Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣಕಾಸು ವ್ಯವಹಾರದಲ್ಲಿ ಲೆಕ್ಕ ತಪ್ಪಿದಕ್ಕೆ CA ಓದುತ್ತಿದ್ದ ಮಗನಿಗೆ ಬೆಂಕಿ ಹಚ್ಚಿದ ಜಿಪುಣ ತಂದೆ; ಚಿಕಿತ್ಸೆ ಫಲಿಸದೆ ಮಗ ಸಾವು

ಬೆಂಗಳೂರಿನ ಆಜಾದ್ ನಗರದಲ್ಲಿ ಮಗ ಅರ್ಪಿತ್‌ನ ಮೇಲೆ ಪೆಟ್ರೋಲ್ ಸುರಿದು ತಂದೆ ಸುರೇಂದ್ರ(51) ಬೆಂಕಿ ಹಚ್ಚಿದ್ದಾರೆ. ಕಳೆದ ವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಅರ್ಪಿತ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಹಣಕಾಸು ವ್ಯವಹಾರದಲ್ಲಿ ಲೆಕ್ಕ ತಪ್ಪಿದಕ್ಕೆ CA ಓದುತ್ತಿದ್ದ ಮಗನಿಗೆ ಬೆಂಕಿ ಹಚ್ಚಿದ ಜಿಪುಣ ತಂದೆ; ಚಿಕಿತ್ಸೆ ಫಲಿಸದೆ ಮಗ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Apr 07, 2022 | 2:56 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ತಂದೆಯೇ ಮಗನಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. 12 ಸಾವಿರ ರೂಪಾಯಿ ಕಳೆದುಕೊಂಡಿದ್ದ ಮಗನಿಗೆ ತಂದೆಯೇ ಬೆಂಕಿ ಹಚ್ಚಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅರ್ಪಿತ್(25) ಮೃತಪಟ್ಟಿದ್ದಾನೆ. ಬೆಂಗಳೂರಿನ ಆಜಾದ್ ನಗರದಲ್ಲಿ ಮಗ ಅರ್ಪಿತ್‌ನ ಮೇಲೆ ಪೆಟ್ರೋಲ್ ಸುರಿದು ತಂದೆ ಸುರೇಂದ್ರ(51) ಬೆಂಕಿ ಹಚ್ಚಿದ್ದಾರೆ. ಕಳೆದ ವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಅರ್ಪಿತ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಅಪ್ಪ ಮಗನಿಗೆ ಬೆಂಕಿ ಹಾಕುವ ದೃಶ್ಯಾವಳಿ ಸಿಸಿಟಿಯಲ್ಲಿ ಸೆರೆಯಾಗಿದೆ.

ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನ್ನು ಈ ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ಎಂದು ಕೇಸ್ ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆ, ಸ್ಥಳೀಯರ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅರ್ಪಿತ್ ತಂದೆ ಸುರೇಂದ್ರರನ್ನು ಚಾಮರಾಜಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಗನಿಗೆ ಬೆಂಕಿ ಇಟ್ಟ ಸುರೇಂದ್ರ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದರು ಹಾಗೂ ಬಿಲ್ಡಿಂಗ್ ಫ್ಯಾಬ್ರಿಕೇಷನ್ ಬ್ಯುಸಿನೆಸ್ ನಡೆಸುತ್ತಿದ್ದರು. ಅರ್ಪಿತ್(25) ಸಿಎ ವ್ಯಾಸಂಗ ಅರ್ಧಕ್ಕೆ ಬಿಟ್ಟಿದ್ದ ಎಂದು ತಿಳಿದು ಬಂದಿದೆ. ಅರ್ಪಿತ್ ವಿದ್ಯಾಭ್ಯಾಸ ಮುಂದುವರೆಸದೇ, ಮನೆಯಲ್ಲಿ ಇದ್ದ. ಪೊಲೀಸರ ವಿಚಾರಣೆ ವೇಳೆ ತಾನೇ ಬೆಂಕಿ ಇಟ್ಟಿದ್ದಾಗಿ ಸುರೇಂದ್ರ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗೆ ಇಬ್ಬರು ಮಕ್ಕಳಿದ್ದು ಮೃತ ಅರ್ಪಿತ್ ಹಿರಿಯ ಮಗ, ಮತ್ತೊಬ್ಬಳು ಸಹೋದರಿ ಇದ್ದಾಳೆ. ಜಿಪುಣನಾಗಿದ್ದ ಸುರೇಂದ್ರನ ಮಾತೇ‌ ಮನೆಯಲ್ಲಿ ಅಂತಿಮವಾಗಿತ್ತು. ಸಿಎ ಅಪೂರ್ಣ, ಅಪ್ಪನ ಬ್ಯುಸಿನೆಸ್ ಕಡೆಗೂ ಮಗ ಗಮನ ಕೊಡ್ತಿರ್ಲಿಲ್ಲ. ಬ್ಯುಸಿನೆಸ್ ಜವಾಬ್ದಾರಿ ವಹಿಸಿದ್ರೆ 1.5 ಕೋಟಿಯಷ್ಟು ಲೆಕ್ಕದಲ್ಲಿ ವ್ಯತ್ಯಾಸವಾಗಿತ್ತು. ಇದೇ ವಿಚಾರವಾಗಿ ಅಪ್ಪ ಮಗನ ಮಧ್ಯೆ ಗಲಾಟೆಗಳಾಗಿತ್ತು. ರೊಚ್ಚಿಗೆದ್ದು ಥಿನ್ನರ್ ಸುರಿದು ಬೆಂಕಿ ಹಚ್ಚಿದ್ದ ಎನ್ನಲಾಗಿದೆ. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಪರಿಚಯಸ್ಥರು ಅರ್ಪಿತ್ನನ್ನು ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪೊಲೀಸರ ಮುಂದೆ ಅರ್ಪಿತ್ ಹೇಳಿಕೆ ನೀಡಿದ್ದ. ಅರ್ಪಿತ್ ಹೇಳಿಕೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಮೇಲೆ ಪ್ರಕರಣ ದಾಖಲಿಸಿಕೊಂಡು ತೀವ್ರ ವಿಚಾರಣೆ ನಡೆಸಿ‌ ಸುರೇಂದ್ರ ಅರೆಸ್ಟ್ ಮಾಡಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಚಾಮರಾಜಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಹಾದಿಯೇ ತೋರಿದ ಹಾದಿ: ಹೆರಿಗೆ ಮಾಡಿಸಿದಾಗ 15 ರೂಪಾಯಿ ಕೊಡಲೂ ಹಿಂದೇಟು ಹಾಕುತ್ತಾರೆ

ಕನ್ನಡದ ‘ಪ್ರೀತ್ಸು’ ಚಿತ್ರಕ್ಕೆ ಇಳಯರಾಜಾ ಸಂಗೀತ ನಿರ್ದೇಶನ;​ ಆಡಿಯೋ ರಿಲೀಸ್ ಮಾಡಿಕೊಂಡ​ ಖುಷಿಯಲ್ಲಿ ಚಿತ್ರತಂಡ

Published On - 2:21 pm, Thu, 7 April 22

ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​