ಫೆಬ್ರವರಿ 19 ರಂದು ಟ್ವೀಟರ್​ನಲ್ಲಿ ಲೈವ್ ಬರಲಿದ್ದಾರೆ ಪೊಲೀಸ್ ಆಯುಕ್ತ ಕಮಲ್ ಪಂತ್

| Updated By: preethi shettigar

Updated on: Feb 18, 2022 | 12:29 PM

ನಾನು ಈ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಟ್ವೀಟರ್​ನಲ್ಲಿ ಲೈವ್ ಬರುತ್ತೇನೆ ಎಂದು  #AskCPBlr ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸ್ವತಃ ಕಮಲ್​ ಪಂತ್​ ಅವರು ಟ್ವೀಟ್​ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಫೆಬ್ರವರಿ 19 ರಂದು ಟ್ವೀಟರ್​ನಲ್ಲಿ ಲೈವ್ ಬರಲಿದ್ದಾರೆ ಪೊಲೀಸ್ ಆಯುಕ್ತ ಕಮಲ್ ಪಂತ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
Follow us on

ಬೆಂಗಳೂರು: ಫೆಬ್ರವರಿ 19 ರಂದು ಟ್ವೀಟರ್​ನಲ್ಲಿ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾದ ಕಮಲ್​ ಪಂತ್(kamal pant)​ ಲೈವ್​ ಬರಲಿದ್ದಾರೆ. ಈ ಕುರಿತು ಸ್ವತಃ ಕಮಲ್​ ಪಂತ್​ ಅವರು ಟ್ವೀಟ್​(Tweet) ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ನಾನು ಈ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಟ್ವೀಟರ್​ನಲ್ಲಿ ಲೈವ್(Live) ಬರುತ್ತೇನೆ ಎಂದು  #AskCPBlr ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್​ ಮಾಡಿದ್ದಾರೆ.

ಸಾರ್ವಜನಿಕರ ಕುಂದುಕೊರತೆಗಳನ್ನು, ಅಹವಾಲುಗಳನ್ನು, ಆಲೋಚನೆಗಳು ಮತ್ತು ಸಲಹೆಗಳನ್ನು ಪೊಲೀಸ್​ ಆಯಕ್ತರೊಂದಿಗೆ ಹಂಚಿಕೊಳ್ಳಲು ಟ್ವೀಟರ್​ ಅವಕಾಶ ಮಾಡಿಕೊಟ್ಟಿದೆ. ಇದನ್ನು ತಮ್ಮ ಟ್ವೀಟರ್​ ಖಾತೆಯಲ್ಲಿ ಸತಃ ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾದ ಕಮಲ್​ ಪಂತ್, ಫೆಬ್ರವರಿ 19 ರಂದು ಭೇಟಿಯಾಗೋಣ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್​ ಮಾಡಿದ್ದಾರೆ.

ನೀವು ಕೂಡ ನಿಮ್ಮ ಗೊಂದಲ ಅಥವಾ ಸಾರ್ವಜನಿಕ ವಲಯಗಳಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿದ್ದರೆ, ಬೆಂಗಳೂರು ನಗರ ಪೊಲೀಸ್​ ಆಯುಕ್ತರನ್ನು ಟ್ವಿಟರ್​ ಲೈವ್​ ಸೇಶನ್​ನಲ್ಲಿ ಸಂಪರ್ಕಿಸಬಹುದು.

ಇದನ್ನೂ ಓದಿ:
ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವ ಬದಲು ದತ್ತು ತೆಗೆದುಕೊಳ್ಳಿ: ವಿವಾದಕ್ಕೆ ಕಾರಣವಾದ ಬಾಂಗ್ಲಾ ಲೇಖಕಿ ತಸ್ಲೀಮಾ ಟ್ವೀಟ್​

ಕರ್ನಾಟಕದ ಹಿಜಾಬ್​ ವಿವಾದಕ್ಕೆ ಪಾಕಿಸ್ತಾನಿ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್​​ ಪ್ರತಿಕ್ರಿಯೆ; ಭಯಾನಕ ಎಂದು ಟ್ವೀಟ್

Published On - 12:14 pm, Fri, 18 February 22