ಸರ್ಕಾರಿ, ಖಾಸಗಿ ಶಾಲೆಗಳಿಗೂ ಉಚಿತ ವಿದ್ಯುತ್ ನೀಡಿ; ಸರ್ಕಾರದ ಮುಂದೆ ಮತ್ತೊಂದು ಸವಾಲ್

| Updated By: ಆಯೇಷಾ ಬಾನು

Updated on: Jul 10, 2023 | 3:28 PM

ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಹೊಸ ಮನವಿಯನ್ನ ಸರ್ಕಾರಕ್ಕೆ ಮಾಡಿದ್ದಾರೆ. ಸರ್ಕಾರ ಶಾಲೆಗಳಿಗೆ ನೀಡುವ ಅಭಿವೃದ್ಧಿ ನಿರ್ವಹಣೆಯ ಅನುದಾನ ಯಾವುದಕ್ಕೂ ಸಾಕಾಗೋದಿಲ್ಲ. ಹೀಗಾಗಿ ಗೃಹ ಜ್ಯೊತಿ ಯೋಜನೆಯನ್ನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೂ ವಿಸ್ತರಿಸುವಂತೆ ಡಿಮ್ಯಾಂಡ್ ಮಾಡಿವೆ.

ಸರ್ಕಾರಿ, ಖಾಸಗಿ ಶಾಲೆಗಳಿಗೂ ಉಚಿತ ವಿದ್ಯುತ್ ನೀಡಿ; ಸರ್ಕಾರದ ಮುಂದೆ ಮತ್ತೊಂದು ಸವಾಲ್
ಬಿಬಿಎಂಪಿ ಮಾಜಿ ಸದಸ್ಯ ಎನ್ ನಾಗರಾಜ್
Follow us on

ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯನ್ನು(Gruha Jyothi Scheme) ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಗೃಹಜ್ಯೋತಿಗೆ ಈಗಾಗಲೇ ಸುಮಾರು ಕೋಟ್ಯಾಂತರ ಜನರು ಅರ್ಜಿ ಸಲ್ಲಿಕೆ ಕೂಡಾ ಮಾಡಿದ್ದಾರೆ. ಅಗಸ್ಟ್ ನಿಂದ ಜನರಿಗ ಉಚಿತ ಕರೆಂಟ್ ಉಚಿತ ಭಾಗ್ಯವೂ ಸಿಗಲಿದೆ. ಆದ್ರೆ ಸರ್ಕಾರದ(Congress Government) ಉಚಿತ ವಿದ್ಯುತ್ ಗ್ಯಾರಂಟಿ ಭಾಗ್ಯ ಈಗ ಸರ್ಕಾರಕ್ಕೆ ಹೊಸ ಟೆನ್ಷನ್ ತಂದಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಉಚಿತ ಕರೆಂಟ್ ಹಾಗೂ ವಾಟರ್ ನೀಡುವಂತೆ ಡಿಮ್ಯಾಂಡ್ ಮಾಡಲಾಗುತ್ತಿದೆ.

ಸರ್ಕಾರಕ್ಕೆ ಉಚಿತ ಗ್ಯಾರಂಟಿ ಭಾಗ್ಯಗಳು ಈಗ ಹೊಸ ತಲೆ ಬಿಸಿ ತಂದಿಟ್ಟಿದೆ, ಸರ್ಕಾರಿ ಅನುದಾನಿ ಹಾಗೂ ಖಾಸಗಿ ಶಾಲೆಗಳು ಸರ್ಕಾರಕ್ಕೆ ಹೊಸ ಡಿಮ್ಯಾಂಡ್ ಶುರು ಮಾಡಿವೆ. ಮನೆಗಳಿಗೆ ಸರ್ಕಾರ ಉಚಿತವಾಗಿ 200 ಯೂನಿಟ್ ವಿದ್ಯುತ್ ಯೋಜನೆ ನೀಡಿದೆ. ಈ ಯೋಜನೆಯನ್ನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೂ ನೀಡುವಂತೆ ಹೊಸ ಡಿಮ್ಯಾಂಡ್ ಕೇಳಿಬರುತ್ತಿದೆ.

ಶಾಲೆಗಳಿಗೂ ಉಚಿತ ವಿದ್ಯುತ್ ಭಾಗ್ಯ ನೀಡುವಂತೆ ಡಿಮ್ಯಾಂಡ್

ಸರ್ಕಾರ ಮನೆ ಮನೆಗಳಿಗೂ 200 ಯೂನಿಟ್ ಉಚಿತ ವಿದ್ಯುತ್ ಭಾಗ್ಯ ಘೋಷಣೆ ಮಾಡಿದೆ. ಇದರ ಲಾಭವನ್ನ ರಾಜ್ಯದ ಕೋಟ್ಯಾಂತರ ಜನರು ಪಡೆಯಲು ಮುಂದಾಗಿದ್ದಾರೆ. ಈ ನಡುವೆ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಹೊಸ ಮನವಿಯನ್ನ ಸರ್ಕಾರಕ್ಕೆ ಮಾಡಿದ್ದಾರೆ. ಸದ್ಯ ಶಾಲೆಗಳಿಗೆ ಬರ್ತೀರೊ ಕರೆಂಟ್ ಬಿಲ್ ಹಾಗೂ ವಾಟರ್ ಬಿಲ್ ಕಟ್ಟಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಇದೆ. ಶಿಕ್ಷಕರು ಹಾಗೂ ಎಸ್ ಡಿ ಎಮ್ ಸಿ ಕರೆಂಟ್ ಬಿಲ್ ಕಟ್ಟಲು ಪರದಾಡುವಂತಾಗಿದೆ. ಅದರಲ್ಲೂ ಬೆಂಗಳೂರಿನಂತ ಸಿಟಿಯಲ್ಲಿ ಎರಡರಿಂದ ಮೂರು ಸಾವಿರದವರೆಗೂ ಕರೆಂಟ್ ಬಿಲ್ ಬರುತ್ತೆ. ಜೊತೆಗೆ ವಾಟರ್ ಬಿಲ್ ಕೂಡಾ ಸಾಕಷ್ಟು ಹೊರೆಯಾಗ್ತೀದೆ. ಸರ್ಕಾರ ಶಾಲೆಗಳಿಗೆ ನೀಡುವ ಅಭಿವೃದ್ಧಿ ನಿರ್ವಹಣೆಯ ಅನುದಾನ ಯಾವುದಕ್ಕೂ ಸಾಕಾಗೋದಿಲ್ಲ. ಹೀಗಾಗಿ ಗೃಹ ಜ್ಯೊತಿ ಯೋಜನೆಯನ್ನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೂ ವಿಸ್ತರಿಸುವಂತೆ ಡಿಮ್ಯಾಂಡ್ ಮಾಡಿವೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಪಾಲಿಕೆಯ ಮಾಜಿ ಕಾರ್ಪೋರೇಟರ್ ನಾಗರಾಜ್ ಶಾಲೆಗಳಿಗೂ ಉಚಿತ ವಿದ್ಯುತ್ ಭಾಗ್ಯ ವಿಸ್ತರಣೆ ಮಾಡುವಂತೆ ಮನವಿಯನ್ನ ಕೂಡಾ ಮಾಡಿದ್ದಾರೆ.

ಇದನ್ನೂ ಓದಿ: Gruha Jyothi Scheme: ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹಜ್ಯೋತಿ ಪ್ರಯೋಜನ ಪಡೆಯಬಹುದು: ಬೆಸ್ಕಾಂ

ಶಾಲೆಗಳಲ್ಲಿ ಕರೆಂಟ್ ಹಾಗೂ ವಾಟರ್ ಬಿಲ್ ಹೊರೆ ಹೆಚ್ಚಾಗಿದ್ದು ಇದನ್ನ ಉಚಿತ ಮಾಡುವಂತೆ ಮನವಿ ಹಿನ್ನಲೆ ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಲೆಗಳಿಗೆ ಎಷ್ಟು ವಿದ್ಯುತ್ ಬಿಲ್ ಬರ್ತಿದೆ ಎಷ್ಟು ಕೋಟಿ ಬೇಕಿದೆ ಈ ಎಲ್ಲ ಮಾಹಿತಿ ಪಡೆದು ಸಿಎಂ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಮುಂದಾಗ್ತೀವಿ ಅಂತಾ ಕೂಡಾ ಹೇಳ್ತಿದ್ದಾರೆ.

ಒಟ್ನಲ್ಲಿ ಸರ್ಕಾರಕ್ಕೆ ಹೊಸ ಗ್ಯಾರಂಟಿಗಳ ಆರ್ಥಿಕ ಹಣ ಕೃಢಿಕರಣದ ತಲೆ ಬಿಸಿ ಒಂದೆಡೆಯಾದ್ರೆ ಮತ್ತೊಂದೆಡೆ ಉಚಿತ ಭಾಗ್ಯಗಳ ಜಾರಿ ಬಗ್ಗೆ ಟೆನ್ಷನ್ ಮಾಡಿಕೊಂಡಿದೆ. ಇದರ ನಡುವೆ ಈಗ ಶಾಲೆಗಳಿಗೂ ಉಚಿತ್ ಕರೆಂಟ್ ಭಾಗ್ಯ ವಿಸ್ತರಣೆಯ ಡಿಮ್ಯಾಂಡ್ ಕೇಳಿ ಬಂದಿದ್ದು ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತೆ ಅಂತಾ ಕಾದು ನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ