Bengaluru: ಪ್ರತಿಷ್ಠಿತ ಹೋಟೆಲ್​ನಲ್ಲಿ ಉದ್ಯಮಿಗಳ ಮಕ್ಕಳ ಹೈಡ್ರಾಮ; ದರ್ಶನ್ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ

|

Updated on: Jun 10, 2023 | 8:16 PM

ಬೆಂಗಳೂರಿನ ಹೆಬ್ಬಾಳ ರಸ್ತೆಯಲ್ಲಿರುವ ಪ್ರತಿಷ್ಠಿತ ಫೋರ್ ಸೀನ್ ಹೋಟೆಲ್​ನಲ್ಲಿ ಉದ್ಯಮಿಗಳ ಮಕ್ಕಳಿಬ್ಬರ ನಡುವೆ ಬೆಳಗ್ಗಿನ ಜಾವ ಗಲಾಟೆಯಾಗಿದ್ದು, ಘಟನೆಯಲ್ಲಿ ದರ್ಶನ್ ಎಂಬಾತನ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ.

Bengaluru: ಪ್ರತಿಷ್ಠಿತ ಹೋಟೆಲ್​ನಲ್ಲಿ ಉದ್ಯಮಿಗಳ ಮಕ್ಕಳ ಹೈಡ್ರಾಮ; ದರ್ಶನ್ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ನಲ್ಲಿ ಉದ್ಯಮಿಗಳ ಮಕ್ಕಳ ನಡುವೆ ಗಲಾಟೆ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಉದ್ಯಮಿಗಳ ಮಕ್ಕಳಿಬ್ಬರ ನಡುವೆ ಬೆಳಗ್ಗಿನ ಜಾವ ಜಗಳ ನಡೆದು ಓರ್ವನ ತಲೆಗೆ ಬಿಯರ್ ಬಾಟಲ್​ನಿಂದ ಹಲ್ಲೆ (Assault) ನಡೆಸಿದ ಘಟನೆ ಬೆಂಗಳೂರು (Bengaluru) ನಗರದ ಹೆಬ್ಬಾಳ ರಸ್ತೆಯಲ್ಲಿರುವ ಪ್ರತಿಷ್ಠಿತ ಫೋರ್ ಸೀನ್ ಹೋಟೆಲ್​ನಲ್ಲಿ (Four Sean Hotel) ನಡೆದಿದೆ. ದರ್ಶನ್ ಮತ್ತು ಆಗಮ್ ವೇದಾಂತ್ ದುಗಾರ್ ಮಧ್ಯೆ ಗಲಾಟೆ ನಡೆದಿದ್ದು, ದರ್ಶನ್ ತಲೆಗೆ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಬ್ಬಾಳ ರಸ್ತೆಯಲ್ಲಿರುವ ಪ್ರತಿಷ್ಠಿತ ಫೋರ್ ಸೀನ್ ಹೋಟೆಲ್​ನಲ್ಲಿ ಬೆಳಗಿನ ಜಾವ 2.30ಕ್ಕೆ ದರ್ಶನ್ ಮತ್ತು ಆಗಮ್ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ದರ್ಶನ್ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಆಗಮ್ ಮುಂಬೈಗೆ ಪರಾರಿಯಾಗಿದ್ದಾನೆ. ಇತ್ತ ಗಾಯಗೊಂಡ ದರ್ಶನ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಪತ್ನಿ ಮಕ್ಕಳ ಕಗ್ಗೋಲೆ ಪ್ರಕರಣ: ಆರೋಪಿ ಪತಿಗೆ ವಿಧಿಸಿದ ಮರಣದಂಡನೆ ಶಿಕ್ಷೆ ಎತ್ತಿ ಹಿಡಿದ ಧಾರವಾಡ ಹೈಕೋರ್ಟ್

ದರ್ಶನ್ ಉದ್ಯಮಿ ವೈಷ್ಣವಿ ಬಿಲ್ಡರ್ಸ್ ಗೋವಿಂದರಾಜು ಅವರ ಪುತ್ರನಾಗಿದ್ದು, ಆಗಮ್ ವೇದಾಂತ್ ದುಗಾರ್ VAR ಬಿಲ್ಡರ್ಸ್ ಸಂಜಯ್ ದುಗಾರ್ ಅವರ ಮಗನಾಗಿದ್ದಾನೆ. ಇವರಿಬ್ಬರು ನಿನ್ನೆ ಮದುವೆ ಕಾರ್ಯಕ್ರಮಕ್ಕೆ ಫೋರ್ ಸೀಸನ್ ಹೋಟೆಲ್​ಗೆ ಆಗಮಿಸಿದ್ದರು. ಈ ವೇಳೆ ನಡೆದ ಗಲಾಟೆ ಇದಾಗಿದೆ. ಪ್ರಕರಣ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಾಗಾದ್ರೆ ಉದ್ಯಮಿ ಮಕ್ಕಳ ಮಧ್ಯೆ ಗಲಾಟೆ ಆಗಿದ್ದೇಕೆ?

ವೇದಾಂತ್ ದುಗಾರ್ ಮತ್ತು ದರ್ಶನ್ ಇಬ್ಬರು ಸ್ನೇಹಿತರು. ಕಳೆದ ಕೆಲ ದಿನದ ಹಿಂದೆ ರೆಸ್ಟೋರೆಂಟ್​ನಲ್ಲಿ ಎದುರು ಬದುರಾಗಿದ್ದರು. ಈ ವೇಳೆ ದರ್ಶನ್ ವೇದಾಂತ್ ದುಗಾರ್​ನನ್ನ ಮಾತನಾಡಿಸದೇ ಹೊರಟಿದ್ದ. ಫೋರ್ ಸೀಸನ್ ಹೋಟೆಲ್​ನಲ್ಲಿ ಸಿಕ್ಕಾಗ ಅದೇ ವಿಚಾರವಾಗಿ ಕಿರಿಕ್ ನಡೆದಿದೆ. ಎಲ್ಲರೂ ನನ್ನನ್ನ ಮಾತನಾಡಿಸುತ್ತಾರೆ ನೀನ್ಯಾಕೊ ಮಾತನಾಡಿಸಲ್ಲ ಎಂದು ಆಗಮ್ ದುಗಾರ್ ಪ್ರಶ್ನಿಸಿದ್ದಾನೆ. ಈ ವೇಳೆ ದರ್ಶನ್ ಅದು ನನ್ನಿಷ್ಟ ಎಂದು ಎದುರುತ್ತರಿಸಿದ್ದಾನೆ. ಇದರಿಂದ ಕುಪಿತಗೊಂಡ ಆಗಮ್, ಬಿಯರ್ ಬಾಟಲ್​ನಿಂದ ಹಲ್ಲೆ ನಡೆಸಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ