ಬೆಂಗಳೂರು: ಅಕ್ರಮವಾಗಿ ಜಿಂಕೆ ಕೊಂಬು ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಾದಯ್ಯ ಮತ್ತು ರಮೇಶ್ ಎಂಬುವವರು ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳಿಂದ 18 ಜಿಂಕೆ ಕೊಂಬುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಬನಶಂಕರಿಯ ಬಸ್ ಸ್ಟಾಪ್ನಲ್ಲಿ ಮಾರಟ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ವನ್ಯ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ಬಂಧಿತರಿಂದ 350 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹಗಲು, ರಾತ್ರಿ ಕಳವು ಮಾಡುತ್ತಿದ್ದರು. ಅರೆಸ್ಟ್ ಮಾಡಿದ ಬಳಿಕ ಒಟ್ಟು ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ.
ಬಸ್ ಹತ್ತುವಾಗ ಮಹಿಳೆ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳವು
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ನಲ್ಲಿ ಬಸ್ ಹತ್ತುವಾಗ ಮಹಿಳೆ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳುವಾಗಿದೆ. ಧಾರವಾಡ ಮೂಲದ ಮಹೇಶ್ವರಿ ಎಂಬ ಮಹೀಲೆಗೆ ಸೇರಿದ ಚಿನ್ನ ಕಳ್ಳತನವಾಗಿದೆ. 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಸಂಬಂಧಿಗಳ ಮನೆಗೆ ಬಂದು ವಾಪಸ್ ಊರಿಗೆ ತೆರಳುವಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ
ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕವನ್ನು ಉದ್ಘಾಟಿಸಲು ಲೇಹ್‌ಗೆ ಆಗಮಿಸಿದ ರಾಜನಾಥ್ ಸಿಂಗ್
ಕೃತಿ ಶೆಟ್ಟಿ ಬೆಂಬಲಕ್ಕೆ ನಿಂತ ನಾಗ ಚೈತನ್ಯ; ಹೊಸ ಲುಕ್ ನೋಡಿ ಫ್ಯಾನ್ಸ್ ಫಿದಾ
Published On - 4:47 pm, Thu, 18 November 21