ಬೆಂಗಳೂರು (ಡಿಸೆಂಬರ್.18): ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವೆಡೆ ನಾಳೆ ನಾಡಿದ್ದು ಅಂದರೆ ಡಿಸೆಂಬರ್ 19, 20ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 4 ರವರೆಗೆ ಮತ್ತು ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ವಿದ್ಯುತ್ ಇರುವುದಿಲ್ಲ. ಹೀಗಾಗಿ ಈ ಏರಿಯಾಗಳಲ್ಲಿನ ಜನರು ತಮ್ಮ ದಿನನಿತ್ಯದ ಕಾರ್ಯಗಳನ್ನು ಬೆಳಗ್ಗೆ 10 ಗಂಟೆಯೊಳಗೆ ಮುಗಿಸಿಕೊಳ್ಳಬೇಕಿ. ಹಾಗಾದ್ರೆ, ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
66/11 kV ಮಾನ್ಯತಾ ಉಪಕೇಂದ್ರದಿಂದ 66/11 kV ಶೋಭಾ ಸಿಟಿ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ 19.12.2024 (ಗುರುವಾರ) ರಂದು ಬೆಳಗ್ಗೆ 08:00 ರಿಂದ ಮಧ್ಯಾಹ್ನ 06:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಇದನ್ನೂ ಓದಿ: ವಾಹನ ಮಾಲೀಕರಿಗೆ ಬಿಗ್ ರಿಲೀಫ್: ಹೆಚ್ಎಸ್ಆರ್ಪಿ ಅಳವಡಿಸದ ವಾಹನ ಮಾಲೀಕರ ಮೇಲೆ ಸದ್ಯಕ್ಕಿಲ್ಲ ಕ್ರಮ
ನಾಳೆ (ಡಿಸೆಂಬರ್ 19) ಬೆಳಗ್ಗೆ 10 ರಿಂದ ಮಧ್ಯಾಹ್ನ 4ಗಂಟೆವರೆಗೆ ಎ.ಕೆ.ಅಶ್ರಮ ರಸ್ತೆ, ದೇವೆಗೌಡ ರಸ್ತೆ, ಆರ್.ಟಿ.ನಗರ ೧ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಿಟರಿ ಏರೀಯ, ವೀರಣ್ಣಪಾಳ್ಯ, ಲುಂಬಿನಿ ಗಾರ್ಡನ್, ಬಿ.ಡಬ್ಲ್ಯೂ.ಎಸ್.ಎಸ್.ಬಿ ಸೆವೇಜ್ ಪ್ಲಾಟ್, ಮರಿಯಣ್ಣಪಾಳ್ಯ, ಕಾಫೀ ಬೋರ್ಡ್ ಲೇಔಟ್ ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್ ಭುವನೇಶ್ವರಿನಗರ, ಬಿ.ಇ.ಎಲ್. ಕಾರ್ಪೋರೇಟ್ ಆಫೀಸ್ ಚಾಣಕ್ಯ ಲೇಔಟ್ ನಾಗವಾರ, ಎಂ.ಎಸ್. ರಾಮಯ್ಯ ಉತ್ತರ ಸಿಟಿ, ಥಣಿಸಂದ್ರ ಮುಖ್ಯ ರಸ್ತೆ, ಆಶಿರ್ವಾದ್ ನಗರ, ಅಮರಜ್ಯೋತಿ ಲೇಔಟ್ ರಾಚೇನಹಳ್ಳಿ ಮುಖ್ಯ ರಸ್ತೆ, ಮೇಸ್ತ್ರಿ ಪಾಳ್ಯ, ರಾಯಲ್ ಎನ್‌ಕ್ಲೇವ್, ಶ್ರೀರಾಂಪುರ ವಿಲೇಜ್, ವಿ.ಹೆಚ್.ಬಿ.ಸಿ.ಎಸ್ ಲೇಔಟ್ ವೀರಣ್ಣಪಾಳ್ಯ, ಜೋಜಪ್ಪ ಲೇಔಟ್, 17 ನೇ ಕ್ರಾಸ್, ಗೋವಿಂದಪುರ, ವೀರಣ್ಣಪಾಳ್ಯ ಮುಖ್ಯ ರಸ್ತೆ, ಬೈರಪ್ಪ ಲೇಔಟ್ ಮತ್ತು ಸುತ್ತಲಿನ ಪ್ರದೇಶಗಳು ಇದರಲ್ಲಿ ಇರಲಿವೆ.
66/11 kV ರಾಜನಕುಂಟೆ ಸಬ್‌ಸ್ಟೇಷನ್ ನ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಡಿಸೆಂಬರ್ 20ರಂದು ಯಾವೆಲ್ಲಾ ಕಡೆ ಕರೆಂಟ್ ಇರಲ್ಲ.
ಶುಕ್ರವಾರ 20.12.2024 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 04:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್‌ಪುರ, ಅರ್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ. ಸೆಂಚುರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ