ಬೆಂಗಳೂರು: ಬಿಜೆಪಿ ಸರ್ಕಾರದ ಸಚಿವರ ವರ್ತನೆ ಜನಸಾಮಾನ್ಯರ ವಲಯದಲ್ಲಿ ಯಾವ ರೀತಿ ಇದೆ ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್. ಜನರು ಟ್ರಾಫಿಕ್ನಲ್ಲಿ ಕಾಯ್ತಿದ್ರು ಸಚಿವ ಸೋಮಣ್ಣ ಅವರಿಗಾಗಿ ಒನ್ವೇ ನಲ್ಲಿ ಸಂಚರಿಸೋಕೆ ಟ್ರಾಫಿಕ್ ಪೊಲೀಸರೇ ಅನುವು ಮಾಡಿಕೊಟ್ಟಿದ್ದಾರೆ.
ನಗರದ ಫ್ರೀಡ್ಂ ಪಾರ್ಕ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಆಗಮಿಸುವ ಹಿನ್ನೆಲೆ ಸುಮಾರು 10 ನಿಮಿಷಗಳ ಕಾಲ ವಾಹನ ಸಂಚಾರ ಬಂದ್ ಮಾಡಿದ ಘಟನೆ ನಡೆದಿದೆ. ಸುಮಾರು 10 ನಿಮಿಷಗಳ ಕಾಲ ರಸ್ತೆಯಲ್ಲಿ ನಿಂತಲ್ಲೇ ನಿಂತು ಸವಾರರು ಪರದಾಡಿದ್ದಾರೆ.
ಸಚಿವ ವಿ.ಸೋಮಣ್ಣ ಬರುತ್ತಾರೆಂದು ಸುಮಾರು 10 ನಿಮಿಷಗಳ ಕಾಲ ವಾಹನ ಸಂಚಾರ ಬಂದ್ ಮಾಡಿದ್ದಾರೆ. K.R.ಸರ್ಕಲ್‌ನಿಂದ ಆನಂದರಾವ್ ಸರ್ಕಲ್‌ವರೆಗೆ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಸಚಿವ ಸೋಮಣ್ಣ ಕಾರ್ ಒನ್ ವೇ ನಲ್ಲಿ ಬಂದ ಮೇಲೆ ಬೇರೆ ವಾಹನಗಳಿಗೆ ಓಡಾಡಲು ಟ್ರಾಫಿಕ್ ಪೊಲೀಸ್ರು ಅವಕಾಶ ನೀಡಿದ್ರು.