ಅಗ್ನಿ ಶಾಮಕ ದಳದ ಸಿಬ್ಬಂದಿ ಜೀವಕ್ಕೆ ಬೆಲೆಯೇ ಇಲ್ವಾ? ಚಿಕಿತ್ಸೆಗೆ ಬಂದ ಸಿಬ್ಬಂದಿಯ ಸರ್ಕಾರದ ವಿಮೆ ತಿರಸ್ಕರಿಸಿದ ಸೇಂಟ್ ಜಾನ್ಸ್ ಆಸ್ಪತ್ರೆ
ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲು ಅಗ್ನಿಶಾಮಕ ದಳ ಅಧಿಕಾರಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಸರ್ಕಾರದ ಆರೋಗ್ಯ ವಿಮೆ ಅಡಿ ಚಿಕಿತ್ಸೆ ನೀಡಲು ಅಧಿಕಾರಿಗಳು ಆಸ್ಪತ್ರೆ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಆದ್ರೆ ಅಗ್ನಿ ಶಾಮಕ ದಳದ ಸಿಬ್ಬಂದಿ ಮನವಿಯನ್ನು ಆಸ್ಪತ್ರೆ ತಿರಸ್ಕರಿಸಿದ್ದು ಹಣ ಕಟ್ಟಿದ್ರೆ ಮಾತ್ರ ಚಿಕಿತ್ಸೆ ಕೊಡುವುದಾಗಿ ತಕರಾರು ಮಾಡಿದೆ.
ಬೆಂಗಳೂರು: ಎಷ್ಟೊತ್ತಲ್ಲಾದರೂ ಆಗಲಿ, ಎಲ್ಲೇ ಆಗಲಿ.. ಬೆಂಕಿ ಬಿದ್ದಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ಉಳಿಸಲು ಬೆಂಕಿ ಹಾರಿಸಲು ಧಾವಿಸುವ ಅಗ್ನಿ ಶಾಮಕ ದಳದ ಸಿಬ್ಬಂದಿ ಜೀವಕ್ಕೆ ಬೆಲೆಯೇ ಇಲ್ವಾ? ಜನರ ಜೀವ ಉಳಿಸಲು ತಮ್ಮ ಜೀವ ಪಣಕ್ಕಿಡುವ ಸಿಬ್ಬಂದಿಗೆ ಈ ರೀತಿ ಮಾಡುವುದಾ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸರ್ಕಾರದ ಆರೋಗ್ಯ ವಿಮೆ ತಿರಸ್ಕಾರ ಮಾಡಲಾಗಿದೆ.
ನವೆಂಬರ್ 17ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಗೊಂಡಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲು ಅಗ್ನಿಶಾಮಕ ದಳ ಅಧಿಕಾರಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಸರ್ಕಾರದ ಆರೋಗ್ಯ ವಿಮೆ ಅಡಿ ಚಿಕಿತ್ಸೆ ನೀಡಲು ಅಧಿಕಾರಿಗಳು ಆಸ್ಪತ್ರೆ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಆದ್ರೆ ಅಗ್ನಿ ಶಾಮಕ ದಳದ ಸಿಬ್ಬಂದಿ ಮನವಿಯನ್ನು ಆಸ್ಪತ್ರೆ ತಿರಸ್ಕರಿಸಿದ್ದು ಹಣ ಕಟ್ಟಿದ್ರೆ ಮಾತ್ರ ಚಿಕಿತ್ಸೆ ಕೊಡುವುದಾಗಿ ತಕರಾರು ಮಾಡಿದೆ.
ನಂತರ ಅಗ್ನಿ ಶಾಮಕ ದಳದ ಅಧಿಕಾರಿಗಳಿಂದ MOU ಮಾಡಲಾಗಿದೆ. ಚಿಕಿತ್ಸೆ ವೆಚ್ಚ ಭರಿಸುವ ಒಪ್ಪಂದ ಪತ್ರ ಬರೆದುಕೊಡುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದು ಈಗಾಗಲೇ 25 ಸಾವಿರ ರೂಪಾಯಿ ಕೈಯಿಂದ ಕಟ್ಟಿದ್ದಾರೆ. ಸರ್ಕಾರದ ವಿಮೆಗೆ ಮೂರು ಕಾಸಿನ ಬೆಲೆ ಇಲ್ಲದಂತಾಗಿದೆ.
ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಎಲ್ಲೇ ಬೆಂಕಿ ಬಿದ್ದರು ಅದನ್ನು ಹಾರಿಸಲು ಬೆಂಕಿ ಜೊತೆ ಗುದ್ದಾಡುವ ಸಿಬ್ಬಂದಿಗೆ ಸರ್ಕಾರದ ವಿಮೆ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಸರ್ಕಾರ ವಿಮೆ ಹಣ ಪಾವತಿಸದ ಹಿನ್ನೆಲೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಯಲ್ಲಿ ಹಿಂದೇಟು ಹಾಕಲಾಗುತ್ತಿದೆ. ಹೀಗಾದರೆ ಸಿಬ್ಬಂದಿ ಜೀವಕ್ಕೆ ಭದ್ರತೆಯೇ ಇಲ್ಲದಂತಾಗುತ್ತೆ.
ಇದನ್ನೂ ಓದಿ: Chemical Castration: ಪಾಕಿಸ್ತಾನದಲ್ಲಿ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಷನ್ ಶಿಕ್ಷೆ ನೀಡಲು ಒಪ್ಪಿಗೆ