ರಾಜ್ಯ ಪೊಲೀಸ್ ಇಲಾಖೆಯ ಸಬ್ ಡಿವಿಷನ್ನಲ್ಲಿ ಮಹತ್ವದ ಬದಲಾವಣೆ; ಠಾಣೆಗಳನ್ನು ಹೆಚ್ಚಿಸಿ ಸರ್ಕಾರ ಆದೇಶ
ಪಶ್ಚಿಮ ಸಂಚಾರ ಉಪವಿಭಾಗದ ಜತೆಗೆ ವಿಜಯನಗರ ಉಪವಿಭಾಗ ಸೇರ್ಪಡೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಆಗ್ನೇಯ ಸಬ್ಡಿವಿಷನ್ ಕೂಡ ವಿಂಗಡಣೆ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಸಬ್ ಡಿವಿಷನ್ನಲ್ಲಿ(State Police Department Sub Division) ಮಹತ್ವದ ಬದಲಾವಣೆ ಮಾಡಲಾಗಿದೆ. ಸಂಚಾರ, ಕಾನೂನು ಸುವ್ಯವಸ್ಥೆ ಠಾಣೆಗಳ ಸಬ್ ಡಿವಿಷನ್ಗಳನ್ನು ಹೆಚ್ಚಳ ಮಾಡಲಾಗಿದೆ. ಪೊಲೀಸ್ ಮಹಾ ನಿರ್ದೇಶಕರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಸದ್ಯ ಈಗ ಸಬ್ ಡಿವಿಷನ್ನಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಪಶ್ಚಿಮ ಸಂಚಾರ ಸಬ್ ಡಿವಿಷನ್ ಮಾರ್ಪಡಿಸಿ ಆದೇಶ ನೀಡಿದೆ. ಪಶ್ಚಿಮ ಸಂಚಾರ ಉಪವಿಭಾಗದ ಜತೆಗೆ ವಿಜಯನಗರ ಉಪವಿಭಾಗ ಸೇರ್ಪಡೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಆಗ್ನೇಯ ಸಬ್ಡಿವಿಷನ್ ಕೂಡ ವಿಂಗಡಣೆ ಮಾಡಲಾಗಿದೆ. ಆಗ್ನೇಯ ಸಬ್ ಡಿವಿಷನ್ ಜತೆಗೆ ಆಡುಗೋಡಿ ಸಬ್ ಡಿವಿಷನ್ ರಚಿಸಲಾಗಿದೆ. ಹೊಸದಾಗಿ ಹೆಚ್ಎಸ್ಆರ್ ಲೇಔಟ್ ಸಬ್ ಡಿವಿಷನ್ ಸೇರ್ಪಡೆ ಮಾಡಲಾಗಿದೆ. ಉತ್ತರ ವಿಭಾಗದ ಯಶವಂತಪುರ ಸಬ್ ಡಿವಿಷನ್ ವಿಂಗಡಿಸಿ ಯಶವಂತಪುರ, ಪೀಣ್ಯ ಸಬ್ ಡಿವಿಷನ್ಗಳಾಗಿ ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಜಡೆ ಜಡೆ ಜಗಳ: ನಡು ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿನಿಯರ ಬಡೆದಾಟ; ವಿಡಿಯೋ ವೈರಲ್
ಪಶ್ಚಿಮ ವಿಭಾಗದ ಕೆಂಗೇರಿ ಗೇಟ್, ವಿಜಯನಗರ ಸಬ್ಡಿವಿಷನ್ ಮಾರ್ಪಾಡು ಮಾಡಲಾಗಿದೆ. ಹೊಸದಾಗಿ ಕೆಂಗೇರಿ ಸಬ್ಡಿವಿಷನ್ ಸೇರ್ಪಡೆ ಮಾಡಲಾಗಿದೆ. ಮೈಸೂರಿನ ನರಸಿಂಹರಾಜ, ಕೃಷ್ಣರಾಜ ಸಬ್ ಡಿವಿಷನ್ನಲ್ಲೂ ಮಾರ್ಪಾಡು ಮಾಡಲಾಗಿದೆ. ಹೊಸದಾಗಿ ವಿಜಯನಗರ ಸಬ್ ಡಿವಿಷನ್ ಸೇರ್ಪಡೆ ಮಾಡಿ ಆದೇಶಿಸಲಾಗಿದೆ. ಇನ್ನು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಸಬ್ ಡಿವಿಷನ್ನಲ್ಲೂ ಬದಲಾವಣೆ ಮಾಡಲಾಗಿದೆ. ಶಿವಮೊಗ್ಗ ಸಬ್ ಡಿವಿಷನ್ ಎ, ಬಿ ಸಬ್ ಡಿವಿಷನ್ ಆಗಿ ಮಾರ್ಪಾಡು ಮಾಡಲಾಗಿದೆ. ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರ ಸಬ್ ಡಿವಿಷನ್ನಲ್ಲೂ ಬದಲಾವಣೆ ಮಾಡಲಾಗಿದ್ದು ಜಿಲ್ಲೆಯಲ್ಲಿ ಹೊಸದಾಗಿ ಚನ್ನರಾಯಪಟ್ಟಣ ಸಬ್ ಡಿವಿಷನ್ ಸೇರಿಸಲಾಗಿದೆ. ವಿಜಯಪುರ ಜಿಲ್ಲೆ 3 ಸಬ್ ಡಿವಿಷನ್ಗಳಿಂದ 4 ಸಬ್ ಡಿವಿಷನ್ಗೆ ಏರಿಸಲಾಗಿದೆ. ಹೊಸದಾಗಿ ವಿಜಯಪುರ ಗ್ರಾಮಾಂತರ ಸಬ್ ಡಿವಿಷನ್ ಸೇರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಬ್ ಡಿವಿಷನ್ ಕೂಡ ಮಾರ್ಪಟ್ಟಿದ್ದು ಹೊಸದಾಗಿ ಬೆಳ್ತಂಗಡಿ ಸಬ್ ಡಿವಿಷನ್ ಸೇರ್ಪಡೆ ಮಾಡಲಾಗಿದೆ. ಸಬ್ ಡಿವಿಷನ್ಗಳ ಪೊಲೀಸ್ ಠಾಣೆಗಳನ್ನು ಅದಲು ಬದಲು ಮಾಡಿ ಸರ್ಕಾರ ಆದೇಶಿಸಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:07 am, Tue, 27 December 22