ಬೆಂಗಳೂರು: ಜಗತ್ತಿನಾದ್ಯಂತ ಕೊರೊನಾ (Covid) ಸೋಂಕು ಮತ್ತೆ ವ್ಯಾಪಕವಾಗಿ ಹಬ್ಬುತ್ತಿದ್ದು, ಇದು ಭಾರತಕ್ಕೂ ಒಕ್ಕರಿಸಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ (Karnataka Government) ಕೂಡ ಇಂದು (ಡಿ. 26) ರಂದು ಹೊಸವರ್ಷಾಚರಣೆಗೆ (New Year) ಕೊರೊನಾ ಹೊಸ ರೂಲ್ಸ್ ಜಾರಿಗೆ ಮಾಡಿದೆ. ಹೊಟೇಲ್ (Hotel), ಬಾರ್ (Bar), ರೆಸ್ಟೋರೆಂಟ್ (Restorent) ಮತ್ತು ಪಬ್ಗಳಲ್ಲಿ (PUB) ಮಾಸ್ಕ್, ಸೆನಿಟೈಸ್ ಮತ್ತು ಲಸಿಕೆ ಕಡ್ಡಾಯಗೊಳಿಸಿದೆ. ಸರ್ಕಾರದ ಆದೇಶ ಸ್ವಾಗತಿಸುತ್ತೇವೆ. ಕೊರೊನಾ ವಿಚಾರವಾಗಿ ಸರ್ಕಾರದ ನಿಯಮ ಪಾಲಿಸುತ್ತೇವೆ ಎಂದು ಹೊಟೇಲ್ ಮಾಲಿಕರು ಹೇಳಿದ್ದಾರೆ.
ಟಿವಿ9 ನೊಂದಿಗೆ ಮಾತನಾಡಿದ ಅವರು ನಮ್ಮ ಎಲ್ಲ ಸಿಬ್ಬಂದಿಗೂ ಎರಡೂ ಡೋಸ್ ಲಸಿಕೆ ಆಗಿದೆ. 3ನೇ ಡೋಸ್ ಲಸಿಕೆ ಪಡೆಯಲು ಅವಕಾಶ ಕಲ್ಪಿಸಬೇಕು. ಹೋಟೆಲ್ಗಳಲ್ಲಿ ಎಲ್ಲಾ ಸಿಬ್ಬಂದಿ ಮಾಸ್ಕ್ ಧರಿಸಲಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಿ ಕೆಲಸ ಮಾಡುತ್ತೇವೆ ಎಂದರು.
ಇನ್ನೂ ವಿದ್ಯಾರ್ಥಿಗಳ ಪೋಷಕರು ಕೂಡ ಸರ್ಕಾರದ ನಿಯಮವನ್ನು ಸ್ವಾಗತಿಸಿದ್ದಾರೆ. ತರಗತಿಯಲ್ಲಿ ಕೂರುವಾಗ ಮಾಸ್ಕ್ ಸಮಸ್ಯೆ ಆಗಬಹುದು. ಆದರೆ ಜೀವಕ್ಕಿಂತ ದೊಡ್ಡದು ಯಾವುದು ಇಲ್ಲ. ಮಾಸ್ಕ್ ಕಿರಿಕಿರಿ ಆದರೂ ಇಂತಹ ಸಮಯದಲ್ಲಿ ಅತ್ಯಗತ್ಯ. ನಮ್ಮ ಜೀವ ರಕ್ಷಿಸಿಕೊಳ್ಳಲು ಮಾಸ್ಕ್ ಬೇಕೆಬೇಕು.
ರಾಜ್ಯ ಸರ್ಕಾರ ಹೊಸ ವರ್ಷಾಚರಣೆಗೆ, ಚಿತ್ರಮಂದಿರಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ. ಸರ್ಕಾರದ ಈ ನಿರ್ಧಾರವನ್ನು ಬೆಂಗಳೂರಿನ ಯುವ ಜನತೆ ಸ್ವಾಗತಿಸಿದ್ದು. ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆವರೆಗೂ ಪಾರ್ಟಿ ಓಕೆ. ಮಾಸ್ಕ್ ಕಡ್ಡಾಯ ನಮ್ಮ ಆರೋಗ್ಯದ ದೃಷ್ಟಿ ಒಳ್ಳೆಯ ನಿರ್ಧಾರವಾಗಿದೆ ಎಂದು ಯುವ ಜನತೆ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ