ಬೆಂಗಳೂರು: 545 ಪಿಎಸ್ಐ ಪರೀಕ್ಷಾ ಅಕ್ರಮ ನೇಮಕಾತಿ(PSI Recruitment Scam) ಪ್ರಕರಣಕ್ಕೆ ಸಂಬಂಧಿಸಿ ಮಹತ್ತರ ಬೆಳವಣಿಗೆಗಳು ಆಗುತ್ತಿವೆ. ಸದ್ಯ ಸಿಐಡಿ(CID) ಅಧಿಕಾರಿಗಳ ತನಿಖೆ ಚುರುಕುಗೊಂಡಿದ್ದು ಪ್ರಮುಖ 8 ಆರೋಪಿಗಳನ್ನ ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಕಿಂಗ್ ಪಿನ್ R.D ಪಾಟೀಲ್ ಹಣ ನೀಡಿ ಡೀಲ್ ಖುದುರಿಸಿದ್ದ ಅಭ್ಯರ್ಥಿಗಳು ಸೇರಿದಂತೆ ಶರಣಬಸವೇಶ್ವರ ಆರ್ಟ್ಸ್, ಸೈನ್ಸ್ ಕಾಮರ್ಸ್ ಹಾಗೂ ಎಂ.ಎಸ್ ಇರಾನಿ ಕಾಲೇಜಿನಲ್ಲಿ ಎಕ್ಸಾಂ ಬರೆದಿದ್ದ ಅಭ್ಯರ್ಥಿಗಳನ್ನು ಸಿಐಡಿ ವಶಕ್ಕೆ ಪಡೆಯಲು ಮುಂದಾಗಿದೆ. ಆರೋಪಿಗಳಾದ ಕಲ್ಲಪ್ಪ, ಸಿದ್ದುಗೌಡ, ಈರಪ್ಪ, ಸೋಮನಾಥ, ರವಿರಾಜ, ಶ್ರೀಶೈಲ, ಭಗವಂತ್ ರಾಯ್ ನನ್ನ ವಶಕ್ಕೆ ಪಡೆಯಲು ಸಿಐಡಿ ಸಿದ್ಧತೆ ಮಾಡಿಕೊಂಡಿದೆ.
ಸಿದ್ಧುಗೌಡ – ಆರ್ ಡಿ ಪಾಟೀಲ್ ಸಂಬಂಧಿ ಹಾಗೂ ಹೆಲ್ತ್ ಡಿಪಾರ್ಟ್‌ಮೆಂಟ್ ನಲ್ಲಿ ಎಫ್ಡಿಎಯಾಗಿ ಕೆಲಸ ಮಾಡುತ್ತಿದ್ದಾರೆ.
ಕಲ್ಲಪ್ಪ -ಪೊಲೀಸ್ ಕಾನ್ಸ್ ಟೇಬಲ್
ಸೋಮನಾಥ -ವ್ಯಸವಾಯ ಮಾಡಿಕೊಂಡಿದ್ದಾರೆ
ವಿಜಯ್ ಕುಮಾರ್-ಖಾಸಗಿ ಕಂಪೆನಿಯಲ್ಲಿ ಕೆಲಸ
ರವಿರಾಜ -ಮೊದಲನೇ ರ್ಯಾಂಕ್ ಪಡೆದಿರುವ ಆರೋಪಿ
ಶ್ರೀಶೈಲ -ಪದವೀಧರ, ಪಿಎಸ್ ಐ ಹುದ್ದೆ ಡೀಲ್ ಮಾಡಿದ್ದ
ಭಗವಂತರಾಯ್ -ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ
ಈರಪ್ಪ -ಅಡುಗೆಭಟ್ಟನಾಗಿ ಕೆಲಸಮಾಡಿಕೊಂಡಿದ್ದಾರೆ. ಈ 8 ಜನರಿಂದ 6 ಕೋಟಿಯಷ್ಟು ಹಣವನ್ನ R.D ಪಾಟೀಲ್ ಸಂಗ್ರಹಿಸಿದ್ದಾಗಿ ತನಿಖೆ ವೇಳೆ ಮಾಹಿತಿ ಬಹಿರಂಗವಾಗಿದೆ. R.D ಪಾಟೀಲ್ ಎಲ್ಲರ ಬಳಿಯೂ ಹಣ ಪಡೆದು ಬ್ಲೂ ಟೂಥ್ ಡಿವೈಸ್ ನೀಡಿದ್ದ. ಹೀಗಾಗಿ ಸಿಐಡಿ ಅಧಿಕಾರಿಗಳು ಈ 8 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.