ಕರ್ನಾಟಕ ಸರ್ಕಾರದ ಶುಲ್ಕ ಆದೇಶಕ್ಕೆ ಖಾಸಗಿ ಶಾಲೆಗಳು ಗರಂ; ಕೋರ್ಟ್ ಮೆಟ್ಟಿಲೇರಲು ನಿರ್ಧಾರ

| Updated By: sandhya thejappa

Updated on: Nov 14, 2021 | 10:17 AM

ಹೆಚ್ಚುವರಿ ಶುಲ್ಕ ಪಡೆದಿದ್ದರೆ ವಾಪಸ್ ಪೋಷಕರಿಗೆ ನೀಡಬೇಕು. ಬೋಧನಾ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ಪಡೆಯುವಂತಿಲ್ಲ. ಶಾಲಾ ಅಭಿವೃದ್ಧಿ ಶುಲ್ಕ, ಐಚ್ಛಿಕ ಶುಲ್ಕ, ಟ್ರಸ್ಟ್ ಹಾಗೂ ಸೊಸೈಟಿಗಳಿಗೆ ಯಾವುದೇ ಶುಲ್ಕ ಸ್ವೀಕರಿಸದಂತೆ ಸರ್ಕಾರ ನಿರ್ಬಂಧ ಹೇರಿದೆ.

ಕರ್ನಾಟಕ ಸರ್ಕಾರದ ಶುಲ್ಕ ಆದೇಶಕ್ಕೆ ಖಾಸಗಿ ಶಾಲೆಗಳು ಗರಂ; ಕೋರ್ಟ್ ಮೆಟ್ಟಿಲೇರಲು ನಿರ್ಧಾರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯ ಸರ್ಕಾರದ ಆದೇಶದಿಂದ ಖಾಸಗಿ ಶಾಲೆಗಳು ಗರಂ ಆಗಿವೆ. ಕೋರ್ಟ್ ಹೇಳಿದ್ದೊಂದು, ಸರ್ಕಾರ ಮಾಡಿದ್ದೊಂದು ಅಂತ ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಸಿಡಿದೆದ್ದಿದೆ. ಅಲ್ಲದೇ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ. 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಶುಲ್ಕ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ವಾರ್ಷಿಕ ಶುಲ್ಕದಲ್ಲಿ ಶೇ.15ರಷ್ಟು ವಿನಾಯತಿ ನೀಡಿ ಆದೇಶ ನೀಡಿದೆ. ಆದರೆ ರಾಜ್ಯ ಸರ್ಕಾರ ಭೋದನಾ ಶುಲ್ಕದಲ್ಲಿ ಮಾತ್ರ ಶೇ.85ರಷ್ಟು ಪಡೆಯಬೇಕು. ಬೇರೆ ಯಾವುದೇ ಶುಲ್ಕ ಪಡಿಯುವಂತಿಲ್ಲ ಅಂತಾ ಆದೇಶ ಮಾಡಿದೆ. ಈ ಆದೇಶಕ್ಕೆ ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಗರಂ ಆಗಿದೆ.

ಹೆಚ್ಚುವರಿ ಶುಲ್ಕ ಪಡೆದಿದ್ದರೆ ವಾಪಸ್ ಪೋಷಕರಿಗೆ ನೀಡಬೇಕು. ಬೋಧನಾ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ಪಡೆಯುವಂತಿಲ್ಲ. ಶಾಲಾ ಅಭಿವೃದ್ಧಿ ಶುಲ್ಕ, ಐಚ್ಛಿಕ ಶುಲ್ಕ, ಟ್ರಸ್ಟ್ ಹಾಗೂ ಸೊಸೈಟಿಗಳಿಗೆ ಯಾವುದೇ ಶುಲ್ಕ ಸ್ವೀಕರಿಸದಂತೆ ಸರ್ಕಾರ ನಿರ್ಬಂಧ ಹೇರಿದೆ. ಈ ಆದೇಶ ಖಾಸಗಿ ಶಾಲೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲೇಖಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರ ಬೋಧನಾ ಶುಲ್ಕದಲ್ಲಿ ಶೇ.85 ಮಾತ್ರ ಪಡೆಯವಂತೆ ಆದೇಶ ಮಾಡಿದೆ. ಈ ಆದೇಶ ಮತ್ತೆ ಪೋಷಕರು ಮತ್ತು ಶಾಲೆಗಳ ನಡುವೆ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಈ ಆದೇಶದಿಂದ ಪೋಷಕರಿಗೆ ಒಟ್ಟಾರೆ 30-40 ರಷ್ಟು ವಿನಾಯತಿ ಸಿಗಲಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ

ರಶ್ಮಿಕಾ ಕೈ ಚರ್ಮದ ಬಣ್ಣ ಚೇಂಜ್​ ಆಗಿದ್ದೇಕೆ? ಪರದೆ ಹಿಂದಿನ ಕಹಾನಿ ಬಿಚ್ಚಿಟ್ಟ ಒಂದು ಫೋಟೋ

Children’s Day 2021: ಮಕ್ಕಳ ದಿನಾಚರಣೆಯ ಇತಿಹಾಸ ಮತ್ತು ಶುಭಕೋರಲು ಕೆಲವು ಸಂದೇಶಗಳು ಇಲ್ಲಿವೆ