
ಬೆಂಗಳೂರು, ಅ.15: ಬೆಂಗಳೂರಿನ ಟ್ರಾಫಿಕ್ ಬಗ್ಗೆ ಉದ್ಯಮಿಗಳು ರೊಚ್ಚಿಗೆದ್ದಂತೆ ಕಾಣುತ್ತಿವೆ. ಬೆಂಗಳೂರಿನ ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಉದ್ಯಮಿಗಳೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಇದೀಗ ಪೀಕ್ XV ಪಾರ್ಟ್‌ನರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದನ್ (Rajan Anandan) ಅವರು ಎಕ್ಸ್ ಖಾತೆಯಲ್ಲಿ ಬೆಂಗಳೂರು ಟ್ರಾಫಿಕ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಕಾರಣವಾಗಿದೆ. ನಗರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಲು 2.5 ಗಂಟೆ, ಅದೇ ಬೆಂಗಳೂರಿನಿಂದ ದೆಹಲಿಗೆ ವಿಮಾನ ಪ್ರಯಾಣದ ಸಮಯ 2.5 ಗಂಟೆ ತಗಲುತ್ತದೆ ಎಂದು ಎಕ್ಸ್ನಲ್ಲಿ ರಾಜನ್ ಆನಂದನ್ ಟ್ವೀಟ್ ಮಾಡಿದ್ದಾರೆ.
ಇದು ಬೆಂಗಳೂರಿಗರ ಪ್ರತಿದಿನದ ಸಮಸ್ಯೆಯಾಗಿದೆ. ಟ್ರಾಫಿಕ್ ಕಿರಿಕಿರಿ ಬೆಂಗಳೂರಿಗರಿಗೆ ತಪಿದ್ದಲ್ಲ, ಎಷ್ಟೋ ಪೋಸ್ಟ್ ಮಾಡಿದ್ರು ಇದು ಸರಿಯಾಗುವುದಿಲ್ಲ ಎಂದು ಅನೇಕರು ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ. ಲಕ್ಷಾಂತರ ಬೆಂಗಳೂರಿಗರು ಈ ಟ್ರಾಫಿಕ್ನಿಂದ ಹತಾಶೆಯನ್ನು ಪ್ರತಿದಿನ ಹೊರ ಹಾಕುತ್ತಾರೆ. ರಾಜನ್ ಆನಂದನ್ ಅವರ ಈ ಪೋಸ್ಟ್ಗೆ ಕೆಲವರು ಗಂಭೀರವಾಗಿ ಕಮೆಂಟ್ ಮಾಡಿದ್ರೆ, ಇನ್ನು ಕೆಲವರು ಹಾಸ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರ ಖಂಡಿತವಾಗಿಯೂ ಇದೊಂದು ಚಿಂತೆ ಮಾಡಬೇಕಾದ ಅಂಶ, ಬಹುಶಃ ಶೀಘ್ರದಲ್ಲೇ ಏರ್-ಟ್ಯಾಕ್ಸಿಗಳು ಬರಬಹುದು, ಅದಕ್ಕೂ ಮೊದಲು ಮೆಟ್ರೋ ರೈಲುಗಳನ್ನು ಎಲ್ಲ ಕಡೆ ಬರುವಂತೆ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ.
2.5 hours to get to the Bangalore airport from the city. Flight time from Bangalore to Delhi is 2.5 hours.
— Rajan Anandan (@RajanAnandan) October 14, 2025
ಮತ್ತೊಬ್ಬ ಬಳಕೆದಾರ ರಾಜನ್ ಆನಂದನ್ ಅವರ ಪೋಸ್ಟ್ಗೆ ಹಾಸ್ಯವಾಗಿ ಕೆಮಂಟ್ ಮಾಡಿದ್ದಾರೆ. ಇದು ಉದ್ಯಮಿಗಳಿಗೆ ಪೀಕ್ ಯಶಸ್ಸು ನೀಡುತ್ತದೆ. ಟ್ರಾಫಿಕ್ ಯಾತನೆಗಳನ್ನು ಕಡಿಮೆ ಮಾಡಲು ಪೀಕ್ ವ್ಯವಹಾರ ಮಾದರಿಯನ್ನು ತರುವುದು ಒಳ್ಳೆಯದು, ಇದು ಬೆಂಗಳೂರಿನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಒಮ್ಮೆ ಪೀಕ್ ಜೀವನವನ್ನು ನೀಡುತ್ತದೆ, ಇವರ ಪೋಸ್ಟ್ ಹಾಸ್ಯಾಸ್ಪದವಾಗಿದೆ. ಹಾಗಾದರೆ ನಮಗೆ ಜಯನಗರದಿಂದ T2 ಗೆ ಸಂಪರ್ಕ ವಿಮಾನ ನೀಡಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೆಹಲಿ ವಿಮಾನ ನಿಲ್ದಾಣದಂತಹ ಏರೋಸಿಟಿ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕಾರಿನಲ್ಲಿ ಲಗೇಜ್ಗೆ ಅವಕಾಶ ಇಲ್ಲ, ದಂಪತಿಗೆ ಅವ್ಯಾಚ ಪದಗಳಿಂದ ನಿಂದಿಸಿದ ಕ್ಯಾಬ್ ಡ್ರೈವರ್
ಸ್ಟಾರ್ಟ್ಅಪ್‌ಗಳು ಒಟ್ಟಾಗಿ ಈ ಸಮಸ್ಯೆಯನ್ನು ಪರಿಹರಿಸಬೇಕು. ಒಂದು ಕಾರ್ಯಪಡೆ ರಚಿಸಿ ಬೆಂಗಳೂರಿನ ಸಂಚಾರ ಸಮಸ್ಯೆಗಳನ್ನು ನಿಭಾಯಿಸೋಣ, ಅದಕ್ಕಾಗಿ ಶ್ರಮ ಮತ್ತು ಸಮಯ ನೀಡಬೇಕಿದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನಾನು ವಿಮಾನ ನಿಲ್ದಾಣದಿಂದ ಕೋರಮಂಗಲಕ್ಕೆ ಹೋಗಲು ನನಗೆ 45 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿಲ್ಲ, ಮೊದಲು ನಿಮ್ಮ ಪ್ರಯಾಣ ಸಮಯವನ್ನು ನಿಗದಿ ಮಾಡಿಕೊಳ್ಳಿ, ಆ ಸಮಯಕ್ಕೆ ಹೊರಡಿ ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 am, Wed, 15 October 25