
ಬೆಂಗಳೂರು, ಮಾ.07: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವಾ ಹಿರಿತನ ಆಧಾರದ ಮೇರೆಗೆ 20 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಡಿವೈಎಸ್ಪಿ(DYSP) ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.
ಇನ್ನು ಜನವರಿ 04 ರಂದು 371(ಜೆ) ಅಡಿ ಖಾಲಿ ಹುದ್ದೆಗಳ ಮುಂಬಡ್ತಿ ಪ್ರಕ್ರಿಯೆ ಆರಂಭಿಸಲು ಸಚಿವ ಸಂಪುಟ ಉಪ ಸಮಿತಿ ಸೂಚನೆ ನೀಡಿತ್ತು. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (ಜೆ) ಅಡಿ 46 ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದೆ ಬಾಕಿ ಇರುವ ಒಟ್ಟು 14,771 ಹುದ್ದೆಗಳ ನೇಮಕಾತಿ ಹಾಗೂ ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇಕಡ 8ರಷ್ಟು ಮೀಸಲಾತಿಯಂತೆ ಮುಂಬಡ್ತಿ ನೀಡಬೇಕಾದ 8,278 ಹುದ್ದೆಗಳನ್ನು, ಬಡ್ತಿ ಮೂಲಕ ತುಂಬಿಸಲು ತಕ್ಷಣ ಪ್ರಕ್ರಿಯೆ ಆರಂಭಿಸಲು ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಸೂಚಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ