Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನಲ್ಲಿ ಇಂತಹ ಕಹಿ ಅನುಭವ ಹಿಂದೆಂದೂ ಆಗಿರಲಿಲ್ಲ; ಅಪರಿಚಿತ ವ್ಯಕ್ತಿಯ ನಡೆಗೆ ಬೆಚ್ಚಿ ಬಿದ್ದ ಯುವತಿ

ಪುಂಡ ಯುವಕರು ಒಬ್ಬಂಟಿ ಮಹಿಳೆಯರನ್ನು, ಯುವತಿಯರನ್ನು ಹಿಂಬಾಲಿಸುತ್ತಾ ಹೋಗಿ ಕಿರುಕುಳ ನೀಡಿದಂತಹ ಸಾಕಷ್ಟು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಒಬ್ಬಂಟಿ ಯುವತಿಯನ್ನು ಹಿಂಬಾಲಿಸುತ್ತಾ ಹೋಗಿದ್ದಾನೆ. ಬೆಂಗಳೂರಿನಲ್ಲಿ ಇಂತಹ ಕಹಿ ಮತ್ತು ಅಸುರಕ್ಷಿತ ಅನುಭವ ಹಿಂದೆದೂ ಆಗಿರಲಿಲ್ಲ ಎಂದು ಯುವತಿ ಹೇಳಿಕೊಂಡಿದ್ದಾಳೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಬೆಂಗಳೂರಿನಲ್ಲಿ ಇಂತಹ ಕಹಿ ಅನುಭವ ಹಿಂದೆಂದೂ ಆಗಿರಲಿಲ್ಲ; ಅಪರಿಚಿತ ವ್ಯಕ್ತಿಯ ನಡೆಗೆ ಬೆಚ್ಚಿ ಬಿದ್ದ ಯುವತಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 17, 2025 | 11:41 AM

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಡ್‌ನಲ್ಲಿ ಜನ ತಮಗಾದ ಸಿಹಿ ಮತ್ತು ಕಹಿ ಅನುಭವಗಳ ಬಗ್ಗೆ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ತನಗಾದ ಕಹಿ ಅನುಭವದ ಕಥೆಯೊಂದನ್ನು ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಇಂತಹ ಕಹಿ ಮತ್ತು ಅಸುರಕ್ಷಿತ ಅನುಭವ ಹಿಂದೆದೂ ಆಗಿರಲಿಲ್ಲ ಎಂದು ಯುವತಿ ಹೇಳಿಕೊಂಡಿದ್ದಾಳೆ. ಹೌದು ಆಕೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸಿದ್ದು, ಅಪರಿಚಿತನ ಈ ನಡಗೆ ಯುವತಿ ಬೆಚ್ಚಿ ಬಿದ್ದಿದ್ದಾಳೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ. r/bangalore ಹೆಸರಿನ ರೆಡ್ಡಿಡ್‌ ಖಾತೆಯಲ್ಲಿ ಯುವತಿ ತನಗಾಗ ಕಹಿ ಅನುಭವದ ಕಥೆಯನ್ನು ಶೇರ್‌ ಮಾಡಿಕೊಂಡಿದ್ದಾಳೆ.

“ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವಿದು; ಇತ್ತೀಚಿಗೆ ನಾನು ಕೆಲಸ ಮುಗಿಸಿ ಸಂಜೆ ಸುಮಾರು 6 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನನಗೆ ಗೊಂದಲದ ಅನುಭವವಾಯಿತು. ಎಂದಿನಂತೆ ಸೀತಾರಾಮಪಾಳ್ಯ ಮೆಟ್ರೋ ಸ್ಟೇಷನ್‌ನಲ್ಲಿ ಮೆಟ್ರೋಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ಮಾತನಾಡಲು ಶುರು ಮಾಡಿದನು. ನನ್ನು ಕಾರ್ಪೋರೇಟ್‌ ಜಾಕೆಟ್‌ ನೋಡಿ ನೀವು ಈ ನಿರ್ಧಿಷ್ಟ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೀರಾ ಎಂದು ಕೇಳಿದ. ಅಷ್ಟೇ ಅಲ್ಲದೆ ನಾನು ಏನು ಮಾತನಾಡದಿದ್ರೂ ಆತ ಆತನ ಕೆಲಸದ ಬಗ್ಗೆ ಹೇಳಿದ. ನಂತರ ನಾನು ಹತ್ತಿದ ಮೆಟ್ರೋದಲ್ಲಿಯೇ ಆತನೂ ಹತ್ತಿದನು. ನಾನು ಮಹಿಳಾ ಕೋಚ್‌ನಲ್ಲಿ ಇದ್ದ ಕಾರಣ ಆತನಿಗೆ ನನ್ನು ಹತ್ತಿರ ಬರಲು ಸಾಧ್ಯವಾಗಲಿಲ್ಲ. ಆದರೆ ಆ ವ್ಯಕ್ತಿ ನನ್ನನ್ನೇ ಹಿಂಬಾಲಿಸುತ್ತಿದ್ದಾನೆ ಎಂಬುದು ನನಗೆ ಅರಿವಾಯಿತು. ನಾನು ಇಳಿದ ಸ್ಟೇಷನ್‌ನಲ್ಲಿಯೇ ಆತನೂ ಇಳಿದು ಅತ್ತ ಕಡೆ ಹೋದ. ಇದರಿಂದ ಮನಸ್ಸಿಗೆ ನಿರಾಳವಾಯಿತು. ಜೊತೆಗೆ ಇನ್ನು ಯಾವುದೇ ಯಡವಟ್ಟು ಆಗೋದು ಬೇಡ ಅಂತ ಮನೆಗೆ ನಡೆದುಕೊಂಡು ಹೋಗುವ ಬದಲು ಆಟೋ ಹಿಡಿದೆ.

Crazy experience in Bangalore byu/Creative-Truck1119 inbangalore

ಆದ್ರೆ ಆ ಅಪರಿಚಿತ ವ್ಯಕ್ತಿ ಆಟೋದ ಹಿಂದೆ ನನ್ನನ್ನು ಮನೆ ತನಕ ಹಿಬಾಲಿಸುತ್ತಾ ಬಂದಿದ್ದನ್ನು ಕಂಡು ನನಗೆ ಆಘಾತವಾಯಿತು. ಈ ಅನುಭವ ಕಹಿ ಮತ್ತು ಅಸುರಕ್ಷಿತವಾಗಿತ್ತು. ಇದು ನನ್ನ ಮನಸ್ಸಿಗೆ ತೀವ್ರವಾದ ನೋವುಂಟುಮಾಡಿದೆ. ನೀವು ಕೂಡಾ ಯಾರಾದರೂ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದೀರಾ?” ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಲಾಲ್‌ಬಾಗ್‌ ಫ್ಲವರ್‌ ಶೋ: ಫಲಪುಷ್ಪ ಪ್ರದರ್ಶನಕ್ಕೆ ಸ್ಟ್ರಾಂಗ್ ಸೆಂಟ್‌ ಹಾಕೊಂಡು ಬಂದ್ರೆ ಜೇನು ದಾಳಿ ಮಾಡಬಹುದು ಜೋಕೆ!

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜಕ್ಕೂ ಭಯಾನಕವಾಗಿದೆ. ಇನ್ನೊಮ್ಮೆ ಅವನನ್ನು ಕಂಡ್ರೆ ಆದಷ್ಟು ಬೇಗ ಪೊಲೀಸರಿಗೆ ದೂರು ನೀಡಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಷ್ಟೆಲ್ಲಾ ಆದ್ರೂ ನಿವ್ಯಾಕೇ ತಕ್ಷಣ ಪೊಲೀಸರಿಗೆ ಕರೆ ಮಾಡಬಾರದಿತ್ತು?ʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನೀವು ಮಹಿಳಾ ಪೊಲೀಸ್‌ ಸೆಲ್‌ಗೆ ವಿಷಯ ತಿಳಿಸಬೇಕು, ಇದಕ್ಕೆ ವಾಟ್ಸಾಪ್‌ ಅಪ್ಲಿಕೇಷನ್‌ ಕೂಡಾ ಇದೆʼ ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ