Crime News: ಲಾಂಗ್ ಬೀಸಿದ ರೌಡಿಯ ಮೇಲೆ ಗುಂಡು ಹಾರಿಸಿದ ಪೊಲೀಸರು, ಟೆಸ್ಟ್​ ಡ್ರೈವ್ ನೆಪದಲ್ಲಿ ಬೈಕ್ ಕದಿಯುತ್ತಿದ್ದ ಕಳ್ಳರ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 25, 2022 | 11:22 AM

ಪೊಲೀಸರ ಮೇಲೆ ಆರೋಪಿಯೂ ಲಾಂಗ್ ಬೀಸಲು ಮುಂದಾದ ಹಿನ್ನೆಲೆಯಲ್ಲಿ ಅವನ ಕಾಲಿಗೆ ಗುಂಡು ಹಾರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

Crime News: ಲಾಂಗ್ ಬೀಸಿದ ರೌಡಿಯ ಮೇಲೆ ಗುಂಡು ಹಾರಿಸಿದ ಪೊಲೀಸರು, ಟೆಸ್ಟ್​ ಡ್ರೈವ್ ನೆಪದಲ್ಲಿ ಬೈಕ್ ಕದಿಯುತ್ತಿದ್ದ ಕಳ್ಳರ ಬಂಧನ
ಬೈಕ್ ಕಳ್ಳರಾದ ಯಾಸಿನ್ ಬೇಗ್ ಮತ್ತು ಇಮ್ರಾನ್ ಖಾನ್ (ಎಡಚಿತ್ರ).
Follow us on

ಬೆಂಗಳೂರು: ಟೆಸ್ಟ್​ ಡ್ರೈವ್ ನೆಪದಲ್ಲಿ ಬೈಕ್ ಕದಿಯುತ್ತಿದ್ದ ಮೂವರು ಕಳ್ಳರನ್ನು ಯಲಹಂಕ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ₹ 15 ಲಕ್ಷ ಮೌಲ್ಯದ 19 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ. ಯಾಸೀನ್ ಬೇಗ್, ಇಮ್ರಾನ್ ಖಾನ್ ಬಂಧಿತರು. ನಗರದ ವಿವಿಧೆಡೆ ಬೈಕ್ ಹಲವು ತಂತ್ರಗಳನ್ನು ಬಳಸಿ ಬೈಕ್​ಗಳನ್ನು ಕಳವು ಮಾಡುತ್ತಿದ್ದರು. ಓಎಲ್​ಎಕ್ಸ್​ ಆ್ಯಪ್​ ಮೂಲಕ ನೋಂದಾಯಿಸಿಕೊಂಡಿದ್ದರು. ಟೆಸ್ಟ್ ಡ್ರೈವ್ ನೆಪದಲ್ಲಿ ತಾವಿದ್ದಲ್ಲಿಗೆ ಕರೆಸಿಕೊಂಡು ಕಳವು ಮಾಡುತ್ತಿದ್ದರು. ಮೊದಲ ಆ್ಯಪ್​ ಮೂಲಕ ಬುಕ್ ಮಾಡಿ, ಅಂಥ ಬೈಕ್​ಗಳನ್ನೂ ಕಳವು ಮಾಡುತ್ತಿದ್ದರು. ಬೆಂಗಳೂರು ನಗರ ಜಿಲ್ಲೆಯ ಬಾಣಸವಾಡಿ, ಯಶವಂತಪುರ, ಗೊವಿಂದಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಠಾಣೆಗಳಲ್ಲೂ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ರೌಡಿಶೀಟರ್​ ಮೇಲೆ ಪೊಲೀಸರ ಫೈರಿಂಗ್

ಬೆಂಗಳೂರು ಉತ್ತರ ತಾಲ್ಲೂಕಿನ ಮಾದಾವರದ ನವಿಲೆ ಬಡಾವಣೆಯಲ್ಲಿ ರೌಡಿಶೀಟರ್ ರಾಜರಾಜನ್ ಅಲಿಯಾಸ್​ ಸೇಠು ಮೇಲೆ ಮಾದನಾಯಕನಹಳ್ಳಿ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಮೇಲೆ ಆರೋಪಿಯೂ ಲಾಂಗ್ ಬೀಸಲು ಮುಂದಾದ ಹಿನ್ನೆಲೆಯಲ್ಲಿ ಅವನ ಕಾಲಿಗೆ ಗುಂಡು ಹಾರಿಸಲಾಯಿತು. ಈತ ಮಾಚೋಹಳ್ಳಿ ನಟರಾಜ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ. ಈ ವೇಳೆ ಇನ್ಸ್​ಪೆಕ್ಟರ್​​ ಮಂಜುನಾಥ್​ ಆರೋಪಿಯ ಮೇಲೆ ಗುಂಡು ಹಾರಿಸಿದರು. ಘಟನೆಯಲ್ಲಿ ಕಾನ್ಸ್​​ಟೇಬಲ್ ಹಾಜಿ ನಾಮ್​ದಾರ್ ಅವರ ಬಲಗೈಗೆ ಗಾಯವಾಗಿದೆ. ಆರೋಪಿ ರಾಜರಾಜನ್ ಹಾಗೂ ಕಾನ್​ಸ್ಟೆಬಲ್ ನಾಮ್​ದಾರ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು.

ಕಳ್ಳತನದ ಆರೋಪಿಗಳ ಬಂಧನ

ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಮಂಜುನಾತ್ ಆಲಿಯಾಸ್ ಮಂಜ ಎಂಬಾತನನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹ 6.20 ಲಕ್ಷ ಮೌಲ್ಯದ 115 ಗ್ರಾಂಂ‌ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬಂಧನದಿಂದ 15 ಮನೆಗಳ್ಳತನ ಪ್ರಕರಣ ಬೆಳಕಿಗೆ ಬಂದಂತೆ ಆಗಿದೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೂಜಾರಿ ವಿರುದ್ಧ ಅತ್ಯಾಚಾರ ಯತ್ನದ ಆರೋಪ

ದೇವಸ್ಥಾನದ ಪೂಜಾರಿಯೇ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯತ ಕಟ್ಟುವ ನೆಪದಲ್ಲಿ ಬಾಲಕಿಯ ಮೇಲೆ ಆರೋಪಿಯು ಅತ್ಯಾಚಾರಕ್ಕೆ ಯತ್ನಿಸಿದ್ದ.

Published On - 11:22 am, Fri, 25 November 22