AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore University: ನಾಳೆ ನಡೆಯಬೇಕಿದ್ದ 56ನೇ ಬೆಂಗಳೂರು ವಿವಿ ಘಟಿಕೋತ್ಸವ ದಿನಾಂಕ ಮುಂದೂಡಿಕೆ

ಇಷ್ಟು ದಿನ ವಿವಿ ಕುಲಪತಿ ವೇಣುಗೋಪಾಲ್ ನೇಮಕ ಪ್ರಕರಣ ವಿಚಾರ ಕೋರ್ಟ್ನಲ್ಲಿತ್ತು. ಸದ್ಯ ಇದೀಗ ಕುಲಪತಿ ನೇಮಕ ಪ್ರಕರಣ ಇತ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಘಟಿಕೋತ್ಸವ ತಯಾರಿಕೆಗೆ ಸಮಯಾವಕಾಶ ಬೇಕಾದ ಕಾರಣ ಏಪ್ರಿಲ್ ಕೊನೆ ವಾರದಲ್ಲಿ ಘಟಿಕೋತ್ಸವ ನಡೆಸಲು ನಿರ್ಧಾರ ಮಾಡಲಾಗಿದೆ.

Bangalore University: ನಾಳೆ ನಡೆಯಬೇಕಿದ್ದ 56ನೇ ಬೆಂಗಳೂರು ವಿವಿ ಘಟಿಕೋತ್ಸವ ದಿನಾಂಕ ಮುಂದೂಡಿಕೆ
ಬೆಂಗಳೂರು ವಿವಿ
TV9 Web
| Edited By: |

Updated on: Apr 07, 2022 | 12:25 PM

Share

ಬೆಂಗಳೂರು: ನಾಳೆ ನಡೆಯಬೇಕಿದ್ದ 56ನೇ ಬೆಂಗಳೂರು ವಿವಿ ಘಟಿಕೋತ್ಸವ(Bangalore University Convocation) ದಿನಾಂಕ ಮುಂದೂಡಲಾಗಿದೆ. ಏಪ್ರಿಲ್ 8 ರಂದು ನಿಗದಿಯಾಗಿದ್ದ 56ನೇ ಘಟಿಕೋತ್ಸವವನ್ನು ಏಪ್ರಿಲ್ ಕೊನೆ ವಾರದಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ.

ಇಷ್ಟು ದಿನ ವಿವಿ ಕುಲಪತಿ ವೇಣುಗೋಪಾಲ್ ನೇಮಕ ಪ್ರಕರಣ ವಿಚಾರ ಕೋರ್ಟ್ನಲ್ಲಿತ್ತು. ಸದ್ಯ ಇದೀಗ ಕುಲಪತಿ ನೇಮಕ ಪ್ರಕರಣ ಇತ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಘಟಿಕೋತ್ಸವ ತಯಾರಿಕೆಗೆ ಸಮಯಾವಕಾಶ ಬೇಕಾದ ಕಾರಣ ಏಪ್ರಿಲ್ ಕೊನೆ ವಾರದಲ್ಲಿ ಘಟಿಕೋತ್ಸವ ನಡೆಸಲು ನಿರ್ಧಾರ ಮಾಡಲಾಗಿದೆ. ಶೀಘ್ರವೇ ದಿನಾಂಕ ಪ್ರಕಟಿಸುವುದಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಉಕ್ರೇನ್‌ನಲ್ಲಿರುವ ಪಠ್ಯಕ್ರಮದಂತೆಯೇ ವಿದ್ಯಾಭ್ಯಾಸ ನೀಡ್ತೇವೆ ಉಕ್ರೇನ್‌ನಿಂದ ವಾಪಸಾದ 17 MBBS ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹಾಯದ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ BLDE ಕಾಲೇಜಿನಿಂದ ಸಹಕಾರ ನೀಡುತ್ತೇವೆ ಎಂದು ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ನಿನ್ನೆ ತಮ್ಮನ್ನು ಭೇಟಿಯಾದ 17 ಜನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಹಾಯದ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಾಯ, ಸಹಕಾರ ಮಾಡೋದಾಗಿ ಹೇಳಿದ್ರು. ಬಿಎಲ್ಡಿಇ ಮೆಡಿಕಲ್ ವೈದ್ಯಕೀಯ ಕಾಲೇಜಿನಲ್ಲಿ ಗ್ರಂಥಾಲಯ ಬಳಕೆಗೆ ಸೂಚನೆ ನೀಡಿದ್ದಾರೆ. ಉಕ್ರೇನ್‌ನಲ್ಲಿರುವ ಪಠ್ಯಕ್ರಮದಂತೆಯೇ ವಿದ್ಯಾಭ್ಯಾಸ ನೀಡ್ತೇವೆ. 17 ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಉಪನ್ಯಾಸಕರ ನಿಯೋಜನೆ ಮಾಡಲಾಗುತ್ತೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ನಿನ್ನೆ ವಿದ್ಯಾರ್ಥಿಗಳು ನನ್ನನ್ನ ಭೇಟಿ ಮಾಡಿದ್ದಾರೆ. ಉಕ್ರೇನ್ ಮೆಡಿಕಲ್ ಕಾಲೇಜುಗಳಿಂದ ಆನ್ ಲೈನ್ ಕ್ಲಾಸ್ ನಡೆಯುತ್ತಿಲ್ಲ. ಅಧ್ಯಾಯನ ಅಪೂರ್ಣವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಮಾನವೀಯ ದೃಷ್ಟಿಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುತ್ತೇವೆ. ಮುಂದಿನ ವ್ಯಾಸಂಗಕ್ಕಾಗಿ ಸೀಟ್ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು, ಪ್ರಧಾನಿ ಭೇಟಿಯಾಗಲು ವಿದ್ಯಾರ್ಥಿಗಳಿಗೆ ಹೇಳಿರುವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಮೂಲಕವು ಕೇಂದ್ರದ ಗಮನಕ್ಕೆ ಈ ವಿಚಾರ ತರಲು ನಾನು ಪ್ರಯತ್ನಿಸುವೆ. ಕೇಂದ್ರ ಸರ್ಕಾರವೇ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ವ್ಯವಸ್ಥೆ ಮಾಡಬೇಕಿದೆ. ಯುದ್ಧದಿಂದಾಗಿ ಇಂಥ ಪರಿಸ್ಥಿತಿ ಬಂದಿದೆ. ಇದನ್ನ ಕೇಂದ್ರ ಸರ್ಕಾರವೇ ಪರಿಹರಿಸಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಅನುಪಯುಕ್ತ ಬೆಡ್​ಶೀಟ್​ಗೆ ಬೆಂಕಿ ಹಚ್ಚಿ ಆಸ್ಪತ್ರೆ ವಾರ್ಡ್ ತುಂಬೆಲ್ಲಾ ಹೊಗೆ; ಬ್ರಿಮ್ಸ್ ಸಿಬ್ಬಂದಿ ಎಡವಟ್ಟಿಗೆ ರೋಗಿಗಳು ಹೈರಾಣು

ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ನೋ ಎಂಟ್ರಿ; ಶಿಕ್ಷಣ ಸಚಿವ ಬಿಸಿ ನಾಗೇಶ್

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್
ಮೊಸಳೆ ದಾಳಿ ತಡೆಯಲು ನೀರಿನಲ್ಲಿ ಈಜಿ ಹೊರಟ ಮಂಗಗಳು
ಮೊಸಳೆ ದಾಳಿ ತಡೆಯಲು ನೀರಿನಲ್ಲಿ ಈಜಿ ಹೊರಟ ಮಂಗಗಳು