ಬೆಂಗಳೂರು, ಜನವರಿ 17: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಬಹಳ ಮಹತ್ವವಾದದು. ವಿದ್ಯಾರ್ಥಿಗಳು ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತಾರೆ. ವಿದ್ಯಾರ್ಥಿಗಳು ಸರಿಯಾದ ಮಾರ್ಗವನ್ನು ಅನುಸರಿಸಬೇಕು. ಕುಟುಂಬಕ್ಕೆ ಮತ್ತು ಸಮಾಜಕ್ಕೆ ಆಸ್ತಿಯಾಗುವುದರ ಜೊತೆಗೆ ಉತ್ತಮ ನಾಗರಿಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ವಿಧಾನಸಭೆ ಸಭಾಧ್ಯಕ್ಷ ಯುಟಿ ಖಾದರ್ (UT Khadhar) ಸಲಹೆ ನೀಡಿದರು. ಬೆಂಗಳೂರಿನ ಕೋಗಿಲುನಲ್ಲಿರುವ ಪ್ರೆಸಿಡೆನ್ಸಿ ಪಿಯು ಕಾಲೇಜಿನ ಬೀಳ್ಕೊಡುಗೆ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಲ್ಮಾನ್ ಅಹಮದ್, ತಮ್ಮ ಮಕ್ಕಳ ಶಿಕ್ಷಣದೊಂದಿಗೆ ಪ್ರೆಸಿಡೆನ್ಸಿ ಪಿಯು ಕಾಲೇಜಿನಲ್ಲಿ ವಿಶ್ವಾಸವಿಟ್ಟ ಪೋಷಕರಿಗೆ ವಿಶೇಷವಾಗಿ ಕೃತಜ್ಞತೆ. ಸಂಸ್ಥೆಯಿಂದ ಉತ್ತೀರ್ಣರಾದ ನಂತರವೂ ಈ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಈ ಸನ್ಮಾನ ಸಮಾರಂಭವು ಆಡಳಿತ ಮಂಡಳಿಗೆ ಭಾವನಾತ್ಮಕ ಕ್ಷಣ ಎಂದು ಹೇಳಿದರು.
ಈ ಸಮಾರಂಭದಲ್ಲಿ ಪ್ರೆಸಿಡೆನ್ಸಿ ಫೌಂಡೇಶನ್ನ ಅಧ್ಯಕ್ಷೆ ಕೌಸರ್ ನಿಸ್ಸಾರ್ ಅಹಮದ್ ಅವರು ಕಳೆದ ಶೈಕ್ಷಣಿಕ ವರ್ಷದ ರಾಜ್ಯಕ್ಕೆ ರ್ಯಾಂಕ್ ಪಡೆದವರನ್ನು ಮತ್ತು ಈ ವರ್ಷದ ಕ್ರೀಡಾ ಚಾಂಪಿಯನ್‌ಗಳನ್ನು ಸನ್ಮಾನಿಸಿದರು. ಇದೇ ವೇಳೆ, ಡಾ. ನಿಸ್ಸಾರ್ ಅಹಮದ್ ನೇತೃತ್ವದ ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಗಳನ್ನು ಮುನ್ನಡೆಸುತ್ತಿರುವ ಉಪಾಧ್ಯಕ್ಷ ಸಲ್ಮಾನ್ ಅಹ್ಮದ್ ಅವರನ್ನು ಅಭಿನಂದಿಸಲಾಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ