೂ, ಕೇವಲ 480 ಗಂಟೆಗಳ ಬಳಿಕ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಗುಬ್ಬಿ ಮೂಲದ ಗಿರೀಶ್ ಅಳಲು ತೋಡಿಕೊಂಡಿದ್ದಾರೆ.

ಕಳೆದ ಎರಡು ತಿಂಗಳಿಂದ ದುರಸ್ತಿಗಾಗಿ ಹಲವಾರು ಬಾರಿ ಪ್ರಯತ್ನಿಸಿದರೂ, ಸಮಸ್ಯೆಯನ್ನು ಪರಿಹರಿಸಿಲ್ಲ ಎಂದು ಗಿರೀಶ್ ಆರೋಪಿಸಿದ್ದಾರೆ. ಯಂತ್ರವು ನಿರೀಕ್ಷೆಗಿಂತ ಹೆಚ್ಚು ಇಂಧನ (ಡೀಸೆಲ್) ಮುಗಿಸುತ್ತಿದ್ದು, ಪ್ರತಿ ತಿಂಗಳು 1,15,000 ರೂಪಾಯಿ EMI ಪಾವತಿಸುವುದು ಕಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿಕ್ರಿಯೆ ನೀಡದ ಕಂಪನಿ ಸಿಬ್ಬಂದಿ ಮತ್ತು ಮಾರಾಟ ಪ್ರತಿನಿಧಿ ಶಿವಾನಂದ್ ಅವರ ವರ್ತನೆಯಿಂದ ರೋಸಿಹೋಗಿ, ಶೋರೂಂಗೆ ಬೀಗ ಹಾಕಿದ್ದಾಗಿ ‘ಟಿವಿ9’ಗೆ ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸದಾಗಿ ಖರೀದಿಸಿದ ಹಿಟಾಚಿ ಕೆಟ್ಟುಹೋಯ್ತೆಂದು ಶೋರೂಮ್​ಗೇ ಬೀಗ ಹಾಕಿದ ಗ್ರಾಹಕ!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More