ರಕ್ತಚಂದನ ಕಳ್ಳ ಸಾಗಾಣಿಕೆಗೆ ಕಸ್ಟಮ್ಸ್ ಅಧಿಕಾರಿಗಳ ಸಹಕಾರ; ಐವರ ವಿರುದ್ಧ ಎಫ್ಐಆರ್ ದಾಖಲು
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂನ್ ಮತ್ತು ಜುಲೈನಲ್ಲಿ ವಿದೇಶಗಳಿಗೆ ರಕ್ತಚಂದನ ಸಾಗಾಣಿಕೆ ಮಾಡಲಾಗಿತ್ತು. ಜುಲೈ 29 ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳಿಂದ ಕೆಐಎಬಿ ಏರ್ ಕಾರ್ಗೋ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆದಿತ್ತು.
ಬೆಂಗಳೂರು: ರಕ್ತಚಂದನ ಕಳ್ಳ ಸಾಗಾಣಿಕೆಗೆ ಕಸ್ಟಮ್ಸ್ ಅಧಿಕಾರಿಗಳು ಸಹಕಾರ ನೀಡಿದ ಹಿನ್ನೆಲೆ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ಘಟಕ ಎಫ್ಐಆರ್ ದಾಖಲಿಸಿದೆ. ಕಸ್ಟಮ್ಸ್ ಅಧಿಕಾರಿಗಳ ನೆರವಿನಲ್ಲಿ ಕೆಂಪೇಗೌಡ ಅಂತರರಾಷ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಗಳಿಗೆ ಕಳ್ಳಸಾಗಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂನ್ ಮತ್ತು ಜುಲೈನಲ್ಲಿ ವಿದೇಶಗಳಿಗೆ ರಕ್ತಚಂದನ ಸಾಗಾಣಿಕೆ ಮಾಡಲಾಗಿತ್ತು. ಜುಲೈ 29 ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳಿಂದ ಕೆಐಎಬಿ ಏರ್ ಕಾರ್ಗೋ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆದಿತ್ತು. ಈ ವೇಳೆ ಕಂದಾಯ ಜಾರಿ ನಿರ್ದೆಶನಾಲಯ 3,293 ಕೆಜಿ ತೂಕದ ರಕ್ತಚಂದನವನ್ನ ವಶಪಡಿಸಿಕೊಂಡಿತ್ತು. ಈ ವೇಳೆ ಡಿಜಿಎಪ್ಟಿ ಪರವಾನಿಗೆ ಸೂಕ್ತ ದಾಖಲೆಗಳಿಲ್ಲದೆ ಕಳ್ಳ ಸಾಗಾಣಿಕೆ ಬಹಿರಂಗವಾಗಿದೆ. ಈ ಬಗ್ಗೆ ಪತ್ತೆ ಹಚ್ಚಿ ಸಿಬಿಐ ಭ್ರಷ್ಟಾಚಾರ ಘಟಕಕ್ಕೆ ಕಂದಾಯ ಗುಪ್ತಚರ ಇಲಾಖೆ ದೂರು ನೀಡಿದೆ. ದೂರು ದಾಖಲಿಸಿಕೊಂಡ ಸಿಬಿಐ ಎಸಿಬಿಯಿಂದ ತನಿಖೆ ನಡೆಸಿದಾಗ ಕಸ್ಟಮ್ಸ್ ಅಧಿಕಾರಿಗಳ ಶಾಮೀಲು ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನಲೆ ವಿಮಾನ ನಿಲ್ದಾಣದ ಏರ್ ಕಾರ್ಗೊ ಕಾಂಪ್ಲೆಕ್ಸ್ ನಲ್ಲಿ ಕರ್ತವ್ಯ ಮಾಡ್ತಿದ್ದ ಕಸ್ಟಮ್ಸ್ ಅಧಿಕಾರಿಗಳ ವಿಚಾರಣೆ ನಡೆಸಿದ್ದು ವಿಚಾರಣೆಯ ವೇಳೆ ಕಸ್ಟಮ್ಸ್ ಅಧಿಕಾರಿಗಳು ಶಾಮೀಲಾಗಿ ಹಣ ಪಡೆದಿರುವ ಬಗ್ಗೆ ಬಹಿರಂಗವಾಗಿದೆ.
ಲಕ್ಷಾಂತರ ರೂಪಾಯಿ ಹಣ ಪಡೆದು ರಕ್ತ ಚಂದನವನ್ನ ಸಾಗಾಣಿಕೆ ಮಾಡಲು ಕಸ್ಟಮ್ಸ್ ನೆರವು ಮಾಡಿರುವುದು ಬೆಳಕಿಗೆ ಬಂದಿದೆ. ಎಫ್ಐಆರ್ ದಾಖಲು ಮಾಡಿಕೊಂಡಿರೋ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಮುಂದುವರೆಸಿದೆ. ಕಸ್ಟಮ್ಸ್ನ ಇಬ್ಬರು ಸೂಪರಿಂಟೆಂಡ್ಗಳು, ಒಬ್ಬ ಇನ್ಸ್ಪೆಕ್ಟರ್ ಮತ್ತು ಕಳ್ಳಸಾಗಣೆ ಜಾಲದ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Bihar: ಬೆಂಕಿಯಿಂದ ಹೊತ್ತಿ ಉರಿದ ಮನೆ; 5 ಮಕ್ಕಳು ಸಜೀವ ದಹನ, ಪ್ರತಿ ವಸ್ತುವೂ ಸುಟ್ಟು ಭಸ್ಮ