ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರು ಇಂದೇ ಹೋಗಿಬಿಡಿ. ನಾಳೆ ಹೋಗುವ ಪ್ಲಾನ್ ಇದ್ದರೆ ದುಪ್ಪಟ್ಟು ಹಣ ಖರ್ಚಾಗೋದು ಪಕ್ಕ. ಹಬ್ಬದ ಲಾಭ ಪಡೆಯಲು ಮುಂದಾದ ಖಾಸಗಿ ಬಸ್ಗಳು ಪ್ರಯಾಣಿಕರ ಬಳಿ ಹೆಚ್ಚಿನ ಟಿಕೆಟ್ ಚಾರ್ಜ್ ಮಾಡಲು ಮುಂದಾಗಿದೆ.
ನಾಳೆಯಿಂದ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರು ಹೆಚ್ಚಿನ ಹಣ ನೀಡಿ ಪ್ರಯಾಣಿಸಬೇಕು. ಊರಿಗೆ ಹೋಗುವವರಿಗೆ ಟಿಕೆಟ್ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇಂದು ಪ್ರಯಾಣ ಮಾಡಿದ್ರೆ ಟಿಕೆಟ್ ದರ ಕಡಿಮೆ ಇರಲಿದ್ದು ನಾಡಿದ್ದು ಊರಿಗೆ ಹೋಗುವವರು ಹೆಚ್ಚಿನ ಹಣ ನೀಡಿ ಟಿಕೆಟ್ ಖರೀದಿಸಬೇಕು.
ಇಂದು 600 ರಿಂದ 750 ರೂಪಾಯಿ ಇದ್ದ ದರ ನಾಳೆ, ನಾಡಿದ್ದು 1000 ರಿಂದ 1300 ರೂಪಾಯಿ ಆಗಲಿದೆ. ಇಂದೇ ಬುಕ್ ಮಾಡಿದ್ರು ಅಷ್ಟೇ ದರ ಕೊಡಬೇಕು. ಹಬ್ಬದ ನೆಪದಲ್ಲಿ ಲಕ್ಷುರಿ ಬಸ್ ಗಳಲ್ಲಿ ದರ ಏರಿಕೆ ಮಾಡಲು ಮುಂದಾಗಿವೆ. ಬೆಂಗಳೂರು to ಮಂಗಳೂರು ನಿನ್ನೆ 600 ರಿಂದ 900 ರೂಪಾಯಿ ಟಿಕೆಟ್ ದರ ಇದ್ರೆ ಅದೇ ಸ್ಥಳಕ್ಕೆ 9 ನೇ ತಾರೀಕು ಪ್ರಯಾಣ ಮಾಡಿದ್ರೆ 1200 ರೂಪಾಯಿ ಟಿಕೆಟ್ ದರವಿರಲಿದೆ.
ಬೆಂಗಳೂರು to ಹುಬ್ಬಳ್ಳಿ ನಿನ್ನೆ ಪ್ರಯಾಣ ಮಾಡಿದ್ರೆ 600 ರಿಂದ 800. 9 ನೇ ತಾರೀಖು ಗುರುವಾರ ಪ್ರಯಾಣ ಮಾಡಿದ್ರೆ 1200 ರೂಪಾಯಿ ಟಿಕೆಟ್ ದರವಿರಲಿದೆ. ಇಂದು ಶಿವಮೊಗ್ಗಕ್ಕೆ ಪ್ರಯಾಣ ಮಾಡಿದ್ರೆ 450 ರಿಂದ 600. 9 ನೇ ತಾರೀಖು ಪ್ರಯಾಣ ಮಾಡಿದ್ರೆ 850 ರಿಂದ 1100 ರೂಪಾಯಿ. ಹೀಗೆ ಕನಿಷ್ಠ 300 ರಿಂದ 500 ರೂಪಾಯಿ ದರ ಏರಿಕೆ ಮಾಡಲಾಗ್ತಿದೆ. ಆದ್ರೆ ಸ್ಟೇಟ್ ಕ್ಯಾರಿಯರ್ ಬಸ್ ಗಳಲ್ಲಿ ದರ ಏರಿಕೆ ಇಲ್ಲ. ಲಕ್ಷುರಿ ಬಸ್ ಗಳಲ್ಲಿ ಹಬ್ಬದ ನೆಪದಲ್ಲಿ ಹೆಚ್ಚುವರಿ ಟಿಕೆಟ್ ದರ ವಸೂಲಿ ಮಾಡಲಾಗುತ್ತಿದೆ.
ನಿನ್ನೆ ಇದ್ದ ದರ ಮತ್ತು ಗುರುವಾರಕ್ಕೆ ಏರಿಕೆಯಾಗಿರುವ ದರದ ಮಾಹಿತಿ
ಬೆಂಗಳೂರು TO ಬೆಳಗಾವಿ 750 ರಿಂದ 850 – 1200 ರಿಂದ 1500 ರುಪಾಯಿ
ಬೆಂಗಳೂರು TO ದಾವಣಗೆರೆ 400 ರಿಂದ 700 – 1000 ರಿಂದ 1300
ಬೆಂಗಳೂರು TO ಬೀದರ್ 700 ರಿಂದ 800 – 1200 ರಿಂದ 1400
ಬೆಂಗಳೂರು TO ಕಲಬುರ್ಗಿ 600 ರಿಂದ 700 – 1100 ರಿಂದ 1300
ಬೆಂಗಳೂರು TO ಹು-ಧಾರವಾಡ 650 ರಿಂದ 800 – 1150 – 1200
ಬೆಂಗಳೂರು TO ವಿಜಯಪುರ 600 ರಿಂದ 700 – 1000 ರಿಂದ 1250
ಬೆಂಗಳೂರು TO ರಾಯಚೂರು 600 ರಿಂದ 800 – 1250
ರಾಜ್ಯದ ವಿವಿಧೆಡೆಗೆ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್‌ಗಳ ವ್ಯವಸ್ಥೆ
ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ(KSRTC) ಕಡೆಯಿಂದ ಸೆಪ್ಟೆಂಬರ್ 8, 9ರಂದು ಬೆಂಗಳೂರಿನಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್‌ಗಳನ್ನು ಬಿಟ್ಟಿದ್ದು 1,000 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸೆಪ್ಟೆಂಬರ್ 12ರಂದು ಬೆಂಗಳೂರಿಗೆ ಆಗಮಿಸುವವರಿಗೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಧರ್ಮಸ್ಥಳ, ಶಿವಮೊಗ್ಗ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಮಂಗಳೂರು, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಸೇರಿ ಹಲವಡೆ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ರಾಮನಗರ: ವಿಶ್ವದ ಅತೀ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ನೋಡಲು ಹರಿದುಬರುತ್ತಿದೆ ಭಕ್ತಸಾಗರ