ಅನುಪಯುಕ್ತ ಬೆಡ್ಶೀಟ್ಗೆ ಬೆಂಕಿ ಹಚ್ಚಿ ಆಸ್ಪತ್ರೆ ವಾರ್ಡ್ ತುಂಬೆಲ್ಲಾ ಹೊಗೆ; ಬ್ರಿಮ್ಸ್ ಸಿಬ್ಬಂದಿ ಎಡವಟ್ಟಿಗೆ ರೋಗಿಗಳು ಹೈರಾಣು
ವಾರ್ಡ್ನಲ್ಲಿದ್ದ 8 ರೋಗಿಗಳು ಬೇರೆ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಬ್ರಿಮ್ಸ್ ಸಿಬ್ಬಂದಿ ಎಡವಟ್ಟಿನಿಂದ ದೊಡ್ಡ ದುರಂತ ತಪ್ಪಿದೆ.
ಬೀದರ್: ಇಲ್ಲಿನ ಬ್ರಿಮ್ಸ್ ಆಸ್ಪತ್ರೆ ಸಿಬ್ಬಂದಿಯ ಎಡವಟ್ಟಿಗೆ ರೋಗಿಗಳು ಹೈರಾಣಾದ ಘಟನೆ ಸಂಭವಿಸಿದೆ. ಅನುಪಯುಕ್ತ ಬೆಡ್ಶೀಟ್ಗಳಿಗೆ ಬೆಂಕಿ ಸಿಬ್ಬಂದಿ ಹಚ್ಚಿದ್ದಾರೆ. ಆಸ್ಪತ್ರೆಯ ಖಾಲಿ ಜಾಗದಲ್ಲಿಟ್ಟು ಬೆಡ್ಶೀಟ್ಗಳಿಗೆ ಬೆಂಕಿ ಕೊಟ್ಟಿದ್ದಾರೆ. ಅದರ ಪರಿಣಾಮ ಬೆಂಕಿಯಿಂದಾಗಿ ದಟ್ಟವಾಗಿ ಹೊಗೆ ಕಾಣಿಸಿಕೊಂಡಿದೆ. ಹೊಗೆಯು ರೋಗಿಗಳಿರುವ ವಾರ್ಡ್ಗೆ ನುಗ್ಗಿದ್ದು ಆಸ್ಪತ್ರೆಯಲ್ಲಿ ಇರುವವರು ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ ಹೊಗೆಯಿಂದಾಗಿ ರೋಗಿಗಳು ಗಲಿಬಿಲಿಗೊಂಡಿದ್ದಾರೆ. ಬಳಿಕ, ವಾರ್ಡ್ನಲ್ಲಿದ್ದ 8 ರೋಗಿಗಳು ಬೇರೆ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಬ್ರಿಮ್ಸ್ ಸಿಬ್ಬಂದಿ ಎಡವಟ್ಟಿನಿಂದ ದೊಡ್ಡ ದುರಂತ ತಪ್ಪಿದೆ.
ಬೆಂಗಳೂರು: ಕಳ್ಳತನವಾಗಿದ್ದ 1.76 ಕೋಟಿ ಹಣ, 188 ಗ್ರಾಂ ಚಿನ್ನ ಜಪ್ತಿ
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರಿಂದ ಕಳ್ಳತನವಾಗಿದ್ದ 1.76 ಕೋಟಿ ಹಣ, 188 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಆರೋಪಿಗಳಾದ ಸುನಿಲ್, ದಿಲೀಪ್ ಬಂಧಿಸಿದ ಪೊಲೀಸರು ಕಳ್ಳತನವಾಗಿದ್ದ ಅಪಾರ ಮೊತ್ತ ಹಾಗೂ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಐದು ತಿಂಗಳ ಹಿಂದೆ ಜೈಲಿಂದ ಹೊರಬಂದ ಕಳ್ಳರಿಂದ ಕೃತ್ಯ ಎಸಗಲಾಗಿತ್ತು. ಮಾರ್ಚ್ 28ರಂದು ಸಂದೀಪ್ ಲಾಲ್ ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು. 2 ಕೋಟಿ ನಗದು, 200 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು ಎಂದು ತಿಳಿದುಬಂದಿದೆ. ಕೋಟ್ಯಂತರ ರೂಪಾಯಿ ಹಣ ವಶಕ್ಕೆ ಪಡೆದ ಪೊಲೀಸರು, ಕಂತೆ ಕಂತೆ ನೋಟುಗಳನ್ನು ಜೋಡಿಸಿ ವಶಪಡಿಸಿಕೊಂಡಿದ್ದಾರೆ.
ವಿಧಾನಸೌಧ ಆವರಣದಲ್ಲಿ ಶಾಸಕರ ಹೆಸರಿನಲ್ಲಿದ್ದ ಕಾರಿಗೆ ದಂಡ
ವಿಧಾನಸೌಧ ಆವರಣದಲ್ಲಿ ಶಾಸಕರ ಹೆಸರಿನಲ್ಲಿದ್ದ ಕಾರಿಗೆ ಆರ್ಟಿಒ ಅಧಿಕಾರಿಗಳು ದಂಡ ನೀಡಿದ ಘಟನೆ ನಡೆದಿದೆ. ಐಷಾರಾಮಿ ಕಾರಿನಲ್ಲಿ ಒಬ್ಬನೇ ಓಡಾಡುತ್ತಿದ್ದ ಚಾಲಕನಿಗೆ ಆರ್ಟಿಒ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಮಾಜಿ ಡೆಪ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿ ಹೆಸರಿನಲ್ಲಿರುವ ಕಾರು, ನಂಬರ್ ಪ್ಲೇಟ್ ಮೇಲೆ ಚಿಂತಾಮಣಿ ಶಾಸಕರು ಎಂದು ಬರಹ ಬರೆದಿತ್ತು. ನಂಬರ್ ಪ್ಲೇಟ್ ಡಿಫೆಕ್ಟ್ ಎಂದು ಕಾರು ಚಾಲಕನಿಗೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ದಾವಣಗೆರೆ: ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಬೇಡ ಜಂಗಮ ಎಂದು ನಮೂದು; ತನಿಖೆಗೆ ಆದೇಶ
ಇದನ್ನೂ ಓದಿ: ತುಮಕೂರು: ತಾಯಿ, ಮಗಳನ್ನು ಕೊಂದಿದ್ದ ಹಂತಕನಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಿದ ಸೆಷನ್ಸ್ ಕೋರ್ಟ್
Published On - 11:55 am, Thu, 7 April 22